ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಯುವರಾಣಿಯರ ದರ್ಬಾರ್ ಶುರುವಾಗಿದ್ದು, ಗಾನವಿ ಮತ್ತು ಜಗದೀಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗಾನವಿ ಬೆಂಬಲಕ್ಕೆ ನಿಂತ ಮಂಜುನಾಥ್, ಜಗದೀಶ್ ಅವರ ಸಾಧನೆಯನ್ನು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 13ರ ಇಂದಿನ ಪ್ರೋಮೋ ಬಿಡುಗಡೆಯಾಗಿದ್ದು, ಮನೆಯಲ್ಲಿ ಯುವರಾಣಿಯರ ದರ್ಬಾರ ಆರಂಭವಾಗಿದೆ. ಮನೆಯ ಮೂವರು ಮಹಿಳಾ ಸ್ಪರ್ಧಿಗಳಾದ ಗಾನವಿ ಗೌಡ, ಸೌಂದರ್ಯಾ ಶೆಟ್ಟಿ ಮತ್ತು ಆಸಿಯಾ ಫಿರ್ದೋಸ್ ಯುವರಾಣಿಯರಾಗಿದ್ದು, ಮಹಾರಾಣಿಯಾಗಿ ಸಿಂಹಾಸನವೇರಲು ಪ್ರಯತ್ನಿಸುತ್ತಿದ್ದಾರೆ.
25
ಯುವರಾಣಿಯರ ಮೂರು ಬಣಗಳು
ಈಗಾಗಲೇ ಆಟದ ಪ್ರಕಾರ, ಯುವರಾಣಿಯರು ತಮ್ಮ ಜೀವರಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗಾನವಿ ತಮ್ಮ ಜೀವರಕ್ಷಕರನ್ನಾಗಿ ಮಂಜುನಾಥ್, ಧನುಷ್ ಮತ್ತು ಗಗನ್ ಚಿನ್ನಪ್ಪ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೌಂದರ್ಯ ಬಣದಲ್ಲಿ ಯಶಸ್ ಕೃಷ್ಣ, ತಾಂಡವ್ ರಾಮ್ ಮತ್ತು ಜಗದೀಶ್ ಇದ್ದಾರೆ. ಇನ್ನುಳಿದ ಪ್ರಶಾಂತ್ ಮತ್ತು ಕಿರಣ್ ಶಾಸ್ತ್ರಿ ಅವರು ಆಸಿಯಾ ತಂಡವನ್ನು ಸೇರಿಕೊಂಡಿದ್ದಾರೆ.
35
ಗುಣಗಾನ ಮಾಡಲು ಒಪ್ಪಲಿಲ್ಲವಾ ಜಗದೀಶ್?
ಇಂದಿನ ಪ್ರೋಮೋದ ಪ್ರಕಾರ, ತಂಡಗಳಲ್ಲಿ ಕೊಂಚ ಬದಲಾವಣೆ ಕಂಡುಬಂದಂತೆ ಕಾಣಿಸುತ್ತಿದೆ. ಜೀವರಕ್ಷಕ ಸೇನಾನಿಗಳು ತಮ್ಮ ಯುವರಾಣಿಯ ಗುಣಗಾನ ಮಾಡುವಂತೆ ಬಿಗ್‌ಬಾಸ್ ಸೂಚಿಸಿದ್ದಾರೆ. ಆದ್ರೆ ತಮ್ಮ ತಂಡದವರು ಒಪ್ಪಿಕೊಳ್ಳುತ್ತಿಲ್ಲ ಎಂದು ಗಾನವಿ ಹೇಳುತ್ತಾರೆ. ಈ ವೇಳೆ ಜಗದೀಶ್‌ಗೆ ತಮ್ಮನ್ನು ಹೊಗಳುವಂತೆ ಕೇಳಿಕೊಂಡಾಗ ಅಡುಗೆ ಮಾಡುವಾಗ ನನ್ನಿಂದಾಗಲ್ಲ ಅಂತಾರೆ.
ಈ ವಿಷಯವಾಗಿ ಜಗದೀಶ್ ಮತ್ತು ಗಾನವಿ ನಡುವೆ ಮಾತಿನ ಚಕಮಕಿ ಏರ್ಪಡುತ್ತದೆ. ಕೈಲಾಗದವರು ನೆಲ ಡೊಂಕು ಅಂದ್ರಂತೆ ಎಂದು ಜಗದೀಶ್ ವಿರುದ್ಧ ಗಾನವಿ ವಾಗ್ದಾಳಿ ನಡೆಸುತ್ತಾರೆ. ಇದರಿಂದ ಕೋಪಗೊಂಡ ಜಗದೀಶ್, ನಿನ್ನ ಬಾಯಿ ಹೊಲಸು, ಬಚ್ಚಲು, ಮಾನ-ಮರ್ಯಾದೆ ಇಲ್ಲದವಳು ನೀನು ಎಂದು ಬೈಯ್ಯುತ್ತಾರೆ. ಇದರಿಂದ ರೊಚ್ಚಿಗೆದ್ದ ಗಾನವಿ, ಬೌಲ್ ಎತ್ಕೊಂಡು ಹೊಡೆಯಲು ಮುಂದಾಗ್ತಾರೆ. ಇದಕ್ಕೆ ಹೊಡಿ ಹೊಡಿ ಎಂದು ಜಗದೀಶ್ ಗುಡುಗುತ್ತಾರೆ.
55
ಗಾನವಿ ಬೆಂಬಲಕ್ಕೆ ನಿಂತ ಮಂಜುನಾಥ್!
ಮಹಾಕವಿಯಿಂದ ಪ್ರೇಮಕವಿಯಾಗಿ ಬದಲಾಗಿರೋ ಮಂಜುನಾಥ್, ಸ್ನೇಹಿತೆ ಗಾನವಿ ಬೆಂಬಲಕ್ಕೆ ಬಂದು, ಜಗದೀಶ್ ಸಾಧನೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಮಾಡಿರೋದು ಒಂದು ಸಿನಿಮಾ. ವೇಸ್ಟ್ ನನ್ಮಗ, ಮಾಡಿರೋದು ಒಂದು ಫಿಲಂ ಬಿಟ್ರೆ ಏನು ಕಡೆದು ಕಟ್ಟೆ ಹಾಕಿದ್ದೀಯಾ? ಗಂಡಸ್ ತರಹ ನಡೆದುಕೊಳ್ಳಬೇಕು. ಒಂದು ಹೆಣ್ಣಿಗೆ ಗೌರವ ಕೊಡೋದನ್ನು ಕಲಿತುಕೊ ಎಂದು ಮಂಜುನಾಥ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.