ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ, ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂಬ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಗೌತಮ್‌ನ ಆರೈಕೆ ಮತ್ತು ಕುಟುಂಬಸ್ಥರ ಪ್ರಾರ್ಥನೆಯಿಂದ ಗುಣಮುಖಳಾದ ಭೂಮಿಕಾ, ಹೊಸ ರೂಪದಲ್ಲಿ ಮತ್ತೆ ಬಂದಿದ್ದಾಳೆ.
ಜೀ ಕನ್ನಡದ ಅಮೃತಧಾರೆ ಸೀರಿಯಲ್ ಭೂಮಿಕಾಳ ಸಾವಿನಿಂದ ಅಂತ್ಯವಾಗುತ್ತೆ ಎಂಬ ಲೆಕ್ಕಾಚಾರವನ್ನು ನಿರ್ದೇಶಕರು ತಲೆಕೆಳಗಾಗಿ ಮಾಡಿದ್ದಾರೆ. ಮತ್ತೊಂದೆಡೆ ಇದೇ ವಿಷಯವನ್ನಿಟ್ಟುಕೊಂಡು ಭೂಮಿಕಾಗೆ ಮಾನಸಿಕ ಹಿಂಸೆ ನೀಡಬೇಕೆಂಬ ಶಕುಂತಲಾ ಮತ್ತು ಜೈದೇವ್ ಕೆಟ್ಟ ಆಸೆಗೂ ನಿರ್ದೇಶಕರು ಕೊಕ್ ನೀಡಿದ್ದಾರೆ.
25
ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್ ಮುಗಿಯುತ್ತೆ ಅಂತ ಪದೇ ಪದೇ ಸುದ್ದಿಗಳು ಬಂದ್ರೂ, ನಿರ್ದೇಶಕರು ಕಥೆಗೆ ರೋಚಕ ತಿರುವುಗಳನ್ನು ನೀಡುತ್ತಾ ಧಾರಾವಾಹಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಭೂಮಿಕಾಗೆ ಕ್ಯಾನ್ಸರ್ ಎಂಬ ವಿಷಯ ತಿಳಿಯುತ್ತಿದ್ದಂತೆ ವೀಕ್ಷಕರು ಸಹ ಬೇಸರಗೊಂಡಿದ್ದರು.
35
ಗೌತಮ್ ಆರೈಕೆ, ಕುಟುಂಬಸ್ಥರ ಪ್ರಾರ್ಥನೆ
ಆರಂಭದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳಲು ಭೂಮಿಕಾ ಹಿಂದೇಟು ಹಾಕಿದ್ದಳು. ಆದ್ರೆ ಗೌತಮ್ ಬಲವಂತದ ಮೇರೆಗೆ ಚಿಕಿತ್ಸೆ ಪಡೆದುಕೊಂಡ ಭೂಮಿಕಾ ಗುಣವಾಗಿದ್ದಾಳೆ. ಎಲ್ಲಾ ಕೆಲಸಗಳನ್ನು ಬಿಟ್ಟು ಪತ್ನಿಯ ಆರೈಕೆಯಲ್ಲಿ ಗೌತಮ್ ತೊಡಗಿಕೊಂಡಿದ್ದನು. ಗೌತಮ್ ಆರೈಕೆ, ಕುಟುಂಬಸ್ಥರ ಪ್ರಾರ್ಥನೆಯಿಂದ ಭೂಮಿಕಾ ಸಾವನ್ನೇ ಗೆದ್ದಿದ್ದಾಳೆ.
ಕ್ಯಾನ್ಸರ್‌ಗೆ ತುತ್ತಾಗಿದ್ದ ಸಂದರ್ಭದಲ್ಲಿ ಭೂಮಿಕಾ ತಲೆಗೂದಲು ಕತ್ತರಿಸಿದ್ದಳು. ಹೆಡ್‌ಕ್ಲೀನ್ ಶೇವ್ ಬಳಿಕ ಭೂಮಿಕಾ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಕ್ಯಾನ್ಸರ್‌ನಿಂದ ಗುಣಮುಖವಾದ ಬಳಿಕ ಭೂಮಿಕಾ ಹೊಸ ಹೇರ್‌ಸ್ಟೈಲ್ ಮೂಲಕ ಮತ್ತೊಮ್ಮೆ ಮಿಂಚುತ್ತಿದ್ದಾರೆ.
55
ಅಮೃತಧಾರೆ ಸಿನಿಮಾ
ಗುಣಮುಖವಾಗಿ ಮನೆಗೆ ಹಿಂದಿರುಗಿವ ಮಗಳನ್ನು ತಾಯಿ ಆರತಿ ಬೆಳಗಿ ಬರಮಾಡಿಕೊಳ್ಳಿದ್ದಾಳೆ. ರಮ್ಯಾ ಮತ್ತು ಧ್ಯಾನ್ ಅಭಿನಯದ 'ಅಮೃತಧಾರೆ' ಸಿನಿಮಾ ರೀತಿಯಲ್ಲಿಯೂ ಈ ಕಥೆಯೂ ಕೊನೆಯಾಗುತ್ತೆ ಎಂದು ಊಹಿಸಿದ್ದರು. ಆದ್ರೆ ಸೀರಿಯಲ್ ಇನ್ನೊಂದಿಷ್ಟು ದಿನ ಮುಂದುವರಿಯುವ ಸುಳಿವನ್ನು ಇಂದಿನ ಪ್ರೋಮೋ ನೀಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.