ಕುಟುಂಬದ ಪತ್ರ ಪಡೆಯುವ ಸವಾಲು ಸ್ಪರ್ಧಿಗಳ ನಡುವೆ ದೊಡ್ಡ ಬಿರುಕನ್ನು ಸೃಷ್ಟಿಸಿದೆ. ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ಯಾರಿಗೆ ಪತ್ರ ನೀಡಬೇಕೆಂದು ನಿರ್ಧರಿಸಲು ಮನೆಯ ಸದಸ್ಯರು ವಿಫಲರಾಗಿದ್ದು, ಒಮ್ಮತದ ನಿರ್ಧಾರ ಬಾರದಿದ್ದರೆ ಇಬ್ಬರೂ ಪತ್ರ ಕಳೆದುಕೊಳ್ಳುವ ಸಾಧ್ಯತೆಯಿದೆ.
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದಿಂದ ಪತ್ರಗಳು ಬರಲಾರಂಭಿಸಿವೆ. ಪತ್ರ ಪಡೆದುಕೊಳ್ಳುವ ಸ್ಪರ್ಧಿ ಈ ಬಾರಿ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗ್ತಾರೆ. ಆದ್ರೆ ಪತ್ರ ಪಡೆದುಕೊಳ್ಳಬೇಕಾದ್ರೆ ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಬ್ಬರಿಗೆ ಸಿಕ್ಕರೆ, ಮತ್ತೊಬ್ಬರು ಪತ್ರ ಕಳೆದುಕೊಂಡು ಕಣ್ಣೀರು ಹಾಕಬೇಕಾಗುತ್ತದೆ. ತಮ್ಮ ಕುಟುಂಬದಿಂದ ಬಂದ ಪತ್ರ ಕಣ್ಮುಂದೆಯೇ ಚೂರು ಚೂರು ಆಗಿದ್ದನ್ನು ಕಂಡು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಪತ್ರ ಸಿಕ್ಕವರು ಓದಿ ಭಾವುಕರಾಗಿ ಅತ್ತಿದ್ದಾರೆ.
25
ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ
ಇದೀಗ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ಇಬ್ಬರಲ್ಲಿ ಒಬ್ಬರಿಗೆ ಪತ್ರ ಸಿಗಲಿದೆ. ರಕ್ಷಿತಾ ಮತ್ತು ರಾಶಿಕಾ ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ಚರ್ಚಿಸಿ ಒಮ್ಮತದಿಂದ ಪತ್ರ ಯಾರಿಗೆ ಸೇರಬೇಕೆಂದು ನಿರ್ಧರಿಸಬೇಕಿದೆ. ಈ ಚರ್ಚೆಗೆ ಬಿಗ್‌ಬಾಸ್ ಒಂದಿಷ್ಟು ಸಮಯ ನೀಡಿರುತ್ತಾರೆ. ಆ ಸಮಯ ಮುಗಿಯುತ್ತಿದ್ದಂತೆ ಸ್ಪರ್ಧಿಗಳು ತಮ್ಮ ನಿರ್ಧಾರ ತಿಳಿಸಬೇಕಾಗುತ್ತದೆ.
35
ಯಾರು ಅರ್ಹ?
ಗಾರ್ಡನ್ ಏರಿಯಾದಲ್ಲಿ ಪತ್ರ ಪಡೆಯಲು ರಕ್ಷಿತಾ ಮತ್ತು ರಾಶಿಕಾ ಯಾರು ಅರ್ಹ ಎಂದು ವೋಟ್ ಹಾಕಲಾಗಿದೆ. ರಾಶಿಕಾಗಿಂತ ರಕ್ಷಿತಾಗೆ ಪತ್ರದ ಹೆಚ್ಚು ಅವಶ್ಯಕತೆಯಿದೆ ಎಂದು ರಘು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಮನೆಯ ಸದಸ್ಯರು ಎರಡು ಗುಂಪುಗಳಾಗಿದ್ದಾರೆ. ಈ ಮನೆಯಲ್ಲಿ ಮನಸ್ಸು ಮತ್ತು ಮನಸ್ಥಿತಿ ಹಾಳಾಗಲು ರಕ್ಷಿತಾ ಮೂಲ ಕಾರಣ. ಹಾಗಾಗಿ ನನ್ನ ವೋಟ್ ರಾಶಿಕಾಗೆ ನೀಡುವೆ ಎಂದು ಅಶ್ವಿನಿ ಗೌಡ ತಮ್ಮ ನಿರ್ಧಾರ ತಿಳಿಸಿದ್ದಾರೆ.
ಒಮ್ಮತದ ನಿರ್ಧಾರ ಹೇಳದಿದ್ರೆ ಇಬ್ಬರಿಗೂ ಪತ್ರ ಸಿಗಲ್ಲ. ಹಾಗಾಗಿ ಒಂದು ನಿರ್ಧಾರಕ್ಕೆ ಬರೋಣ ಅಂತಾ ಜಾನ್ವಿ ಹೇಳಿದಾಗ ಅದಕ್ಕೇನು ಮಾಡಕಾಗಲ್ಲ ಎಂದು ತಮ್ಮ ನಿರ್ಧಾರಕ್ಕೆ ಬದ್ಧವಾಗಿ ನಿಂತುಕೊಂಡಿದ್ದಾರೆ. ನನ್ನ ವ್ಯಕ್ತಿತ್ವವನ್ನು ಮತ್ತೊಂದು ಕಡೆ ತಿರುಚಿ ನನಗೆ ಅವಮಾನ ಆಗಿದ್ದಕ್ಕೆ ರಕ್ಷಿತಾ ಆಡಿದ ನಾಟಕವೇ ಕಾರಣ ಎಂದು ಅಶ್ವಿನಿ ಗೌಡ ಹೇಳುತ್ತಾರೆ.
ರಾಶಿಕಾ ಪರವಾಗಿ ಕಾಕ್ರೋಚ್ ಸುಧಿ, ಧ್ರುವಂತ್, ಅಶ್ವಿನಿ ಗೌಡ, ಸೂರಜ್, ಸ್ಪಂದನಾ ಮತ್ತು ಅಶ್ವಿನಿ ವೋಟ್ ಹಾಕಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಇಬ್ಬರಲ್ಲಿ ಯಾರಿಗೆ ಪತ್ರ ಸಿಗಲಿದೆ? ಒಮ್ಮತದ ನಿರ್ಧಾರ ಬರದ ಕಾರಣ ಇಬ್ಬರು ಪತ್ರ ಕಳೆದುಕೊಳ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಮತ್ತೊಂದೆಡೆ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ, ಸುಧಿ, ಧ್ರುವಂತ್, ರಿಷಾ ಒಂದಾದಂತೆ ಕಾಣಿಸುತ್ತಿದೆ.