ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ತಪ್ಪು ಮಾಡಿದ ಕಾಕ್ರೋಚ್ ಸುಧಿ ಅವರಿಗೆ ಕಿಚ್ಚ ಸುದೀಪ್ ಒಂದು ಅಪರೂಪದ ಶಿಕ್ಷೆ ಕೊಟ್ಟಿದ್ದಾರೆ. ಅವರ ಬಳಿಯಿರುವ ಇಮ್ಯುನಿಟಿ ಪವರ್‌ಗೆ ಈಗ ಕುತ್ತು ಬರುವ ಟೈಮ್ ಬಂದಿದೆ. ಹಾಗಾದರೆ ಮುಂದೆ ಏನಾಗುವುದು? ಏನು ಸಮಸ್ಯೆ ಆಗುತ್ತದೆ ಎಂದು ಕಾದು ನೋಡಬೇಕಿದೆ.
ಅಶ್ವಿನಿ ಗೌಡ, ಮಾಳು ನಿಪನಾಳ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ ಅವರು ಫೈನಲಿಸ್ಟ್ ಆಗಿದ್ದಾರೆ. ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೇಟ್ ಟಾಸ್ಕ್‌ನ್ನು ಕಾಕ್ರೋಚ್ ಸುಧಿ ಅವರು ಯಶಸ್ವಿಯಾಗಿ ಮಾಡಿದ್ದು, ಅವರು ಮೊದಲ ಫಿನಾಲೆ ವಿನ್ನರ್ ಆಗಿದ್ದರು.
26
ಕಾಕ್ರೋಚ್ ಸುಧಿಗೆ ಇಮ್ಯನಿಟಿ ಪವರ್ ಸಿಕ್ಕಿತ್ತು
ಈ ಬಾರಿ Expect the unexpected ಎಂಬ ಥೀಮ್ ಇದೆ. ಹೀಗಾಗಿ ಈ ಬಾರಿ ಎರಡು ಫಿನಾಲೆ ಇರುವುದು, ಇಬ್ಬರು ವಿನ್ನರ್ ಎಂದು ಹೇಳಲಾಗಿತ್ತು. ಮೊದಲ ಫಿನಾಲೆಯಲ್ಲಿ ವಿಜೇತರಾದ ಕಾಕ್ರೋಚ್ ಸುಧಿಗೆ, ಒಂದು ಇಮ್ಯುನಿಟಿ ಪವರ್ ನೀಡಲಾಗಿತ್ತು.
36
ಇಮ್ಯುನಿಟಿ ಪವರ್ ಏನು?
ಈ ನಾಮಿನೇಶನ್‌ನಿಂದ ಇಮ್ಯುನಿಟಿ ಪಡೆಯಬಹುದು ಅಥವಾ ಬೇರೆಯವರು ಎಲಿಮಿನೇಟ್ ಆಗ್ತಾರೆ ಎಂದಾದಾಗ ಸೇವ್ ಮಾಡಲೂಬಹುದು. ಇನ್ನು ಕಾಕ್ರೋಚ್ ಸುಧಿ ಅವರು ಈ ಇಮ್ಯುನಿಟಿ ಪವರ್ ಪಡೆದಿದ್ದಾರೆ.
ಈ ಬಾರಿ ರಕ್ಷಿತಾ ಶೆಟ್ಟಿಗೆ ಕಿಚ್ಚ ಸುದೀಪ್ ಅವರು ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬೇರೆ ಯಾರ ಆಹಾರವನ್ನು ಕದ್ದು ತಿನ್ನೋ ಹಾಗಿಲ್ಲ. ಎರಡು ವಾರಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಕಾಕ್ರೋಚ್ ಸುಧಿ ಅವರು ಕಾವ್ಯ ಶೈವ, ರಕ್ಷಿತಾರ ಹಣ್ಣನ್ನು ಕದ್ದು ತಿಂದಿದ್ದಾರೆ.
56
ಕಾಕ್ರೋಚ್ ಸುಧಿಗೆ ಶಿಕ್ಷೆ
ಇದಕ್ಕಾಗಿ ಕಿಚ್ಚ ಸುದೀಪ್ ಅವರು ಒಂದು ಶಿಕ್ಷೆ ನೀಡಿದ್ದಾರೆ. ರಕ್ಷಿತಾ ಅವರು ಕಾಕ್ರೋಚ್ ಸುಧಿಯ ಇಮ್ಯುನಿಟಿ ಚೈನ್ ತಗೊಂಡರೆ, ರಕ್ಷಿತಾ ಕೂಡ ಮುಂದಿನ ದಿನಗಳಲ್ಲಿ ಅವರಿಗೆ ಇಮ್ಯುನಿಟಿ ಸಿಗುತ್ತದೆ. ಆದರೆ ಬೇರೆಯವರಿಗೆ ಇಮ್ಯುನಿಟಿ ಸಿಗೋದಿಲ್ಲ.
66
ರಕ್ಷಿತಾ ಶೆಟ್ಟಿ ಕದಿಯೋದು ಪಕ್ಕಾನಾ?
ಮುಂದಿನ ದಿನಗಳಲ್ಲಿ ಕಾಕ್ರೋಚ್ ಸುಧಿ ಅವರ ಇಮ್ಯುನಿಟಿ ಚೈನ್‌ನ್ನು ರಕ್ಷಿತಾ ಅವರು ಕದಿಯಲು ಸಮರ್ಥರಾಗುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಆಟ ಇನ್ನಷ್ಟು ಕುತೂಹಲಕರವಾಗಿದೆ.