Bhargavi LLB 2.0: ಸತ್ತ ಸಂಧ್ಯಾಳ ಫೋನ್​ ಸ್ವಿಚ್​ ಆನ್​: ಮದುವೆ ಮನೆಯಲ್ಲಿ ಯಾರೂ ಊಹಿಸದ ತಿರುವು!

Published : Nov 09, 2025, 12:12 PM IST

ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್​ಬಿ' ಧಾರಾವಾಹಿಯಲ್ಲಿ, ಲಾಯರ್ ಭಾರ್ಗವಿ ತನ್ನ ಮಾವ ಜೆಪಿ ಪಾಟೀಲ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾಳೆ. ಸಂಧ್ಯಾ ಸಾವಿನ ರಹಸ್ಯ ಭೇದಿಸುವಾಗ ಸಿಕ್ಕ ಪ್ರಮುಖ ಸುಳಿವಿನ ಆಧಾರದ ಮೇಲೆ, ಮದುವೆ ಮನೆಗೆ ಪೊಲೀಸರೊಂದಿಗೆ ಎಂಟ್ರಿ ಕೊಟ್ಟು ಮಾವನಿಗೆ ಶಾಕ್ ನೀಡಿದ್ದಾಳೆ.

PREV
16
ಭಾರ್ಗವಿ ಎಲ್​ಎಲ್​ಬಿ

ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​, ಇದೀಗ ಭಾರಿ ಜನಪ್ರಿಯತೆ ಗಳಿಸುತ್ತಿದ್ದು, ಇದಕ್ಕೆ ಕಾರಣ ಲಾಯರ್​ ಭಾರ್ಗವಿಯ ಗಟ್ಟಿಗಿತ್ತಿತನ ಹಾಗೂ ಸತ್ಯಕ್ಕಾಗಿ ಆಕೆ ಹೋರಾಡುತ್ತಿರುವ ಪರಿ.

26
ಅಪರಾಧಿಗಳ ಮನೆಯ ಸೊಸೆ

ತಾನು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇನೋ, ಅದೇ ಜಿಪಿ ಪಾಟೀಲ್​ನ ಪುತ್ರನನ್ನೇ ಪ್ರೀತಿಸಿದ್ದಳು ಭಾರ್ಗವಿ. ಫೇಮಸ್​ ಲಾಯರ್​ ಆಗಿರೋ ಅಪ್ಪ ಕುತಂತ್ರಿಯಾದರೂ, ಅಷ್ಟೇ ಒಳ್ಳೆಯವನು ಈ ಮಗ. ಅವನಿಗೆ ಭಾರ್ಗವಿಗೂ ತನ್ನ ಅಪ್ಪನಿಗೂ ಆಗಿ ಬರುವುದಿಲ್ಲ ಎಂದು ತಿಳಿದಿದ್ದರೂ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ. ಕೊನೆಗೆ ಮದುವೆಯಾದ ಬಳಿಕ ವಿಷಯ ತಿಳಿದಿದೆ.

36
ಅಪರಾಧಿಗಳ ಸುಳಿವು

ಆದರೆ, ಇದೀಗ ಅದೇಮನೆಯಲ್ಲಿ ಇದ್ದುಕೊಂಡೇ ಅಪರಾಧಿಗಳಿಗೆ ಅವರು ಇರಬೇಕಾಗಿರುವ ಜಾಗಕ್ಕೆ ಕಳುಹಿಸುವ ಪಣ ತೊಟ್ಟಿದ್ದಾಳೆ ಭಾರ್ಗವಿ. ತಾನು ಇನ್ನು ಲಾಯರ್​ಗಿರಿ ಮಾಡುವುದಿಲ್ಲ ಎಂದು ನಂಬಿಸುತ್ತಲೇ ಸಂಧ್ಯಾಳ ಸಾವಿನ ಹಿಂದಿರುವ ರಹಸ್ಯವನ್ನು ಗುಟ್ಟಾಗಿ ಭೇದಿಸುತ್ತಿದ್ದಾಳೆ.

46
ಸಂಧ್ಯಾ ಸಾವು

ಸಂಧ್ಯಾ ಸಾವಿಗೆ ಕಾರಣವಾಗಿರುವ ಅಪರಾಧಿಯೊಬ್ಬನನ್ನೇ ತನ್ನ ನಾದಿನಿಯನ್ನೇ ಪ್ರೀತಿಸ್ತಿರೋ ವಿಷಯ ತಿಳಿದ ಭಾರ್ಗವಿ ಮದುವೆಯನ್ನು ತಡೆಯಲು ಹೋಗಿದ್ದಳು. ಆದರೆ, ಆಕೆ ತಾನು ಗರ್ಭಿಣಿ ಎಂದು ನಂಬಿಸಿ ಅರ್ಜುನ್​ನಿಂದ ಮದುವೆಗೆ ಒಪ್ಪಿಗೆ ಪಡೆದುಕೊಂಡಿದ್ದಾಳೆ.

56
ರೌಡಿಗಳ ಮಟ್ಟ

ಇದೇ ಕಾರಣಕ್ಕೆ ಭಾರ್ಗವಿಗೆ ಮದುವೆಗೆ ಬರದಂತೆ ತಡೆಯಲಾಗಿತ್ತು. ಇದೇ ಕಾರಣಕ್ಕೆ ಭಾರ್ಗವಿಯನ್ನು ಮುಗಿಸಲು ಜೆಪಿ ಪಾಟೀಲ್​ ರೌಡಿಗಳನ್ನು ಕಳುಹಿಸಿದ್ದ. ಆದರೆ ಅವರನ್ನೆಲ್ಲಾ ಮಟ್ಟ ಹಾಕಿದ್ದಾಳೆ ಭಾರ್ಗವಿ. ಇದೇ ವೇಳೆ ಸತ್ತು ಹೋಗಿರುವ ಸಂಧ್ಯಾ ಫೋನ್​​ ಸ್ವಿಚ್​ ಆನ್​ ಆಗಿರುವುದು ತಿಳಿಯುತ್ತಲೇ ಜೆ.ಪಿ.ಪಾಟೀಲ್​ನ ಜಂಗಾಬಲವೇ ಉಡುಗಿ ಹೋಗಿದೆ.

66
ಭಾರ್ಗವಿ 2.0

ಇದೀಗ, ಅವನೇ ಅಪರಾಧಿ ಎನ್ನುವ ಸುಳಿವು ಸಿಗುತ್ತಲೇ ಮದುವೆ ಮನೆಗೆ ಪೊಲೀಸರ ಜೊತೆ ಎಂಟ್ರಿಕೊಟ್ಟಿರೋ ಭಾರ್ಗವಿ, ಮದುವೆ ಮುಗಿಯಿತಲ್ವಾ? ಈಗ ಮಾವನ ಮನೆಗೆ ಕಳುಹಿಸೋಕೆ ಬಂದಿದ್ದೇನೆ ಎಂದಿದ್ದಾಳೆ. ಇಲ್ಲಿಂದ ಭಾರ್ಗವಿ 2.0 ಶುರುವಾಗುತ್ತಿದೆ.

ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories