ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಈ ಹಿಂದೆ ಹೇಳಿದ ಮಾತುಗಳು ಸತ್ಯವಾದಂತೆ, ವಿಚಿತ್ರ ಆಸೆಯೂ ನೆರವೇರಿದೆ. . ಕೆಲ ದಿನಗಳ ಹಿಂದೆಯಷ್ಟೇ ವಿಚಿತ್ರವಾದ ಆಸೆಯೊಂದು ರಕ್ಷಿತಾ ಶೆಟ್ಟಿ ವ್ಯಕ್ತಪಡಿಸಿದ್ದರು.
ಈ ಹಿಂದೆ ರಕ್ಷಿತಾ ಶೆಟ್ಟಿ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿತ್ತು. ಇದೀಗ ಮತ್ತೊಮ್ಮೆ ರಕ್ಷಿತಾ ಶೆಟ್ಟಿ ಹೇಳಿದ ಮಾತು ಸತ್ಯವಾಗಿದೆ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ವಿಚಿತ್ರವಾದ ಆಸೆಯೊಂದು ರಕ್ಷಿತಾ ಶೆಟ್ಟಿ ವ್ಯಕ್ತಪಡಿಸಿದ್ದರು. ಇದೀಗ ಆ ಆಸೆ ನೆರವೇರಿದೆ.
25
ಆಕ್ಟಿಂಗ್ ನೋಡಬೇಕು
ಸ್ಪಂದನಾ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ನನಗೆ ನಿಮ್ಮ ಆಕ್ಟಿಂಗ್ ನೋಡಬೇಕು. ಹಾಗಾಗಿ ಇಲ್ಲಿಂದ ಹೋದ್ಮೇಲೆ ನಿಮ್ಮ ಸೀರಿಯಲ್ ನೋಡುವೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು. ಈ ವೇಳೆ ನಾನು ಸೀರಿಯಲ್‌ನಲ್ಲಿ ತುಂಬಾ ದೊಡ್ಡವಳಂತೆ ಕಾಣಿಸುತ್ತೀನಿ. ಸೀರಿಯಲ್‌ನಲ್ಲಿ ನಾನು ಹೆಚ್ಚು ಅಳುತ್ತಿರುತ್ತೇನೆ ಎಂದು ಸ್ಪಂದನಾ ಹೇಳಿದ್ದರು.
35
ತುಳು ನಾಡಿನ ಪುಟ್ಟಿಯ ಆಸೆ
ಸ್ಪಂದನಾ ಮಾತು ಕೇಳುತ್ತಿದ್ದಂತೆ ಹಾಗಾದ್ರೆ ಒಮ್ಮೆ ಹೇಗೆ ಅಳುತ್ತೀರಿ ಎಂದು ತೋರಿಸಿ ಎಂದು ರಕ್ಷಿತಾ ಶೆಟ್ಟಿ ಮನವಿ ಮಾಡಿಕೊಂಡಿದ್ದರು. ರಕ್ಷಿತಾ ಶೆಟ್ಟಿ ಮನವಿ ಕೇಳಿ ವೀಕ್ಷಕರು ಬಿದ್ದು ಬಿದ್ದು ನಕ್ಕಿದ್ದರು.
ಇದೀಗ ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ಸ್ಪಂದನಾ ಮತ್ತು ಧನುಷ್ ಜೊತೆಯಾಗಿ ನಟಿಸಿದ್ದು, ನೋಡುಗರನ್ನು ಭಾವುಕರನ್ನಾಗಿಸಿದೆ. ಈ ನಟನೆಯಲ್ಲಿ ಸ್ಪಂದನಾ ಕಣ್ಣೀರು ಹಾಕಿದ್ದು, ರಕ್ಷಿತಾ ಶೆಟ್ಟಿ ನೋಡಿದ್ದಾರೆ. ಸ್ಪಂದನಾ ಆಕ್ಟಿಂಗ್ ನೋಡಬೇಕೆಂಬ ತುಳು ನಾಡಿನ ಪುಟ್ಟಿಯ ಆಸೆ ನೆರವೇರಿದೆ.
ಸ್ಪಂದನಾ ಮತ್ತು ಧನುಷ್ ಆಕ್ಟಿಂಗ್ ನೋಡಿ ಬಿಬಿ ಪ್ಯಾಲೇಸ್‌ಗೆ ಬಂದಿರುವ ಅತಿಥಿಗಳು ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇಬ್ಬರ ಸಹಜ ನಟನೆ ನೋಡುತ್ತಿದ್ದ ರಾಶಿಕಾ, ಮಂಜು, ರಜತ್ ಸೇರಿದಂತೆ ಹಲವು ಸ್ಪರ್ಧಿಗಳು ಕಣ್ಣಾಲಿಗಳು ತುಂಬಿಕೊಂಡಿದ್ದವು. ನೆಟ್ಟಿಗರು ಇಬ್ಬರು ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಆರಂಭದ ದಿನಗಳಲ್ಲಿ ಮನೆಯಿಂದ ಯಾರನ್ನು ಹೊರಗೆ ಹಾಕಲು ಇಷ್ಟಪಡುತ್ತೀರಿ ಎಂದು ರಕ್ಷಿತಾ ಶೆಟ್ಟಿ ಅವರಿಗೆ ಸುದೀಪ್ ಕೇಳಿದ್ದರು. ಆಗ ರಕ್ಷಿತಾ ಶೆಟ್ಟಿ ಎಲ್ಲರನ್ನೂ ಹೊರಗೆ ಹಾಕುವೆ ಎಂದಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಮನೆಯ ಸದಸ್ಯರು ಒಂದು ದಿನ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು.