ಗೌತಮಿ ಜಾಧವ್ ಮಗಳ ಹುಟ್ಟುಹಬ್ಬ… 'Happy Birthday Queen' ಎಂದ ‘ಸತ್ಯ’ ನಟಿ

Published : Nov 24, 2025, 04:00 PM IST

ನಟಿ ಗೌತಮಿ ಜಾಧವ್ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ. ಹ್ಯಾಪಿ ಬರ್ತ್ ಡೇ ಮಗಳೇ ಎಂದಿದ್ದಾರೆ. ಗೌತಮಿಗೆ ಮಗು ಯಾವಾಗ ಆಯ್ತು ಎಂದು ಶಾಕ್ ಆಗ್ಬೇಡಿ. ನಟಿ ಮುದ್ದಿನ ಶ್ವಾನ ಕ್ವೀನ್ ಹುಟ್ಟಿದ ದಿನ ಸಂಭ್ರಮದಲ್ಲಿದ್ದಾರೆ ಗೌತಮಿ.

PREV
17
ಗೌತಮಿ ಜಾಧವ್

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಜನಪ್ರಿಯತೆ ಗಳಿಸಿದ ನಟಿ ಗೌತಮ್ ಜಾಧವ್, ಬಿಗ್ ಬಾಸ್ ಸೀಸನ್ 11ರ ಮೂಲಕ ಮತ್ತೆ ಭಾರಿ ಸದ್ದು ಮಾಡಿದ್ದರು. ತಮ್ಮ ಪಾಸಿಟಿವಿಯಿಂದಲೇ ಗುರುತಿಸಿಕೊಂಡ ಗೌತಮಿ ಪಾಸಿಟಿವ್ ಗೌತಮಿ ಅಂತಾನೆ ಗುರುತಿಸಿಕೊಂಡರು. ಗೌತಮಿ ಇಂದು ವಿಶೇಷ ದಿನ ಸೆಲೆಬ್ರೇಶನ್ ಮಾಡುತ್ತಿದ್ದಾರೆ.

27
ಹ್ಯಾಪಿ ಬರ್ತ್ ಡೇ ಮಗಳೇ

ಗೌತಮ್ ಜಾಧವ್ ಅವರು ನವಂಬರ್ 23ರಂದು ತಮ್ಮ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಕುರಿತು ಸಂಭ್ರಮದಿಂದ ಪೋಸ್ಟ್ ಮಾಡಿದ್ದು, ಮುದ್ದಾದ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ. ಗೌತಮಿ ಜಾಧವ್ ಗೆ ಮಗಳು ಎಲ್ಲಿಂದ ಎಂದು ಅಶ್ಚರಪಡಬೇಡಿ.

37
ಮುದ್ದು ಶ್ವಾನದ ಹುಟ್ಟುಹಬ್ಬ

ಗೌತಮಿ ಜಾಧವ್ ಅವರು ಶ್ವಾನ ಪ್ರಿಯೆ ಅನ್ನೋದು ಗೊತ್ತೇ ಇದೆ. ಇವರ ಬಳಿ ಮೂರು ಶ್ವಾನ ಇದ್ದು, ಅದರಲ್ಲಿ ಗೌತಮಿ ಅವರ ಮೊದಲ ಶ್ವಾನ ಕ್ವೀನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ಹ್ಯಾಪಿ ಬರ್ತ್ ಡೇ ಮಗಳೆ, ಕ್ವೀನ್ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.

47
ಕಾಫಿ, ಹ್ಯಾಪಿ, ಕ್ವೀನ್

ಗೌತಮಿ ಜಾಧವ್ ಬಳಿ ಮೂರು ಗೋಲ್ಡನ್ ರಿಟ್ರೀವರ್ ಗಳಿವೆ. ಅವುಗಳ ಹೆಸರು ಕಾಫಿ, ಹ್ಯಾಪಿ ಮತ್ತು ಕ್ವೀನ್. ನಟಿ ಹೆಚ್ಚಾಗಿ ತಮ್ಮ ಶ್ವಾನಗಳ ಜೊತೆಗೆ ಮುದ್ದು ಮುದ್ದಾಗಿ ಫೋಟೊ ಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ.

57
ಪತಿ ಜೊತೆ ಫೋಟೊ ಶೂಟ್

ಗೌತಮಿ ಜಾಧವ್ ಅವರು ಪತಿ ಅಭಿಷೇಕ್ ಕಾಸರಗೋಡು ಮತ್ತು ತಮ್ಮ ಮುದ್ದಿನ ಕ್ವೀನ್ ಜೊತೆಗೆ ಸಾಕಷ್ಟು ಫೋಟೊ ಶೂಟ್ ಮಾಡಿದ್ದು, ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜನ ಇದನ್ನು ನೋಡಿ ಪರ್ಫೆಕ್ಟ್ ಫ್ಯಾಮಿಲಿ ಎಂದಿದ್ದಾರೆ.

67
ಗೌತಮಿ ಜಾಧವ್ ಕರಿಯರ್

ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಗೌತಮಿ ಜಾಧವ್ 2018ರಲ್ಲಿ ತೆರೆಕಂಡ ‘ಕಿನಾರೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ‘ಆದ್ಯ’ ಚಿತ್ರದಲ್ಲಿ ನಟಿಸಿದ್ದರು, ನಂತರ ಮತ್ತೆ ಕಿರುತೆರೆಯಲ್ಲಿ ‘ಸತ್ಯ’ ಸೀರಿಯಲ್ ಮೂಲಕ ಪಾರ ಅಭಿಮಾನಿಗಳನ್ನು ಗಳಿಸಿದರು.

77
ಮಂಗಳಾಪುರಂಗೆ ನಾಯಕಿ

ಇದೀಗ ಗೌತಮಿ ಜಾಧವ್ ‘ಮಂಗಳಾಪುರಂ’ ಎನ್ನುವ ಹೊಸ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರಿಷಿ ನಾಯಕನಾಗಿ ನಟಿಸುತ್ತಿದ್ದಾರೆ. ರಂಜಿತ್ ರಾಜ್ ಸುವರ್ಣ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

Read more Photos on
click me!

Recommended Stories