Brahmagantu: ದೀಪಾ ಮುಚ್ಚಿಟ್ಟ ಸೀಕ್ರೇಟ್​ ದುರ್ಗಾ ಮುಂದೆ ಬಯಲಾಗೋಯ್ತು! ಮುಂದಾದದ್ದೇ ಬೇರೆ

Published : Nov 08, 2025, 11:53 AM IST

ಬ್ರಹ್ಮಗಂಟು ಮತ್ತು ನಾ ನಿನ್ನ ಬಿಡಲಾರೆ ಸೀರಿಯಲ್‌ಗಳ ಮಹಾಸಂಗಮದಲ್ಲಿ, ದೀಪಾಳೇ ದಿಶಾ ಎನ್ನುವ ಸತ್ಯ ಆಕಸ್ಮಿಕವಾಗಿ ಬಯಲಾಗಿದೆ. ದಿಶಾಳ ಗೆಟಪ್‌ನಲ್ಲಿದ್ದ ದೀಪಾ ತನ್ನ ಸ್ಲಿಪ್ಪರ್‌ನಿಂದಾಗಿ ದುರ್ಗಾಳಿಗೆ ಸಿಕ್ಕಿಬಿದ್ದಿದ್ದಾಳೆ. ಈ ಸತ್ಯವನ್ನು ಕೇಳಿ ದುರ್ಗಾ ಆಘಾತಕ್ಕೊಳಗಾಗಿದ್ದಾನೆ. ಮುಂದೇನು?  

PREV
17
ಸೀರಿಯಲ್​ಗಳ ಮಹಾಸಂಗಮ

ಸದ್ಯ ಬ್ರಹ್ಮಗಂಟು ಮತ್ತು ನಾ ನಿನ್ನ ಬಿಡಲಾರೆ ಸೀರಿಯಲ್​ಗಳ ಮಹಾಸಂಗಮ ನಡೆಯುತ್ತಿದೆ. ದೀಪಾ ಮನೆಗೆ ದುರ್ಗಾ-ಶರತ್​ ಎಲ್ಲರೂ ಬಂದಿದ್ದಾರೆ. ಈ ಸಮಯದಲ್ಲಿ ವಿಚಿತ್ರವೊಂದು ನಡೆದೇ ಹೋಗಿದೆ.

27
ಗುಟ್ಟು ಗೊತ್ತಿಲ್ಲ

ದೀಪಾಳೇ ದಿಶಾ ಎನ್ನುವ ಗುಟ್ಟು ಇನ್ನು ಯಾರಿಗೂ ಗೊತ್ತಿಲ್ಲ. ಇದೊಂದು ರೀತಿಯಲ್ಲಿ ವಿಚಿತ್ರ ಎನಿಸ್ತಾ ಇದ್ದರೂ ಸೀರಿಯಲ್​ ಅನ್ನು ಸೀರಿಯಲ್​ ಆಗಿಯೇ ನೋಡಬೇಕು ಎನ್ನುವ ಕಾರಣಕ್ಕೆ ವೀಕ್ಷಕರು ಅದನ್ನು ಅರಗಿಸಿಕೊಂಡಿದ್ದಾರೆ.

37
ದಿಶಾಗೆ ಆಹ್ವಾನ

ಇದೀಗ ದುರ್ಗಾ ಮನೆಯಲ್ಲಿ ನಡೆಯುತ್ತಿರುವ ಪಾರ್ಟಿಗೆ ದಿಶಾಳನ್ನು ಆಹ್ವಾನಿಸಲಾಗಿದೆ. ಆಹ್ವಾನವನ್ನು ದೀಪಾ ಒಪ್ಪಿಕೊಂಡರೂ, ದಿಶಾ ಬರುವಾಗ ದೀಪಾ ಮಾಯವಾಗಬೇಕಲ್ಲ. ಅದಕ್ಕಾಗಿಯೇ ಕೋಣೆಗೆ ಹೋಗಿ ದಿಶಾ ಗೆಟಪ್​ ಚೇಂಜ್​ ಮಾಡಿದ್ದಾಳೆ.

