Bigg Bossನಲ್ಲಿ ಡಾಗ್​ ಸತೀಶ್​ ಚಡ್ಡಿಯ ಬಿಸಿಬಿಸಿ ಚರ್ಚೆ: ಚಡ್ಡಿ ಕಳ್ಳರನ್ನು ಕಂಡುಹಿಡಿದ್ರಾ ಕಿಚ್ಚ ಸುದೀಪ್? ​

Published : Nov 24, 2025, 05:15 PM IST

ಬಿಗ್​ಬಾಸ್​ನಿಂದ ಹೊರಬಂದ ಡಾಗ್ ಸತೀಶ್, ಸ್ಪರ್ಧಿ ಸ್ಪಂದನಾ ತನ್ನ ದುಬಾರಿ ಶರ್ಟ್ ಹಾಳು ಮಾಡಿದ್ದಾರೆ ಮತ್ತು ತನ್ನ ಚಡ್ಡಿಗಳು ಕಳೆದುಹೋಗಿವೆ ಎಂದು ಆರೋಪಿಸಿದ್ದರು. ಈ ವಿಷಯವನ್ನು ನಿರೂಪಕ ಸುದೀಪ್ ಅವರು ವಾರದ ಕಂತಿನಲ್ಲಿ , ಮನೆಯ ಸದಸ್ಯರನ್ನು ಪ್ರಶ್ನಿಸಿದಾಗ ತಮಾಷೆಯ ಸನ್ನಿವೇಶ ಸೃಷ್ಟಿಯಾಯಿತು.

PREV
16
ಬಿಗ್​ಬಾಸ್​ ಸೆಲೆಬ್ರಿಟಿಗಳು

ಬಿಗ್​ಬಾಸ್​​ (Bigg Boss) ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಸ್ಪರ್ಧಿಗಳು ಕೆಲ ದಿನಗಳ ಮಟ್ಟಿಗೆ ಸೆಲೆಬ್ರಿಟಿಗಳಾಗುತ್ತಾರೆ. ಎಲ್ಲಾ ಮಾಧ್ಯಮಗಳಲ್ಲಿ ಅವರೇ ಹೈಲೈಟ್​. ಈ ಸಂದರ್ಭದಲ್ಲಿ ಬಿಗ್​ಬಾಸ್​ ಮನೆಯೊಳಗಿನ ಕೆಲವು ಸಿಹಿ ಕಹಿ ಘಟನೆಗಳನ್ನು ಮೀಡಿಯಾಗಳ ಮುಂದೆ ಶೇರ್​ ಮಾಡಿಕೊಳ್ಳುವುದು ಸಾಮಾನ್ಯ. ಅಂಥವರಲ್ಲಿ ಒಬ್ಬರು ಡಾಗ್​ ಸತೀಶ್​.

26
ಡಾಗ್​ ಸತೀಶ್​ ಹವಾ

ನೂರಾರು ಕೋಟಿ ರೂಪಾಯಿಗಳ ನಾಯಿಗಳ ಒಡೆದ ಎಂದೇ ಫೇಮಸ್​ ಆಗಿರೋ ಡಾಗ್​ ಸತೀಶ್​ (Bigg Boss Dog Sathish) ಅವರಿಗೆ ತಮ್ಮ ಶ್ರೀಮಂತಿಕೆ ಮತ್ತು ಸೌಂದರ್ಯದ ಮೇಲೆ ಎಷ್ಟು ಕಾನ್ಫೆಡೆನ್ಸ್​ ಇದೆಯೋ, ಅದೇ ರೀತಿ ತಮ್ಮ ಮಾತಿನ ಮೇಲೂ ಇದೆ. ಇದಾಗಲೇ ಹಲವಾರು ಮಾಧ್ಯಮಗಳಲ್ಲಿ ಅವರು ಬಿಗ್​ಬಾಸ್​ ಬಗ್ಗೆ ಮಾತನಾಡುತ್ತಲೇ ಕೆಲವು ನೆಗೆಟಿವ್​ ಕಮೆಂಟ್ಸ್​ ಕೂಡ ಮಾಡಿದ್ದಿದೆ. ಅದರಲ್ಲಿ ಒಂದು ಅವರ ಬಟ್ಟೆಗಳ ಬಗ್ಗೆ.

36
ಡಾಗ್ ಸತೀಶ್​ ಆರೋಪ

ಡಾಗ್ ಸತೀಶ್ ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಸ್ಪಂದನಾ ಅವರಿಗೆ ಒಂದು ದುಬಾರಿ ಶರ್ಟ್ ಕೊಟ್ಟಿದ್ದರಂತೆ. ಆ ಶರ್ಟ್‌ ಸ್ಪಂದನಾ ಹಾಳು ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಡಾಗ್ ಸತೀಶ್​ ಹೇಳಿಕೆ ಕೊಡುತ್ತಿರುವುದನ್ನೇ ಸುದೀಪ್​ ಸ್ಪರ್ಧಿಗಳಿಗೆ ಪ್ರಶ್ನಿಸಿದ್ದಾರೆ! ಮಾತ್ರವಲ್ಲದೇ ಅವರ ದುಬಾರಿ ಚಡ್ಡಿಗಳನ್ನೂ ಯಾರೋ ತೆಗೆದುಕೊಂಡಿದ್ದಾರೆ ಎಂದೂ ಸತೀಶ್​ ಆರೋಪಿಸುತ್ತಿದ್ದಾರೆ. ಇದರ ಬಗ್ಗೆಯೂ ಸುದೀಪ್​ ಎಲ್ಲಾ ಸ್ಪರ್ಧಿಗಳನ್ನು ವಿಚಾರಿಸಿದ್ದಾರೆ!

