Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ

Published : Dec 01, 2025, 11:01 PM IST

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಹೊಸ ತಿರುವು, ಚಿರು ಅಜ್ಜಿಯ ಪ್ರವೇಶದಿಂದ ದೀಪಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅಜ್ಜಿ ನೀಡಿದ ಸವಾಲನ್ನು ಸ್ವೀಕರಿಸಿರುವ ದೀಪಾ, ಸೋತರೆ ಶಾಶ್ವತವಾಗಿ ಮನೆ ಬಿಟ್ಟು ಹೋಗುವುದಾಗಿ ಪಣ ತೊಟ್ಟಿದ್ದಾಳೆ. ಸೌಂದರ್ಯ ಮತ್ತು ಅಜ್ಜಿ ಸೇರಿ ದೀಪಾಳನ್ನು ಸೋಲಿಸಲು ಕುತಂತ್ರ ರೂಪಿಸಿದ್ದಾರೆ.

PREV
18
ದೀಪಾ ಮತ್ತು ಸೌಂದರ್ಯ

ಬ್ರಹ್ಮಗಂಟು ಸೀರಿಯಲ್​ (Brahmagantu Serial) ಸದ್ಯ ದೀಪಾ ಮತ್ತು ದಿಶಾ ನಡುವೆ ಟ್ವಿಸ್ಟ್​ನಲ್ಲಿ ತೇಲಾಡುತ್ತಿದೆ. ದೀಪಾಳ ಮೇಲೆ ದ್ವೇಷ ಕಾರುವ ಸೌಂದರ್ಯ, ಅವಳೇ ದಿಶಾ ಎನ್ನೋದನ್ನು ಅರಿಯದೇ ಚಿರು ಮತ್ತು ದಿಶಾಳನ್ನು ಒಂದು ಮಾಡಲು ಸ್ಕೆಚ್​ ಹಾಕುತ್ತಿದ್ದಾಳೆ.

28
ಪತ್ನಿಯ ಪ್ರೀತಿ ಇಲ್ಲ

ಚಿರುಗೆ ದೀಪಾ ಮೇಲೆ ಪ್ರೀತಿ ಇದ್ದರೂ ಅದು ಪತ್ನಿಯಾಗಿ ಅಲ್ಲ, ಬದಲಿಗೆ ಸ್ನೇಹಿತೆಯಾಗಿ ಅಷ್ಟೇ. ಆದ್ದರಿಂದ ಪತಿಯಾಗಿ ಆತನ ಪ್ರೀತಿ ಪಡೆಯಲು ಹರಸಾಹಸ ಮಾಡುತ್ತಿದ್ದಾಳೆ ದೀಪಾ. ಆದರೆ ಆಕೆ ಏನೇ ಮಾಡಿದರೂ ಚಿರು ಬದಲಾಗುತ್ತಿಲ್ಲ.

38
ಸೌಂದರ್ಯನೋ, ಗುಣನೊ?

ಮಾಡೆಲ್​ ದಿಶಾ ತಾನೇ ಆಗಿದ್ದರೂ ಪತಿ ಎಲ್ಲಿ, ತನ್ನ ಗುಣಕ್ಕಿಂತ ದಿಶಾಳ ಸೌಂದರ್ಯಕ್ಕೆ ಮಾರುಹೋಗುತ್ತಾನೋ ಎನ್ನುವ ಆತಂಕವೂ ದೀಪಾಗೆ ಇದೆ. ಏಕೆಂದರೆ, ಗುಣಕ್ಕಿಂತ ಸೌಂದರ್ಯನೇ ಮೇಲು ಎಂದು ಚಿರು ಅತ್ತಿಗೆ ಸೌಂದರ್ಯ ಸವಾಲು ಹಾಕಿದ್ದು, ಅದನ್ನು ದೀಪಾ ಎದುರಿಸಬೇಕಿದೆ.

48
ಅಜ್ಜಿಗೂ ದೀಪಾ ಕಂಡ್ರೆ ಆಗಲ್ಲ

ಇದರ ನಡುವೆಯೇ ಚಿರು ಅಜ್ಜಿಯಾಗಿ ಹಿರಿಯ ನಟಿ ಪದ್ಮಾ ವಾಸಂತಿ ಎಂಟ್ರಿಯಾಗಿದೆ. ಈಕೆ ಸೌಂದರ್ಯಳ ಪರ. ದೀಪಾಳ ಕಂಡರೆ ಈ ಅಜ್ಜಿಗೂ ಆಗುವುದಿಲ್ಲ. ಹಳ್ಳಿ ಹುಡುಗಿ ಹಳ್ಳಿ ಹುಡುಗಿ ಎಂದೇ ದೀಪಾಳನ್ನು ಹೀಯಾಳಿಸುತ್ತಿದ್ದಾಳೆ.

58
ಹೊರ ಹಾಕುವ ಪ್ಲ್ಯಾನ್​

ಇದೀಗ ಈ ಅಜ್ಜಿ ದೀಪಾಳನ್ನು ಮನೆಯಿಂದ ಹೊರಕ್ಕೆ ಹಾಕುವ ಪ್ಲ್ಯಾನ್ ಮಾಡಿದ್ದಾಳೆ. ಮೂರು ಟಾಸ್ಕ್​ಗಳನ್ನು ದೀಪಾ ಮತ್ತು ಸೌಂದರ್ಯಳಿಗೆ ಕೊಡುತ್ತೇನೆ. ಯಾರು ಎರಡು ಟಾಸ್ಕ್​ ಗೆಲ್ಲುತ್ತಾರೋ ಅವರೇ ಈ ಮನೆಯ ಪರ್ಫೆಕ್ಟ್​ ಸೊಸೆ ಎನ್ನುವುದು ಆಕೆಯ ಚಾಲೆಂಜ್​.

68
ಮನೆ ಬಿಟ್ಟು ಹೋಗುವ ಮಾತು

ದೀಪಾ ಇದಕ್ಕೆ ಒಪ್ಪಿದ್ದಾಳೆ. ತಾನು ಸೋತರೆ ಮನೆ ಬಿಟ್ಟು ಶಾಶ್ವತವಾಗಿ ಹೊರಗೆ ಹೋಗುವುದಾಗಿ ಹೇಳಿದ್ದಾಳೆ. ಸೌಂದರ್ಯ ಮತ್ತು ಅಜ್ಜಿ ಸೇರಿ ಕುತಂತ್ರದಿಂದ ದೀಪಾಳನ್ನು ಸೋಲಿಸುವ ಪ್ಲ್ಯಾನ್​ ಮಾಡಿದ್ದಾರೆ.

78
ವೀಕ್ಷಕರ ಬೇಸರ

ಇದೀಗ ನಟಿ ಪದ್ಮಾ ವಾಸಂತಿ ಅವರ ಎಂಟ್ರಿ ವೀಕ್ಷಕರಿಗೆ ತುಂಬಾ ಬೇಸರ ತಂದಿದೆ. ಅದಕ್ಕೆ ಕಾರಣ, ನಟಿಯನ್ನು ನೆಗೆಟಿವ್​ ರೋಲ್​ನಲ್ಲಿ ತೋರಿಸಿರುವುದು. ಅವರನ್ನು ಪ್ಲೀಸ್​ ವಿಲನ್​ ಮಾಡಬೇಡಿ. ಚಿರು ಮತ್ತು ದೀಪಾ ಇಬ್ಬರನ್ನೂ ಒಂದು ಮಾಡುವ ಕ್ಯಾರೆಕ್ಟರ್​ ಮಾಡಿ ಬದಲಾಯಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

88
ಸದ್ಯ ವಿಲನ್​

ಆದರೆ ಸದ್ಯದ ಮಟ್ಟಗೆ ಪದ್ಮಾ ವಾಸಂತಿ (Actress Padma Vasanti) ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಸೀರಿಯಲ್​ ಯಾವ ಸ್ವರೂಪ ಪಡೆಯುತ್ತದೆಯೋ ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories