BBK 12: ಗಂಡು ಮಕ್ಕಳಿಗೂ ಹೊಟ್ಟೆಕಿಚ್ಚು ಬರುವಂತೆ ಮಾಡಿದ ಸೂರಜ್‌ ಸಿಂಗ್‌ ಮೊದಲು ಇದ್ದ ರೀತಿಯೇ ಬೇರೆ!

Published : Oct 22, 2025, 01:10 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿರುವ ಸೂರಜ್‌ ಸಿಂಗ್‌ ಅವರು ಹ್ಯಾಂಡಸಮ್‌, ಕ್ಯೂಟ್‌ ಎಂದು ಮಹಿಳಾ ಸ್ಪರ್ಧಿಗಳು ಹಾಡಿ ಹೊಗಳುತ್ತಿದ್ದಾರೆ. ತಮಗಿಂತ ಸಖತ್‌ ಆಗಿರೋ ಹುಡುಗ ಬಂದ ಎಂದು ಗಂಡು ಮಕ್ಕಳು ಕೂಡ ಹೊಟ್ಟೆ ಉರಿದುಕೊಂಡಿದ್ದಾರೆ. 

PREV
16
ಎಲ್ಲಿಯವರು?

ಮೈಸೂರಿನ ಮೂಲದವಾರದ ಸೂರಜ್ ಅವರು​, ಐಟಿ ಉದ್ಯೋಗಿಯಾಗಿದ್ದು, ಕೆಲ ವರ್ಷಗಳ ಕಾಲ ಕೆನಡಾನಲ್ಲಿದ್ದರು. ಫಿಟ್‌ನೆಸ್‌ನಲ್ಲಿ ಆಸಕ್ತಿ ಹೊಂದಿರುವ ಅವರು, ಮಾಡೆಲ್ ಹೌದು.

26
ಕೆನಡಾದಿಂದ ಯಾಕೆ ಬಂದ್ರು?

ಕೆನಡಾದಲ್ಲಿ ಅವರು ಉನ್ನತ ಶಿಕ್ಷಣ ಪಡೆದಿದ್ದರು, ಅಲ್ಲಿಯೇ ಕೆಲಸ ಕೂಡ ಮಾಡಿದ್ದರು. ಅಕ್ಕನಿಗೆ ಮದುವೆ ಆಗಿದೆ, ಮೈಸೂರಿನಲ್ಲಿ ತಾಯಿ ಮಾತ್ರ ಇರ್ತಾರೆ ಎಂದು ಅವರು ಭಾರತಕ್ಕೆ ಮರಳಿ ಬಂದಿದ್ದರು. ತಾಯಿ ನಮ್ಮನ್ನು ತುಂಬಾ ಕಷ್ಟಪಟ್ಟು ಸಾಕಿದ್ದಾರೆ, ಅವರ ಜೊತೆ ನಾನು ಈ ಟೈಮ್‌ನಲ್ಲಿ ಇರಬೇಕು ಎಂದು ಹೇಳಿಕೊಂಡಿದ್ದಾರೆ.

36
ಪಾರ್ಟಿ ಮಾಡ್ತಾರೆ

ಸೂರಜ್‌ ಸಿಂಗ್‌ ಅವರು ಫ್ಯಾಷನ್ ಪ್ರಿಯ ಕೂಡ ಹೌದು. ಚೆನ್ನಾಗಿ ರೆಡಿ ಆಗಿ ಪಾರ್ಟಿಗಳಿಗೆ ಹೋಗುತ್ತಾರೆ, ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಅವರು, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

46
ಸಣ್ಣಗಾಗಿದ್ದಾರೆ

ಸೂರಜ್‌ ಅವರು ಮೊದಲು ದಪ್ಪಗಿದ್ದರು. ಆ ಬಳಿಕ ಅವರು ಜಿಮ್‌ಗೆ ಹೋಗಿದ್ದು, ಡಯೆಟ್‌ ಮಾಡಿ ಸಣ್ಣಗಾಗಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

56
ಸಣ್ಣ ಆಗಿರೋ ಬಗ್ಗೆ ಏನು ಹೇಳಿದ್ರು?

“ಅದು ಎಂದಿಗೂ ಪರ್ಫೆಕ್ಟ್‌ ಆಗಿರುತ್ತದೆ ಎಂದು ಅಲ್ಲ, ನನಗೆ ಪರ್ಫೆಕ್ಟ್‌ ಅನಿಸಿಲ್ಲ ಎಂದಾಗಲೂ ಕಾಣಿಸಿಕೊಳ್ತೀನಿ. ನನಗೆ ಕೂಡ ಹಿನ್ನಡೆಗಳು, ನನ್ನ ಮೇಲೆ ನನಗೆ ಅನುಮಾನ ಬಂದಿತ್ತು, ನಿಧಾನಗತಿಯ ಪ್ರಗತಿ ಇತ್ತು, ಒಮ್ಮೊಮ್ಮೆ ಯಾವುದೇ ಪ್ರಗತಿಯೂ ಇರಲಿಲ್ಲ. ಆದರೆ ನಾನು ಎಂದಿಗೂ ನಿಲ್ಲಿಸಲಿಲ್ಲ, ಅದು ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕ ಆಟವಾಗಿತ್ತು. ನನ್ನ ಬಳಿ ಇದು ಆಗಿದೆ ಅಂದ್ರೆ ಬೇರೆಯವರಿಗೆ ಕೂಡ ಆಗುವುದು” ಎಂದು ಸೂರಜ್‌ ಅವರು ಜಿಮ್‌ ವರ್ಕೌಟ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

66
ಬಿಗ್‌ ಬಾಸ್‌ ಮನೆಯವರು ಫಿದಾ

ಬಿಗ್‌ ಬಾಸ್‌ ಮನೆಯಲ್ಲಿ ಸೂರಜ್‌ ನೋಡಿ, ಹೆಣ್ಣು ಮಕ್ಕಳಂತೂ ಫಿದಾ ಆಗಿದ್ದಾರೆ. ಬಿಗ್‌ ಬಾಸ್‌ ಶೋಗೆ ಬರೋ ಹದಿನೈದು ದಿನದ ಹಿಂದೆ ರಾಶಿಕಾ ಅವರು ಸೂರಜ್‌ ವಿಡಿಯೋ ನೋಡಿ ಕಳೆದು ಹೋಗಿದ್ದರಂತೆ. 

Read more Photos on
click me!

Recommended Stories