47
ದೀಪಾಳ ಹುಡುಕಿ ದುರ್ಗಾ

ದೀಪಾ ಎಲ್ಲಿ ಹೋದಳು ಎಂದು ದುರ್ಗಾ ಹುಡುಕುತ್ತಿದ್ದಾಗ, ಹಿತಾ ಆ ಕೋಣೆಯೊಳಗೆ ದೀಪಾ ಹೋಗಿದ್ದನ್ನು ಹೇಳಿದ್ದಾಳೆ. ದೀಪಾಳನ್ನು ಹುಡುಕಿ ಹೊರಟಾಗ ಅಲ್ಲಿಂದ ದಿಶಾ ಬಂದಿರೋದನ್ನು ನೋಡಿ ದುರ್ಗಾಗೆ ಶಾಕ್​ ಆಗಿದೆ.

57
ದೀಪಾ ಸ್ಲಿಪ್ಪರ್​

ಅವಳಿನ್ನೂ ದಿಶಾನ್ನ ನೋಡಿರುವುದಿಲ್ಲ. ಇವಳು ಯಾರು ಎಂದು ಸಂದೇಹ ಪಟ್ಟುಕೊಳ್ಳುವಷ್ಟರಲ್ಲಿಯೇ ದೀಪಾ ತನ್ನ ಸ್ಲಿಪ್ಪರ್​ ನೋಡಿಕೊಂಡಿದ್ದಾಳೆ. ಆಗ ಅವಳು, ಅರೆ ದೀಪಾ ಹಾಕಿರುವ ಸ್ಲಿಪ್ಪರ್​ ಹಾಕಿಕೊಂಡು ಬಿಟ್ಟಿದ್ದೇನೆ ಎಂದಿದ್ದಾಳೆ.

67
ದೀಪಾಳಿಂದ ಗುಟ್ಟು ರಟ್ಟು

ಸೀರಿಯಲ್​ಗಳಲ್ಲಿ ಮನದ ಮಾತುಗಳನ್ನು ದೊಡ್ಡದಾಗಿ ಮಾತನಾಡಿಕೊಳ್ಳುವ ಅನಿವಾರ್ಯವಿದೆ. ಅದೇ ರೀತಿ ದೀಪಾ ಕೂಡ ದೊಡ್ಡದಾಗಿಯೇ ಹೇಳಿದ್ದಾಳೆ. ಈ ಸ್ಲಿಪ್ಪರ್​ ಏನಾದ್ರೂ ಯಾರಾದ್ರೂ ನೋಡಿದ್ರೆ ದೀಪಾ ಮತ್ತು ದಿಶಾ ಒಬ್ಬಳೇ ಎನ್ನೋದು ಗೊತ್ತಾಗಿ ಬಿಡುತ್ತೆ ಎಂದಿದ್ದಾಳೆ.

77
ದುರ್ಗಾಗೆ ಶಾಕ್​

ಇದನ್ನು ಕೇಳಿ ದುರ್ಗಾಗೆ ಶಾಕ್​ ಆಗಿದೆ. ಇಬ್ಬರೂ ಒಬ್ಬಳೇ ಎನ್ನುವ ಸತ್ಯವನ್ನು ಚಿರುಗೆ ಹೇಳಲೇಬೇಕು ಎಂದು ಹೊರಟಾಗಲೇ ಶರತ್​ ಬಂದು ಆಕೆಯ ಬಾಯಿ ಮುಚ್ಚಿಸಿದ್ದಾನೆ. ಅಲ್ಲಿಗೆ ಶರತ್​ಗೂ ವಿಷಯ ಗೊತ್ತಿದೆ ಎಂದಾಯ್ತು. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.

ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ ಮಾಡಿ. 

Read more Photos on
click me!

Recommended Stories