Kannada Actresses and Business: ಕನ್ನಡ ಕಿರುತೆರೆಯ ನಟಿಯರು ಕೇವಲ ನಟನೆಯಲ್ಲಿ ಮಾತ್ರವಲ್ಲ, ಬ್ಯುಸಿನೆಸ್ ಮಾಡೋದ್ರಲ್ಲೂ ಮುಂದಿದ್ದಾರೆ. ಇಲ್ಲಿದೆ ನೋಡಿ, ನಟನೆಯ ಜೊತೆಗೆ ಸೈಡ್ ಬ್ಯುಸಿನೆಸ್ ಮಾಡಿ ಯಶಸ್ಸು ಗಳಿಸಿ, ಜೊತೆಗೆ ಕೈತುಂಬಾ ಹಣ ಮಾಡುತ್ತಿರುವ ನಟಿಯರು.
ಕನ್ನಡ ಕಿರುತೆರೆ ನಟಿಯರು ಕೇವಲ ನಟನೆಯಲ್ಲಿ ಮಾತ್ರವಲ್ಲ ಬ್ಯುಸಿನೆಸ್ ಮೂಲಕವೂ ಸದ್ದು ಮಾಡುತ್ತಿದ್ದಾರೆ. ಹೌದು, ಹಲವಾರು ನಟಿಯರು ಈಗಾಗಲೇ ಬ್ಯುಸಿನೆಸ್ ಆರಂಭಿಸಿ ಯಶಸ್ಸು ಪಡೆದಿದ್ದಾರೆ.
210
ಚೈತ್ರಾ ವಾಸುದೇವನ್
ನಟಿಯಾಗಿ, ನಿರೂಪಕಿಯಾಗಿ ಜನಪ್ರಿಯತೆ ಪಡೆದು, ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿದ್ದ ಚೈತ್ರಾ ವಾಸುದೇವನ್ ಅವರು ತಮ್ಮದೇ ಆದ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
310
ಕವಿತಾ ಗೌಡ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಲಚ್ಚಿಯಾಗಿ, ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ವಿದ್ಯಾ ಆಗಿ, ಹಿರಿತೆರೆಯಲ್ಲಿ ನಟಿಸಿದ್ದ ನಟಿ ಕವಿತಾ ಗೌಡ ಬ್ಯುಟೀಷಿಯನ್ ಕೂಡ ಹೌದು, ಇವರು ಗಂಡನ ಜೊತೆ ಸೇರಿ ಹೊಟೇಲ್ ಕೂಡ ನಡೆಸುತ್ತಿದ್ದಾರೆ.
ಕನ್ನಡ ಕಿರುತೆರೆಯ ಚೆಲುವೆ, ಬಿಗ್ ಬಾಸ್ ಸುಂದರಿ, ನಗುಮೊಗದ ನಟಿ ದಿವ್ಯಾ ಉರುಡುಗ ನೇಲ್ ಆರ್ಟ್ ಸ್ಟುಡಿಯೋ ಒಂದನ್ನು ಕಳೆದ ವರ್ಷವಷ್ಟೇ ತೆರೆದಿದ್ದರು. ಸದ್ಯ ನಟನೆಯಿಂದ ದೂರ ಇದ್ದು, ಸ್ಪೋರ್ಟ್ಸ್ ಗಳಲ್ಲಿ ಭಾಗವಹಿಸುತ್ತಿದ್ದಾರೆ.
510
ಮಯೂರಿ ಕ್ಯಾತರಿ
ಕೃಷ್ಣ ರುಕ್ಮಿಣಿ ಸಿನಿಮಾ ಹಾಗೂ ಅಶ್ವಿನಿ ನಕ್ಷತ್ರ ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟಿ ಮಯೂರಿ ಕ್ಯಾತರಿ ತಮ್ಮದೇ ಆದ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಹೊಂದಿದ್ದಾರೆ.
610
ರೂಪಿಕಾ
ಒಂದು ಕಾಲದಲ್ಲಿ ಹಿರಿತೆರೆಯಲ್ಲಿ ಮಿಂಚಿ, ಇದೀಗ ಲಕ್ಷ್ಮೀ ನಿವಾಸದಲ್ಲಿ ನಟಿಒಸುತ್ತಿರುವ ರೂಪಿಕಾ ಭರತನಾಟ್ಯ ಡ್ಯಾನ್ಸರ್ ಆಗಿದ್ದು, ಇವರು ತಮ್ಮದೇ ಆದ ಡ್ಯಾನ್ಸ್ ಕ್ಲಾಸ್ ಕೂಡ ಹೊಂದಿದ್ದಾರೆ.
710
ಸಾನ್ಯಾ ಅಯ್ಯರ್
ಪುಟ್ಟ ಗೌರಿಯ ಮದುವೆ ಮೂಲಕ ಖ್ಯಾತಿ ಪಡೆದು, ಗೌರಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಚೆಲುವೆ ಸಾನ್ಯಾ ಅಯ್ಯರ್, ಸೆಲೆಬ್ರಿಟಿ ಸಲೂನ್ ಮತ್ತು ಸ್ಪಾ ಹೊಂದಿದ್ದಾರೆ.
810
ಶ್ವೇತಾ ಚಂಗಪ್ಪ
ಕನ್ನಡ ಸೀರಿಯಲ್ ನಟಿ ಮತ್ತು ನಿರೂಪಕಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದ ಶ್ವೇತಾ ಚಂಗಪ್ಪ ಬಟ್ಟೆ ಉದ್ಯಮವನ್ನು ಕೂಡ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
910
ತನಿಷಾ ಕುಪ್ಪಂಡ
ಬಿಗ್ ಬಾಸ್ ಬೆಂಕಿ ಅಂತಲೇ ಸದ್ದು ಮಾಡಿದ್ದ ನಟಿ ತನಿಷಾ ಕುಪ್ಪಂಡ ರೆಸ್ಟೋರೆಂಟ್, ಸಿಲ್ವರ್ ಜ್ಯುವೆಲ್ಲರಿ ಮತ್ತು ನಿರ್ಮಾಣ ಸಂಸ್ಥೆಯನ್ನು ಕೂಡ ಹುಟ್ಟು ಹಾಕಿದ್ದಾರೆ.
1010
ದೀಪಿಕಾ ದಾಸ್
ನಾಗಿಣಿ ಸೀರಿಯಲ್ ನಟಿ ದೀಪಿಕಾ ದಾಸ್, ನಟಿ ಮಾತ್ರವಲ್ಲ. ಇವರು ತಮ್ಮದೇ ಆದ ಬಟ್ಟೆ ಉದ್ಯಮವನ್ನು ಕೂಡ ನಡೆಸುತ್ತಿದ್ದಾರೆ. ಜೊತೆಗೆ ಗಂಡನ ಬ್ಯುಸಿನೆಸ್ ಗೆ ನೆರವಾಗುತ್ತಿದ್ದಾರೆ.