Mallamma quick answer : ಬಿಗ್‌ಬಾಸ್ ಮನೆಯ ಪತ್ರಿಕಾಗೋಷ್ಠಿ ಟಾಸ್ಕ್‌ನಲ್ಲಿ, ಮಲ್ಲಮ್ಮ ತಮ್ಮ ಮೇಲಿನ ಪ್ರಶ್ನೆಗಳಿಗೆ ಖಡಕ್ ಉತ್ತರಗಳನ್ನು ನೀಡಿದ್ದಾರೆ. ಸ್ಟ್ರಾಂಗ್ ಸ್ಪರ್ಧಿ ಎಂದಿರುವ ಅವರು, ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದು, ಅವರ ಉತ್ತರಗಳಿಗೆ ಇತರೆ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದ ಸಂಚಿಕೆಯಲ್ಲಿ ಪತ್ರಿಕಾಗೋಷ್ಠಿ ಮಾದರಿಯ ಪ್ರಕ್ರಿಯೆ ನೀಡಲಾಗಿತ್ತು. ಈ ವೇಳೆ ಪತ್ರಕರ್ತರಾಗಿ ಕುಳಿತಿದ್ದ ಫೈನಲಿಸ್ಟ್ ಪ್ರಶ್ನೆಗಳಿಗೆ ಮಲ್ಲಮ್ಮ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಮಲ್ಲಮ್ಮ ಉತ್ತರ ಹೇಳುತ್ತಿದ್ರೆ ಧನುಷ್ ಶಿಳ್ಳೆ ಹಾಕುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದರು. ಮಲ್ಲಮ್ಮ ಉತ್ತರಕ್ಕೆ ಆಶ್ಚರ್ಯ ವ್ಯಕ್ತಪಡಿಸಿ ಇನ್ನುಳಿದ ಸದಸ್ಯರು ಚಪ್ಪಾಳೆ ತಟ್ಟದರು.
26
ಮಲ್ಲಮ್ಮ ಗಟ್ಟಿಗಿತ್ತಿ
ಪ್ರಶ್ನೆ (ಅಶ್ವಿನಿ ಗೌಡ): ನೀವ್ಯಾಕೆ ಮನೆಯಲ್ಲಿರಬೇಕು? ನೀವೆಷ್ಟು ಸ್ಟ್ರಾಂಗ್?
ಮಲ್ಲಮ್ಮ: ನಾನು ಈ ಮನೆಯಲ್ಲಿಯೇ ಸ್ಟ್ರಾಂಗ್ ಅಭ್ಯರ್ಥಿ. ನೀವೇ ಅಲ್ಲವಾ ನನ್ನ ಕಪ್ ಮೇಲೆ ಮಲ್ಲಮ್ಮ ಗಟ್ಟಿಗಿತ್ತಿ ಅಂತ ಬರಿದ್ದೀರಿ. ನನ್ನ ವಯಸ್ಸಿನವರು ಯಾರು ಈ ಮನೆಯಲ್ಲಿಲ್ಲ. ಆಟ ಆಡಬೇಕು ಅಂತಾನೇ ನಾನು ಬಿಗ್‌ಬಾಸ್‌ಗೆ ಬಂದಿದ್ದೀನಿ. ಯಾವುದೇ ಆಟ ಬಂದರೂ ನನ್ನ ಕೈಯಲ್ಲಿ ಆದಷ್ಟು ಆಡುತ್ತೇನೆ. ನನ್ನ ಶಕ್ತಿ ಎಷ್ಟಿದೆಯೋ ಅಷ್ಟು ಕೆಲಸ ಮಾಡುತ್ತೇನೆ.
36
ನಾಮಿನೇಷನ್ ಕುರಿತು ಪ್ರಶ್ನೆ
ಪ್ರಶ್ನೆ (ರಾಶಿಕಾ ಶೆಟ್ಟಿ): ನಾಮಿನೇಟ್ ಮಾಡೋದು ತಿಳಿಯಲ್ಲ ಅಲ್ಲವಾ?
ಮಲ್ಲಮ್ಮ: ಮೊದಲು ಎರಡು ವಾರ ಅರ್ಥ ಆಗಿರಲಿಲ್ಲ. ಈಗ ತಿಳಿದುಕೊಂಡಿದ್ದು, ಸರಿಯಾಗಿ ನಾಮಿನೇಟ್ ಮಾಡುತ್ತೇನೆ.
ಪ್ರಶ್ನೆ (ಸುಧಿ): ಬಿಗ್‌ಬಾಸ್ ಮನೆಯಲ್ಲಿ ನನಗೆ ಅರ್ಥ ಆಗಿಲ್ಲ ಅನ್ನೋ ಟ್ರಿಕ್ ಬಳಸ್ತಿದ್ದೀರಾ?
ಮಲ್ಲಮ್ಮ: ಹಾಗೇನೂ ಅಲ್ಲ. ನಾನು ಆ ರೀತಿಯಲ್ಲಿ ಯಾವುದೇ ಟ್ರಿಕ್ ಬಳಸುತ್ತಿಲ್ಲ. ಅರ್ಥ ಆಗಿರೋದನ್ನು ಅರ್ಥ ಆಗಿದೆ ಅಂತ ಹೇಳ್ತೀನಿ. ಅರ್ಥ ಆಗಿಲ್ಲಲ್ಲ ಅಂದ್ರೆ ನಿಮ್ಮಂಥವರನ್ನೇ ನಾನು ಕೇಳುತ್ತೇನೆ ಎಂದು ಮಲ್ಲಮ್ಮ ಹೇಳಿದಾಗ ಧ್ರುವಂತ್ ಚಪ್ಪಾಳೆ ತಟ್ಟುತ್ತಾರೆ. ಇದಕ್ಕೆ ಸುಧಿ ಮತ್ತು ಅಶ್ವಿನಿ ಗೌಡ ಬೇಸರ ವ್ಯಕ್ತಪಡಿಸುತ್ತಾರೆ.
56
ಒಂದು ವರ್ಷ ಇಲ್ಲೇ ಇರ್ತಿನಿ
ಪ್ರಶ್ನೆ (ಅಶ್ವಿನಿ ಗೌಡ): ಬಿಗ್‌ಬಾಸ್ ಗೆದ್ದು ಹೋಗ್ತೀನಿ ಅಂತ ಭರವಸೆ ನಿಮಗೆ ಇದೆಯಾ? ನಿಮ್ಮ ಕುಟುಂಬವನ್ನು ಮಿಸ್ ಮಾಡಿಕೊಳ್ತೀರಾ?
ಮಲ್ಲಮ್ಮ: ಹೌದು, ಆ ಭರವಸೆಯಿಂದಲೇ ಮನೆಗೆ ಬಂದಿದ್ದೀನಿ. ಈ ಮನೆಯೊಳಗೆ ಎಲ್ಲರೂ ಗೆಲ್ಲಬೇಕು ಅಂತಾನೇ ಬಂದಿದ್ದಾರೆ. ಇಲ್ಲಿ ನನಗೆ ಯಾರು ನೆನಪಿಲ್ಲ. ಇಲ್ಲಿ ಒಂದು ವರ್ಷ ಇರ್ತೀನಿ ಅಂತಾ ಬರುವಾಗಲೇ ಹೇಳಿ ಬಂದೀನಿ.
ಪ್ರಶ್ನೆ (ಕಾಕ್ರೋಚ್ ಸುಧಿ): ನಿಮ್ಮ ಹೆಸರು ಹೇಳಿಕೊಂಡು ಗೆಲ್ಲಬೇಕು ಅಂತ ಕೆಲವರಿದ್ದಾರೆ ಎಂದು ನಿಮಗೆ ಅನ್ನಿಸಿದೆಯಾ? ನಿಮಗೆ ಬಕೆಟ್ ಹಿಡಿಯುತ್ತಿದ್ದಾರೆ ಅಂತಾ ಅನ್ನಿಸಿದೆಯಾ?
ಮಲ್ಲಮ್ಮ: ನಮಗೆ ಆ ರೀತಿಯ ಯಾವುದೇ ಕೆಟ್ಟ ಭಾವನೆ ನಮಗಿಲ್ಲ ಮತ್ತು ನಾವು ಅದನ್ನು ತೆಗೆದುಕೊಳ್ಳುವುದಿಲ್ಲ. ನೀನು ಗೆಲ್ಲಬೇಡ ಅಂತ ಹೇಳಲು ಆಗುತ್ತಾ ಬಕೆಟ್ ಹಿಡಿತಾರೆ ಅನ್ನೋ ಪ್ರಶ್ನೆಗೆ ಅದು ನಮಗೆ ಗೊತ್ತಿಲ್ಲ ಮತ್ತು ನಾವು ಆ ರೀತಿ ಯೋಚಿಸಲ್ಲ, ಅದು ಅವರವರ ಇಷ್ಟ ಎಂದು ಹೇಳಿದರು.