ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾಳೆ. ತಾರಾಳ ಸಂಚಿನಿಂದ ಪಾರಾಗಿರುವ ಅವಳು ಕರ್ಣನಿಗೆ ಜನ್ಮರಹಸ್ಯ ಹೇಳುವ ಪ್ರಯತ್ನದಲ್ಲಿದ್ದಾಳೆ. ಅವಳ ಆರೋಗ್ಯ ಗಂಭೀರವಾಗಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.
ಕರ್ಣ ಸೀರಿಯಲ್‌ನಲ್ಲಿ ನಿತ್ಯಾ ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ತಂದೆ-ತಾಯಿಗೆ ತಾರಾ ಕಾರಣ ಮತ್ತು ಭುವನೇಶ್ವರಿಯೇ ಕರ್ಣನ ತಾಯಿ ಎಂಬ ಸತ್ಯ ನಿತ್ಯಾಳ ಒಡಲಿನಲ್ಲಿತ್ತು. ಮಗುವಿಗೆ ಜನ್ಮ ನೀಡಿದ ಬಳಿಕ ನಿತ್ಯಾಳ ಆರೋಗ್ಯದಲ್ಲಿ ಏರುಪೇರು ಆಗಿದೆ.
25
ನಿತ್ಯಾಳನ್ನು ರಕ್ಷಣೆ ಮಾಡಿರೋ ಕರ್ಣ
ಅಪಾಯದಲ್ಲಿದ್ದ ನಿತ್ಯಾಳನ್ನು ರಕ್ಷಿಸಿದ್ದ ಕರ್ಣ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು. ಲೇಬರ್ ಪೇನ್‌ನಿಂದ ಬಳಲುತ್ತಿದ್ದ ನಿತ್ಯಾಳ ಹೆರಿಗೆಯನ್ನು ಡಾಕ್ಟರ್ ಕರ್ಣನೇ ಮಾಡಿಸಿಕೊಂಡಿದ್ದಾನೆ. ಆದ್ರೆ ಮಗುವಿಗೆ ಜನಿಸಿದ ಬಳಿಕ ನಿತ್ಯಾಳ ಪಾತ್ರ ಕೊನೆಯಾಗೋ ಸುಳಿವನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ.
35
ತಾರಾಳಿಂದ ಸಂಚು
ಮಾರಿಗುಡಿಯಿಂದ ಬಂದ ಮಾದೇವ, ನಿತ್ಯಾಳಿಗೆ ತಾರಾಳ ನೀಚತನ ಹೇಳಿದ್ದನು. ಈ ವಿಷಯ ತಿಳಿದ ತಾರಾ ರೌಡಿಗಳನ್ನು ಕಳುಹಿಸಿ ಮಾದೇವ ಮತ್ತು ನಿತ್ಯಾಳ ಪ್ರಾಣ ತೆಗೆಯಲು ಮುಂದಾಗಿದ್ದಳು. ರೌಡಿಗಳಿಂದ ನಿತ್ಯಾಳನ್ನು ಕರ್ಣ ರಕ್ಷಿಸಿದ್ದನು.
ಈ ಪ್ರೋಮೋಗೆ ಕಮೆಂಟ್ ಮಾಡಿರುವ ಸೀರಿಯಲ್ ವೀಕ್ಷಕರು, ಕೊನೆಗೂ ಪುಟ್ಟದೇವರ ಆಗಮನ ಆಗಿದೆ. ಎಲ್ಲರಿಗೂ ಒಳ್ಳೆಯದು ಆಗಲಿ. ಕರ್ಣ ನಿತ್ಯಾಳನ್ನು ತಕ್ಷಣಕ್ಕೆ ಕಾಪಾಡಿದ್ದಾನೆ, ಹಾಗೆ ನಿತ್ಯಳಿಂದ ಕರ್ಣನಿಗೆ ತನ್ನ ನಿಜವಾದ ತಾಯಿಯ ಪರಿಚಯವಾಗಲಿ. ನಿತ್ಯಾಗಿಂತ ಕಷ್ಟ ನಮಗೇ ಆಗುತ್ತಿದೆ. ನಿತ್ಯ ಮಗು ಇಬ್ಬರೂ ಚೆನ್ನಾಗಿರಲಿ ಅವಳೇ ಕರ್ಣನಿಗೆ ಎಲ್ಲ ಸತ್ಯ ಹೇಳಲಿ ಎಂದು ಬರೆದುಕೊಂಡಿದ್ದಾರೆ.
55
ಎರಡು ಸತ್ಯಗಳು
1.ತನ್ನ ತಂದೆ ಮತ್ತು ತಾಯಿ ಸಹಜ ಸಾವು ಅಲ್ಲ. ತಾರಾ ಪ್ಲಾನ್ ಮಾಡಿ ತಂದೆ-ತಾಯಿಯನ್ನು ತಾರಾ ಎಂಬ ಸತ್ಯ
2.ಸೀರಿಯಲ್ ಬುಡವಾಗಿರೋ ಕರ್ಣನ ತಾಯಿ ಯಾರು ಎಂಬ ಸತ್ಯ ನಿತ್ಯಾಗೆ ಗೊತ್ತಾಗಿದೆ. ತನ್ನ ಕೊನೆಕ್ಷಣದಲ್ಲಿ ಕರ್ಣನಿಗೆ ಗೋಡೆ ಮೇಲಿರುವ ಭುವನೇಶ್ವರಿ ದೇವಿ ಫೋಟೋ ತೋರಿಸುವ ಮೂಲಕ ಸತ್ಯ ಹೇಳಲು ನಿತ್ಯಾ ಪ್ರಯತ್ನಿಸಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.