ಮಂಜ-ಮಂಜಿಗೆ ಸೌಂದರ್ಯಾ ಚೆಕ್‌ಮೆಟ್; ಪ್ರೇಮಕವಿಯಾಗಿದ್ದ ಮಹಾಕವಿಗೆ ಶಾಕ್ ಕೊಟ್ಟ ಗಾನವಿ

Published : Nov 17, 2026, 02:50 PM IST

ಮಂಜುನಾಥ್ ಅವರನ್ನು ಗಾನವಿ ಗೌಡ ನಾಮಿನೇಟ್ ಮಾಡಿ ಶಾಕ್ ನೀಡಿದ್ದಾರೆ. ಸೌಂದರ್ಯಾ ಶೆಟ್ಟಿ ನಾಮಿನೇಷನ್ ಪ್ರಕ್ರಿಯೆಯನ್ನು ಗಾನವಿ ತಂಡಕ್ಕೆ ನೀಡಿದಾಗ ಈ ಘಟನೆ ನಡೆದಿದೆ. ಇದರಿಂದ ಕೋಪಗೊಂಡ ಮಂಜು, ಒಂದೇ ಆಟದಿಂದ ವ್ಯಕ್ತಿತ್ವ ನಿರ್ಧರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
15
ಮಂಜಿಗಾಗಿ ಪ್ರೇಮಕವಿಯಾಗಿದ್ದ ಮಹಾಕವಿ ಮಂಜ

ಮಹಾಕವಿಯಿಂದ ಪ್ರೇಮಕವಿಯಾಗಿದ್ದ, ಮಂಜುನಾಥ್‌ಗೆ ಗಾನವಿ ಗೌಡ ಬಿಗ್‌ ಶಾಕ್ ನೀಡಿದ್ದಾರೆ. ನಾನು ನಂಬಿಕೆ ಅರ್ಹಳಲ್ಲ, ಬ್ಯಾಡ್‌ ಗರ್ಲ್ ಅಂತ ಹೇಳಿಕೊಳ್ಳುವ ಗಾನವಿಯಿಂದ ಎಲ್ಲಾ ಸ್ಪರ್ಧಿಗಳು ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವಾರ ಮನೆಯೊಳಗೆ ಬಂದಿರುವ ಮಂಜುನಾಥ್ ಮತ್ತು ಗಾನವಿ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು.

25
ಮಂಜುನಾಥ್ ನಾಮಿನೇಟ್

ಆಟ ಅಂತ ಬಂದಾಗ ನಾನು ಎಂದು ಯೋಚಿಸುವ ಗಾನವಿ ಗೌಡ, ತನ್ನ ಕ್ಲೋಸ್ ಫ್ರೆಂಡ್ ಮಂಜುನಾಥ್ ಅವರನ್ನೇ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಮಾಡಿದ್ದಾರೆ. ಮಂಜು ಅವರನ್ನು ನಾಮಿನೇಟ್ ಮಾಡ್ತಿದ್ದಂತೆ ಇನ್ನುಳಿದ ಸದಸ್ಯರು ಚಪ್ಪಾಳೆ ತಟ್ಟಿದ್ದಾರೆ. ಮಂಜುನಾಥ್ ಮೇಲೆ ಸಗಣಿ ನೀರು ಹಾಕುವಾಗ, ಪಾಪ ಮಂಜ ಒಳ್ಳೆಯ ಬಟ್ಟೆ ಹಾಕಿದ್ದ ಎಂದು ಯಶಸ್ ವ್ಯಂಗ್ಯವಾಡಿದ್ದಾರೆ.

35
ಚೆಕ್‌ಮೆಟ್ ಕೊಟ್ಟ ಸೌಂದರ್ಯಾ

ಟಾಸ್ಕ್ ಗೆಲ್ಲುವ ಯುವರಾಣಿ, ಯಾವ ತಂಡ ನಾಮಿನೇಟ್ ಪ್ರಕ್ರಿಯೆಗೆ ಒಳಗೊಳ್ಳಬೇಕು ಅನ್ನೋದನ್ನು ನಿರ್ಧರಿಸುತ್ತಾರೆ. ಇಂದಿನ ಪ್ರೋಮೋದಲ್ಲಿ ಸೌಂದರ್ಯಾ ಶೆಟ್ಟಿ ಗೆದ್ದಿದ್ದು, ನಾಮಿನೇಷನ್ ಪ್ರಕ್ರಿಯೆಯನ್ನು ಗಾನವಿ ತಂಡದ ಹೆಗಲಿಗೆ ವರ್ಗಾಯಿಸಿದ್ದಾರೆ. ಗಗನ್ ಚಿನ್ನಪ್ಪ, ಧನುಷ್ ಮತ್ತು ಮಂಜುನಾಥ್ ಈ ಮೂವರು ಯುವರಾಣಿ ಗಾನವಿ ತಂಡದಲ್ಲಿದ್ದಾರೆ. ಈ ಮೂವರ ಪೈಕಿ, ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ.

45
ಮಂಜಿ ವಿರುದ್ಧ ಮಂಜ ಕೆಂಡ

ಟಾಸ್ಕ್ ಅಂತ ಬಂದ್ರೆ ಹಿಂದೆ ಸರಿಯುತ್ತಾರೆ ಎಂಬ ಕಾರಣವನ್ನೀಡಿ ಮಂಜುನಾಥ್ ಅವರನ್ನು ಗಾನವಿ ನಾಮಿನೇಟ್ ಮಾಡಿದ್ದಾರೆ. ತಮ್ಮನ್ನು ನಾಮಿನೇಟ್ ಮಾಡಿದ್ದಕ್ಕೆ ಗರಂ ಆಗಿರುವ ಮಂಜುನಾಥ್, ಒಂದೇ ಗೇಮ್ ಆಡಿ ಯಾರೂ ಟ್ರೋಫಿಯನ್ನು ತೆಗೆದುಕೊಂಡು ಹೋಗಲ್ಲ. ಒಂದೇ ಆಟದಿಂದ ಯಾರ ವ್ಯಕ್ತಿತ್ವವನ್ನು ನಿರ್ಧರಿಸಬಾರದು ಎಂದು ಗಾನವಿಗೆ ಹೇಳಿದ್ದಾರೆ.

55
ಗಾನವಿ ಪರವಾಗಿ ನಿಂತಿದ್ದ ಮಂಜ!

ಮಂಜುನಾಥ್ ಬರುತ್ತಿದ್ದಂತೆ ಗಾನವಿ ಜೊತೆ ಹೆಚ್ಚು ಕನೆಕ್ಟ್ ಆಗಿದ್ದರು. ಮಹಾರಾಣಿ ಪಟ್ಟಕ್ಕೆ ಗಾನವಿ ಅನರ್ಹ ಅಂತ ಎಲ್ಲಾ ಪುರುಷ ಸದಸ್ಯರು ರೆಡ್ ಫ್ಲ್ಯಾಗ್ ನೀಡಿದ್ರೆ ಮಂಜುನಾಥ್ ಮಾತ್ರ ಗ್ರೀನ್ ಫ್ಲ್ಯಾಗ್ ನೀಡಿದ್ದರು. ಇಷ್ಟು ಮಾತ್ರವಲ್ಲ ಚೆಂದದ ಸಾಲುಗಳನ್ನು ಹೇಳುವ ಮೂಲಕ ಗಾನವಿಯನ್ನು ಮಂಜುನಾಥ್ ಇಂಪ್ರೆಸ್ ಮಾಡೋ ಕೆಲಸವನ್ನು ಮಾಡುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories