ಬಿಗ್‌ಬಾಸ್ 9ನೇ ವಾರದ ನಾಮಿನೇಷನ್‌ನಲ್ಲಿ ರಾಶಿಕಾ ಶೆಟ್ಟಿ, ಗಿಲ್ಲಿ ನಟ ಮತ್ತು ಕಾವ್ಯಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ತಮ್ಮ ಸ್ನೇಹವನ್ನು ಪ್ರಶ್ನಿಸಿದ್ದಕ್ಕೆ ಕೆರಳಿದ ಗಿಲ್ಲಿ ನಟ, ರಾಶಿಕಾ ಮತ್ತು ಸೂರಜ್ ಸ್ನೇಹವನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದು, ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿದೆ.
ತಮ್ಮ ವಿಶೇಷ ಕಾಮಿಡಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ವ್ಯಕ್ತಿ ಗಿಲ್ಲಿ ನಟ. ಬಿಗ್‌ಬಾಸ್ ಶೋಗೆ ಬಂದ್ಮೇಲೆ ಗಿಲ್ಲಿ ಅವರ ಅಭಿಮಾನಿಗಳ ಸಂಖ್ಯೆಯೂ ಅಧಿಕವಾಗಿದೆ. ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ಗಿಲ್ಲಿ ನಟ ಮಾಡುವ ಕಾಮಿಡಿ ಅಲ್ಲಿರೋರಿಗೆ ಎಷ್ಟು ಕಿರಿಕಿರಿಯನ್ನುಂಟು ಮಾಡುತ್ತೆ ಎಂಬುವುದು ನೋಡುಗರಿಗೆ ಗೊತ್ತಾಗಿತ್ತು. ಸದ್ಯ 9ನೇ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಬಿಗ್‌ಬಾಸ್ ಮನೆಯಲ್ಲಿ ಜ್ವಾಲಾಮಖಿ ಸ್ಫೋಟವಾಗಿದೆ.
26
ಇಬ್ಬರನ್ನು ನಾಮಿನೇಟ್ ಮಾಡಿದ ರಾಶಿಕಾ
ಕಾವ್ಯಾ ಮತ್ತು ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿರುವ ರಾಶಿಕಾ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ. ಈ ಕಾರಣಗಳಿಗೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ತೀವ್ರವಾಗಿ ಖಂಡಿಸಿದ್ದಾರೆ. ಗಿಲ್ಲಿ ಒಬ್ಬರ ಜೊತೆಯಲ್ಲಿಯೇ ಕಾವ್ಯಾ ಇರ್ತಾರೆ ಮತ್ತು ಅವರ ಪರವಾಗಿಯೇ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇಬ್ಬರನ್ನು ನಾಮಿನೇಟ್ ಮಾಡಿರೋದಾಗಿ ರಾಶಿಕಾ ಶೆಟ್ಟಿ ತಿಳಿಸುತ್ತಾರೆ.
36
ಕಾವ್ಯಾ ಚಾಲೆಂಜ್
ತಾಕತ್ತಿದ್ದರೆ ನಮ್ಮ ಹಾಗೆ ಬೇರೆಯವರು ಆ ಫ್ರೆಂಡ್‌ಶಿಪ್ ಬೆಳೆಸಿಕೊಂಡು ತೋರಿಸಲಿ ಎಂದು ರಾಶಿಕಾಗೆ ಕಾವ್ಯಾ ಚಾಲೆಂಜ್ ಹಾಕಿದ್ದಾರೆ. ತಮ್ಮ ಮತ್ತು ಕಾವ್ಯಾ ಸ್ನೇಹದ ಬಗ್ಗೆ ಮಾತನಾಡಿದ್ದಕ್ಕೆ ರಾಶಿಕಾ-ಸೂರಜ್ ಸ್ನೇಹವನ್ನು ಉಲ್ಲೇಖಿಸಿ ತಿರುಗೇಟು ಕೊಡುವ ಕೆಲಸವನ್ನು ಗಿಲ್ಲಿ ನಟ ಮಾಡಿದ್ದಾರೆ. ಇದಕ್ಕೆ ಸೂರಜ್ ಸಿಂಗ್ ಬೇಸರ ವ್ಯಕ್ತಪಡಿಸಿರೋದನ್ನು ಇಂದಿನ ಪ್ರೋಮೋದಲ್ಲಿ ನೋಡಬಹುದು.
ಸೂರಜ್ ಅವರನ್ನು ಸಪ್ಲೈರ್ ಆಗಿ ಮಾಡಿಕೊಂಡಿದ್ದೀರಿ. ನೀವು ಕ್ಯೂಟ್ ಅನ್ನೋದೇ ಒಂದು ಕಾಮಿಡಿ. ನೀವಿದ್ರೆ ಕಂಫರ್ಟ್ ಝೋನ್, ಬೇರೆಯವರಿದ್ರೆ ಅದು ಅಲ್ಲವಾ? ಈ ಮನೆಯಿಂದ ಪಕ್ಕಾ ಹೋಗ್ತೀರಿ ಎಂದು ಗಿಲ್ಲಿ ನಟ ಹೇಳಿದ್ದಾರೆ. ನಿಮ್ಮ ಕಾಮಿಡಿಯನ್ನು ಎಲ್ಲಿ ಬಳಸಬೇಕು ಅಲ್ಲಿ ಬಳಸಿ ಎಂದು ರಾಶಿಕಾ ಹೇಳಿದ್ದಾರೆ.
56
ನಿನ್ನೆ ರಕ್ಷಿತಾ, ಇಂದು ಗಿಲ್ಲಿ ನಟ
ಈ ಪ್ರೋಮೋ ನೋಡಿದ ನೆಟ್ಟಿಗರಿಗೆ ನಿನ್ನೆ ರಕ್ಷಿತಾ ಶೆಟ್ಟಿಯೂ ಕಿರುಚಾಡಿಕೊಂಡು ಸದಸ್ಯರನ್ನು ನಾಮಿನೇಟ್ ಮಾಡಿದ್ದರು. ಇದೀಗ ವಂಶದ ಕುಡಿ ಮಾರ್ಗದಲ್ಲಿಯೇ ಗಿಲ್ಲಿ ಸಾಗುತ್ತಿದ್ದಾರೆ. ನಿನ್ನೆ ಕಾವ್ಯಾ-ರಕ್ಷಿತಾ, ಇಂದು ಗಿಲ್ಲಿ ನಟ-ರಾಶಿಕಾ ಕಿರುಚಾಟ. ಬೇಗ ಈ ನಾಮಿನೇಷನ್ ಮುಗಿಸಿ ಎಂದು ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ.
ಗಿಲ್ಲಿ ಫ್ಯಾನ್ಸ್ ಮನಸ್ಥಿತಿ ಹೇಗಿದೆ ಎಂದರೆ ಗಿಲ್ಲಿ ಅಥವಾ ಕಾವ್ಯ ವಿರುದ್ಧ ಮಾತನಾಡಿದರೆ ಎಲ್ಲರೂ ಕೆಟ್ಟವರು. ಗಿಲ್ಲಿ ಮತ್ತು ಕಾವ್ಯ ಪರ ಮಾತನಾಡಿದರೆ ಅವರು ಒಳ್ಳೆಯವರು. ಇಷ್ಟು ದಿನ ಗಿಲ್ಲಿ ಪರ ಇದ್ದ ರಘು ಮತ್ತು ರಕ್ಷಿತಾ ಇಬ್ಬರಿಗೂ ಗಿಲ್ಲಿ ಮುಖವಾಡ ಗೊತ್ತಾಗಿದೆ. ನಿನ್ನೆ ಕಾವ್ಯ ಜಾಗದಲ್ಲಿ ಅಶ್ವಿನಿ ಇದ್ದಿದ್ದರೆ ರಕ್ಷಿತಾ ಮಾಡಿದ್ದು ಸರಿ ಇದೆ ಎನ್ನುತ್ತಿದ್ದರು. ಗಿಲ್ಲಿ ಕೋತಿ ಆಟದಿಂದ ಆಚೆ ಕಳಿಸಿರಿ ಎಂದು ಕಮೆಂಟ್ ಮಾಡಿದ್ದಾರೆ.