ಬಿಗ್ಬಾಸ್ 12ರ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮುಂದುವರೆದಿದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ಲೈವ್ ಬಂದ ಕಾವ್ಯಾ, ಗಿಲ್ಲಿ ನಟರ ವೃತ್ತಿಜೀವನಕ್ಕೆ ಶುಭ ಹಾರೈಸುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಬಿಗ್ಬಾಸ್ 12 (Bigg Boss 12) ಹವಾ ತಣ್ಣಗಾಗುತ್ತಾ ಬಂದು ಇನ್ನೇನು ಕೆಲವೇ ದಿನಗಳಲ್ಲಿ 13ನೇ ಸೀಸನ್ ಆರಂಭ ಆಗಲಿದೆ. ಇದರ ಹೊರತಾಗಿಯೂ 12ರ ಕೆಲವು ಸ್ಪರ್ಧಿಗಳಿಗೆ ಇನ್ನೂ ಸಕತ್ ಡಿಮಾಂಡ್ ಇದ್ದೇ ಇದೆ. ಕೆಲವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ ಮತ್ತು ಅವರ ಜೊತೆ ಸಕತ್ ಸೌಂಡ್ ಮಾಡಿದ್ದ ಕಾವ್ಯಾ ಶೈವ.
26
ಪ್ರೀತಿಯಲ್ಲಿ ಜೋಡಿ
ಆದರೆ ಬಿಗ್ಬಾಸ್ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಇವರಿಬ್ಬರ ಬಾಂಡಿಂಗ್ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ.
36
ಇಬ್ಬರೂ ಸ್ನೇಹಿತರಷ್ಟೇ
ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.
ಇದೇ ಕಾರಣಕ್ಕೆ ಗಿಲ್ಲಿ ನಟನ ಬಗ್ಗೆ (Bigg Boss Gilli Nata and Kavya Shaiva) ಹೇಳಿ ಹೇಳಿ ಎಂದು ಪದೇ ಪದೇ ಕಾವ್ಯಾ ಶೈವ ಅವರಿಗೆ ಅಭಿಮಾನಿಗಳು ಕಾಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಇನ್ಸ್ಟಾಗ್ರಾಮ್ ಲೈವ್ಗೆ ಬಂದ ಕಾವ್ಯಾ ಶೈವ ಅವರು, ನೀವು ಪದೇ ಪದೇ ಗಿಲ್ಲಿ ನಟನ ಬಗ್ಗೆ ಹೇಳಿ ಹೇಳಿ ಅಂತಾನೇ ಇರುತ್ತೀರಿ. ಅದಕ್ಕಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.
56
ಲೈವ್ನಲ್ಲಿ ಕಾವ್ಯಾ ಹೇಳಿದ್ದೇನು?
ಗಿಲ್ಲಿ ನಟ ಸದ್ಯ ಪಳಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿ. ಅದೇ ರೀತಿ ಅವರಿಗೆ ಒಳ್ಳೊಳ್ಳೆಯ ಪ್ರಾಜೆಕ್ಟ್ಗಳು ಸಿಗಲಿ, ಮತ್ತಷ್ಟು ಅವರು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಗಿಲ್ಲಿ ನಟನ ಬಗ್ಗೆ ಇನ್ನೇನು ಹೇಳುತ್ತಾರೆ ಎಂದು ಕಾದಿದ್ದ ಗಿಲ್ಲಿ ಫ್ಯಾನ್ಸ್ಗೆ ಕೊಂಚ ನಿರಾಸೆಯಾದರೂ, ಕಾವ್ಯಾ ಬಾಯಲ್ಲಿ ಗಿಲ್ಲಿಯ ಮಾತು ಬಂತಲ್ಲ ಎಂದು ಖುಷಿ ಪಟ್ಟುಕೊಳ್ಳುತ್ತಿದ್ದಾರೆ.
66
ಮದುವೆ ಬಗ್ಗೆ ಗಿಲ್ಲಿ ಅಮ್ಮನ ಮಾತು
ಗಿಲ್ಲಿ ನಟನ ಮದುವೆಯ ಬಗ್ಗೆ ಕೇಳಿದ ಮಾತಿಗೆ ಅವರ ತಾಯಿ ಈ ಹಿಂದೆ, ಅವನು ನಮಗೆ ಇಷ್ಟು ಕೀರ್ತಿ ತಂದುಕೊಟ್ಟಿದ್ದಾನೆ. ಅವನು ಇಷ್ಟಪಟ್ಟ ಹುಡುಗಿಯ ಜೊತೆ ನಾವು ಮದುವೆ ಮಾಡಿಸುತ್ತೇವೆ. ಅವನು ಯಾರನ್ನೇ ಇಷ್ಟಪಟ್ಟರೂ, ಅವರ ಜೊತೆ ಮದುವೆ ಮಾಡಿಸುತ್ತೇವೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.