46
ಷರ್ಟ್​, ಚಡ್ಡಿ ಕದ್ದರಂತೆ!

ಸುದೀಪ್​ ಅವರು ತಮ್ಮದೇ ಆದ ಧಾಟಿಯಲ್ಲಿ ಈ ವಿಷಯವನ್ನು ಎತ್ತಿ, ಮಾಜಿ ಸ್ಪರ್ಧಿ ಡಾಗ್ ಸತೀಶ್ ಅವರ ದುಬಾರಿ ಶರ್ಟ್ ತೆಗೆದುಕೊಂಡು, ಸ್ಪಂದನಾ ಹಾಳು ಮಾಡಿದ್ದಾರಂತೆ. ಇರೋ ಬರೋ ಚಾನೆಲ್​ನಲ್ಲಿ ಅವರು ಇದನ್ನೇ ಹೇಳುತ್ತಿದ್ದಾರೆ. ನಿಜನಾ ಎಂದು ಪ್ರಶ್ನಿಸಿದ್ದಾರೆ ಸುದೀಪ್​. ಅಷ್ಟೇ ಅಲ್ಲದೇ ಅವರದ್ದು ನಾಲ್ಕು ಚಡ್ಡಿ ಕೂಡ ಕೊಟ್ಟಿಲ್ವಂತೆ. ಅವರ ಬ್ರಶ್ ಕೂಡ ಕೊಟ್ಟಿಲ್ವಂತೆ. ಇರೋ ಬರೋ ಚಾನೆಲ್‌ನಲ್ಲಿ ಹಿಡ್ಕೊಂಡು ಜಡೀತಾ ಇದ್ದಾರೆ ಎಂದಿದ್ದಾರೆ.

56
ಸ್ಪಂದನಾಗೆ ಶಾಕ್​

ಈ ಬಗ್ಗೆ ಸ್ಪಂದನಾ ಅವರನ್ನು ಸುದೀಪ್​ ಪ್ರಶ್ನಿಸಿದಾಗ, ಸ್ಪಂದನಾ ಶಾಕ್​ನಿಂದ ಇಲ್ಲ, "ವೀಕೆಂಡ್ ಎಪಿಸೋಡ್‌ನಲ್ಲಿ ಕೊಟ್ಟಿದ್ದರು. ಅದಾದ ಮೇಲೆ ಆ ಶರ್ಟ್ ಅನ್ನು ಅವರು ವಾಪಸ್ ತೆಗೆದುಕೊಂಡು ಬಿಟ್ಟರು. ಆ ಶರ್ಟ್ ಮನೆಯಲ್ಲಿ ಎಲ್ಲೂ ಇಲ್ಲ" ಎಂದರು.

66
ಎಲ್ಲರನ್ನೂ ಪ್ರಶ್ನಿಸಿದ ಕಿಚ್ಚ

ಕೊನೆಗೆ ಸುದೀಪ್​ ಡಾಗ್​ ಸತೀಶ್ ಚಡ್ಡಿ ಬಗ್ಗೆನೂ ಪ್ರಸ್ತಾಪಿಸಿದ್ದಾರೆ. ಜಾಹ್ನವಿಯವರಿಗೆ ಹಾಗೂ ಅಶ್ವಿನಿ ಗೌಡ ಅವರನ್ನು ಉದ್ದೇಶಿಸಿ ಬಟ್ಟೆ ಪ್ರಶ್ನೆ ಕೇಳಿದ್ದಾರೆ, ಧನುಷ್​ ಬಳಿ ಚಡ್ಡಿಯ ಪ್ರಶ್ನೆಯನ್ನೂ ಕೇಳಿ ತಮಾಷೆ ಮಾಡಿದ್ದಾರೆ. ಅದಕ್ಕೆ ಧನುಷ್​ "ನಾನು ಅವರನ್ನು ಮಾತಾಡಿಸುತ್ತಲೇ ಇರಲಿಲ್ಲ" ಎಂದಿದ್ದಾರೆ. ಒಟ್ಟಿನಲ್ಲಿ ಸಂಡೆ ವಿಶೇಷತೆಯಲ್ಲಿ ಡಾಗ್​ ಸತೀಶ್​ ಚಡ್ಡಿ ಸಕತ್​ ಸೌಂಡ್​ ಮಾಡಿತು.

Read more Photos on
click me!

Recommended Stories