Bigg Boss ಇತಿಹಾಸದಲ್ಲಿಯೇ ಮೂರು ದಾಖಲೆ ಬರೆದ Mallamma! ಇಂಟರೆಸ್ಟಿಂಗ್​ ವಿಷಯ ತಿಳಿಸಿದ Kiccha Sudeep

Published : Nov 09, 2025, 11:44 AM IST

ಬಿಗ್​ಬಾಸ್​ ಮನೆಯಲ್ಲಿ ಕೆಲವೇ ದಿನಗಳಿದ್ದರೂ, ಮಲ್ಲಮ್ಮ ತಮ್ಮ ಮೌನ ಮತ್ತು ಪ್ರೀತಿಯ ವ್ಯಕ್ತಿತ್ವದಿಂದ ಅಪಾರ ಜನಪ್ರീതി ಗಳಿಸಿದರು. ಮನೆಯಿಂದ ಹೊರಬಂದಾಗ, ಕಿಚ್ಚ ಸುದೀಪ್ ಅವರು ಬಿಗ್​ಬಾಸ್ ಇತಿಹಾಸದಲ್ಲಿ ಮಲ್ಲಮ್ಮ ಸೃಷ್ಟಿಸಿದ ಮೂರು ವಿಶಿಷ್ಟ ದಾಖಲೆಗಳನ್ನು ಬಹಿರಂಗಪಡಿಸಿದರು.  

PREV
17
ಪ್ರೀತಿಯ ಅಮ್ಮ

ಬಿಗ್​ಬಾಸ್​​ (Bigg Boss)ನಲ್ಲಿ ಕೆಲವೇ ದಿನಗಳು ಇದ್ದರೂ ಎಲ್ಲರಿಗೂ ಪ್ರೀತಿಯ ಅಮ್ಮನಾಗಿ, ಬಿಗ್​ಬಾಸ್​​ನಿಂದ ಹೊರಬಂದವರು ಮಲ್ಲಮ್ಮ. ದೊಡ್ಮನೆಯಲ್ಲಿ ಮಲ್ಲಮ್ಮನ ಹವಾ ಜೋರಾಗಿಯೇ ಇತ್ತು. ಜಗಳವಾಡದೇ, ಮೌನವಾಗಿದ್ದುಕೊಂಡೇ ಬಿಗ್​ಬಾಸ್​ನಂಥ ಮನೆಯಲ್ಲಿ ಜನರ ಪ್ರೀತಿ ಗಳಿಸುವುದು ಎಂದರೆ ಸುಲಭದ ಮಾತಲ್ಲ. ಒಂದರ್ಥದಲ್ಲಿ ಇದೇ ಕಾರಣಕ್ಕಾಗಿಯೇ ಅವರನ್ನು ಬೇಗ ಮನೆಯಿಂದ ಹೊರಕ್ಕೆ ಕಳುಹಿಸಲಾಯಿತು ಎನ್ನುವ ಮಾತೂ ಸೋಷಿಯಲ್​ ಮೀಡಿಯಾದಲ್ಲಿ ಕೇಳಿಬರುತ್ತಿದೆ.

27
ಮೌನವಾಗಿದ್ದುಕೊಂಡೇ ಜನಪ್ರೀತಿ ಗಳಿಸಿದವರು

ಜಗಳವಾಡುವ ಮೂಲಕವೋ, ನೆಗೆಟಿವ್​ ಕಮೆಂಟ್ಸ್​ ಮೂಲಕವೋ, ಎಲ್ಲ ಗಡಿಯನ್ನು ದಾಟಿ ಕೆಟ್ಟದ್ದಾಗಿ ನಡೆದುಕೊಳ್ಳುವ ಮೂಲಕವೋ, ಬಿಗ್​ಬಾಸ್​ ಮನೆಯಲ್ಲಿಯೇ ಪ್ರೀತಿ-ಪ್ರೇಮ ಎಂದು ಒಂದು ಹಂತ ದಾಟುವ ಮೂಲಕವೋ... ಕೊನೆಯವರೆಗೂ ಇಲ್ಲಿ ಉಳಿದುಕೊಳ್ಳುವ ಸ್ಪರ್ಧಿಗಳೇ ಹೆಚ್ಚು. ಇಂಥ ಘಟನೆಗಳನ್ನು ಬೈದುಕೊಳ್ಳುತ್ತಲೇ ಕುತೂಹಲದಿಂದ ಸವಿಯುವ ದೊಡ್ಡ ವರ್ಗವೇ ಇರುವ ಕಾರಣ, ಬಿಗ್​ಬಾಸ್​ಗೆ ಟಿಆರ್​ಪಿ (Bigg Boss TRP) ತಂದುಕೊಡುವುದು ನಿಜವೇ. ಆದರೆ, ಕೆಲವೇ ದಿನಗಳು ಇದ್ದರೂ ಯಾರ ತಂಟೆಗೂ ಹೋಗದೇ ಎಲ್ಲರ ಪ್ರೀತಿ ಗಳಿಸಿ, ಈ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಮಲ್ಲಮ್ಮನಂಥವರು ಇಂಥ ರಿಯಾಲಿಟಿ ಷೋಗಳಲ್ಲಿ ಅಪರೂಪವೇ ಸರಿ.

37
ಸುದೀಪ್​ ಹೇಳಿದ್ದೇನು?

ಇವುಗಳ ನಡುವೆಯೇ ಮಲ್ಲಮ್ಮ (Bigg Boss Mallamma)ಮೂರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಬಿಗ್​ಬಾಸ್​ ಮನೆಯಿಂದ ಅವರು ಹೊರಕ್ಕೆ ಬಂದಾಗ, ಕಿಚ್ಚ ಸುದೀಪ್​ ಅವರು ಆಡಿದ ಮಾತುಗಳ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

47
ಪಲ್ಲವಿ ಅವರಿಂದ ಛಾನ್ಸ್​

ಅವರು ಕೆಲಸ ಮಾಡುವ ಟೈಲರಿಂಗ್​ ಷಾಪ್​ನ ಮಾಲೀಕರಾಗಿರುವ ಪಲ್ಲವಿ ಅವರು ಮಲ್ಲಮ್ಮನವರನ್ನು ಬಿಗ್​ಬಾಸ್​​ಗೆ ಪರಿಚಯಿಸಿದವರು. ಅರ್ಥಾತ್​ ಅವರಿಂದಾಗಿಯೇ ಮಲ್ಲಮ್ಮನವರಿಗೆ ಇಂಥ ಛಾನ್ಸ್​ ಸಿಕ್ಕಿದ್ದು. ಇದೇ ಕಾರಣಕ್ಕೆ ಮನೆಯಿಂದ ಹೊರಕ್ಕೆ ಬರುತ್ತಲೇ ಪಲ್ಲವಿ ಅವರನ್ನು ಮಲ್ಲಮ್ಮ ವೇದಿಕೆಯ ಮೇಲೆ ಬರಮಾಡಿಕೊಂಡಿದ್ದರು.

57
ಸುದೀಪ್​ ಮಾತು

ಆ ಸಂದರ್ಭದಲ್ಲಿ ಸುದೀಪ್​ ಅವರು, ಮಲ್ಲಮ್ಮ ಬಿಗ್​ಬಾಸ್​​ ಇತಿಹಾಸದಲ್ಲಿ ಸೃಷ್ಟಿಸಿರುವ ದಾಖಲೆಗಳ ಬಗ್ಗೆ ಮಾತನಾಡಿದ್ದಾರೆ. ಪಲ್ಲವಿ ಅವರ ಎದುರು ಮಾತನಾಡಿದ ಸುದೀಪ್​, ಮಲ್ಲಮ್ಮನವರು ಎಲ್ಲಾ ದಾಖಲೆಗಳನ್ನೂ ಬ್ರೇಕ್​ ಮಾಡಿದ್ದಾರೆ ಎಂದಿದ್ದಾರೆ.

67
ದಾಖಲೆಗಳೇನು?

ಬಿಗ್​ಬಾಸ್​ನಲ್ಲಿ ಇಲ್ಲಿಯವರೆಗೆ ಬಂದ ಸ್ಪರ್ಧಿಗಳ ಪೈಕಿ ವಯಸ್ಸಿನಲ್ಲಿ ಹಿರಿಯರು ಎನ್ನುವುದು ಒಂದಾದರೆ, ಸುಶಿಕ್ಷಿತರು ಎನ್ನುವ ಹಣೆಪಟ್ಟಿ ಇಟ್ಟುಕೊಂಡು ಬಿಗ್​ಬಾಸ್​​ನಲ್ಲಿ ಸ್ಪರ್ಧಿಗಳು ನಡೆದುಕೊಳ್ಳುವ ರೀತಿಗಳ ನಡುವೆ, ಶಿಕ್ಷಣವೇ ಇಲ್ಲದೇ ಬಿಗ್​ಬಾಸ್ ಮನೆ ಪ್ರವೇಶಿಸಿದವರು ಎನ್ನುವ ದಾಖಲೆಯೂ ಮಲ್ಲಮ್ಮ ಅವರಿಗೆ ಇದೆ.

77
ವ್ಯಕ್ತಿತ್ವ ಒಂದೇ

ಬಿಗ್​ಬಾಸ್​ನಲ್ಲಿ ಬರಬೇಕಾದರೆ ಒಂದಿಷ್ಟು ಬ್ಯಾಕ್​ಗ್ರೌಂಡ್ ಬೇಕೇ ಬೇಕು. ಆದರೆ ಅದು ಕೂಡ ಇಲ್ಲದೇ ಕೇವಲ ವ್ಯಕ್ತಿತ್ವ ಒಂದನ್ನೇ ಇಟ್ಟುಕೊಂಡು ಮನೆಯೊಳಕ್ಕೆ ಬಂದಿರುವ ಬಗ್ಗೆ ಸುದೀಪ್​ ಅವರು ಮಲ್ಲಮ್ಮನವರನ್ನು ಶ್ಲಾಘಿಸಿದ್ದಾರೆ.

ಸುದೀಪ್​ ಹೇಳಿರುವ ಮಾತುಗಳ ಪ್ರೊಮೋ ಇಲ್ಲಿದೆ

Read more Photos on
click me!

Recommended Stories