ಮಾಡರ್ನ್ ಮಹಾಕವಿಗೆ ಸೌಂದರ್ಯಾ ಶೆಟ್ಟಿ ನೇರಾನೇರ ಕೌಂಟರ್; ನಾನು ಕೆಟ್ಟವನಾ ಎಂದ ಮಂಜ?

Published : Nov 09, 2026, 02:05 PM IST

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ಮಂಜುನಾಥ್ ವೈಲ್ಡ್‌ಕಾರ್ಡ್ ಮೂಲಕ ರಹಸ್ಯವಾಗಿ ಎಂಟ್ರಿ ಕೊಟ್ಟಿದ್ದಾರೆ. ಆಕ್ಟಿವಿಟಿ ರೂಮ್‌ನಲ್ಲಿ ಸೌಂದರ್ಯಾ ಶೆಟ್ಟಿ ಜೊತೆಗಿನ ಮಾತುಕತೆ ವೇಳೆ ಇಬ್ಬರ ನಡುವೆ ನೇರಾನೇರ ಕೌಂಟರ್ ಗಳು ನಡೆದಿವೆ.

PREV
15
ಸೌಂದರ್ಯಾ ಶೆಟ್ಟಿ ಕೌಂಟರ್

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ಸ್ವಯಂಘೋಷಿತ ಮಾಡರ್ನ್ ಮಹಾಕವಿಯ ಎಂಟ್ರಿಯಾಗಿದೆ. ಮಂಜುನಾಥ್ ಮುಂದೆ ಕುಳಿತ ಸೌಂದರ್ಯಾ ಶೆಟ್ಟಿ ಫಿಲ್ಟರ್ ಇಲ್ಲದೇ ಮಾತನಾಡಿದ್ದಾನೆ. ಆದ್ರೆ ಮನೆಯೊಳಗಿರೋ ಸ್ಪರ್ಧಿಗಳಿಗೆ ಮಂಜುನಾತ್ ವೈಲ್ಡ್‌ಕಾರ್ಡ್ ಎಂಟ್ರಿ ಎಂಬ ವಿಷಯವನ್ನು ಬಿಗ್‌ಬಾಸ್ ರಿವೀಲ್ ಮಾಡಿಲ್ಲ.

25
ಸ್ಪರ್ಧಿಗಳು ಒಂದು ಕ್ಷಣ ಶಾಕ್

ಮನೆ ಹೊರಗಡೆ ಆಗುತ್ತಿರುವ ವಿಷಯ ತಿಳಿದುಕೊಳ್ಳಲು ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಆಕ್ಟಿವಿಟಿ ರೂಮ್‌ಗೆ ಕಳುಹಿಸಲಾಗಿದೆ. ಇಲ್ಲಿ ಮಂಜುನಾಥ್ ಅವರಿಗೆ ದೊಡ್ಡ ಸೆಟಪ್ ಮಾಡಿಕೊಡಲಾಗಿದೆ. ಸ್ಪರ್ಧಿಗಳು ಮಂಜುನಾಥ್ ಅವರನ್ನು ನೋಡುತ್ತಿದ್ದಂತೆ ಶಾಕ್ ಆಗಿದ್ದಾರೆ.

35
ಶೆಟ್ಟಿ ಡಾನ್ ಗುಣಗಾನ

ಆಕ್ಟಿವಿಟಿ ರೂಮ್‌ಗೆ ಸೌಂದರ್ಯಾ ಶೆಟ್ಟಿ ಬರುತ್ತಿದ್ದಂತೆ, ಸೀರೆಯಲ್ಲಿ ತುಂಬಾ ಚೆಂದ ಕಾಣಿಸುತ್ತಿದ್ದೀರಿ ಎಂದು ಮಂಜು ಹೊಗಳಿದ್ದಾನೆ. ಚೆನ್ನಾಗಿ ಆಟವಾಡುತ್ತಿದ್ದು, ಮೂಲೆ ಮೂಲೆಗಳಲ್ಲಿಯೂ ನಿಮ್ಮದೇ ಹವಾ ಎಂದು ಮಂಜು ಹೇಳಿದ್ರೆ, ಇದಕ್ಕೆ ಪ್ರತಿಯಾಗಿ ಮೂಲೆಗಳಲ್ಲಿಯೇ ವಿಷಯ ಇರೋದು ಎಂದು ನಗಮೊಗದಿಂದಲೇ ಟಾಂಗ್ ನೀಡಿದ್ದಾರೆ.

45
ನಾನು ಕೆಟ್ಟವನಾ ಎಂದ ಮಂಜ?

ಮುಂದುವರಿದು ಮಾತನಾಡಿದ ಸೌಂದರ್ಯಾ ಶೆಟ್ಟಿ, ನೀನು ಹೋದ್ಮೇಲೆ ಮನೆಯಲ್ಲಿ ನನಗೆ ಶತ್ರುವೇ ಇಲ್ಲದಂತಾಗಿದೆ ಎಂದು ಮುಖ ಹೊಡೆದಂತೆ ಹೇಳಿದ್ದಾರೆ. ಈ ಮಾತು ಕೇಳುತ್ತಿದ್ದಂತೆ, ಹಾಗಾದ್ರೆ ನಾನು ಕೆಟ್ಟವನಾದ್ರೆ, ನೀವು ಏನು ಎಂದು ಮಂಜು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶೆಟ್ಟಿ ಡಾನ್, ಸ್ವಲ್ಪ ಹಾಗೆಯೇ ಅಂದ್ಕೊಳ್ಳಿ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: BBK 13: ಹೊಲಸು ಮಾತುಗಳಿಂದ ಹೋಗಿದ್ದ ಮಂಜ, ಮನೆಯೊಳಗೆ ಬರ್ತಿದ್ದಂತೆ ಗಲೀಜು ಮಾಡಿದ!

55
ಮನೆ ತುಂಬಾ ಕಸ ಹಾಕಿದ ಮಂಜು

ಸ್ಪರ್ಧಿಗಳು ನಿದ್ದೆಯಿಂದ ಎಚ್ಚರಗೊಳ್ಳುವ ಮುಂಚೆಯೇ ಬಂದಿದ್ದ ಮಂಜು, ಬಿಗ್‌ಬಾಸ್ ಮನೆ ಮತ್ತು ಗಾರ್ಡನ್ ಏರಿಯಾದ ತುಂಬೆಲ್ಲಾ ಕಸ ಹರಡಿ ಹೋಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಂಜುನಾಥ್, ಸ್ಪರ್ಧಿಗಳ ಬಟ್ಟೆಗಳೆಲ್ಲವನ್ನೂ ಕೆಳಗೆ ಬೀಳಿಸಿದ್ದರು. ಆದ್ರೆ ಈ ಯಾವ ವಿಷಯವೂ ಸ್ಪರ್ಧಿಗಳಿಗೆ ತಿಳಿದಿಲ್ಲ.

ಇದನ್ನೂ ಓದಿ: ಮಗುಗೆ ಜನ್ಮ ನೀಡಿ ಪ್ರಾಣ ಬಿಟ್ಟ ನಿತ್ಯಾ? ಒಡಲಾಳದಲ್ಲಿರೋ ಎರಡು ಕಠೋರ ಸತ್ಯ ಹೊರ ಬಂತಾ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories