BBK 12: ಬೆನ್ನಿಗೆ ಚೂರಿ ಹಾಕಿದ್ರೂ ವಂಶದ ಕುಡಿ ರಕ್ಷಿತಾ ಶೆಟ್ಟಿಗೆ ಬುದ್ಧಿ ಹೇಳಿದ ಗಿಲ್ಲಿ ನಟ

Published : Dec 02, 2025, 07:49 AM IST

ಬಿಗ್‌ಬಾಸ್ ಸೀಸನ್ 12ರ 9ನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಹೊಸ ತಿರುವು ಪಡೆದಿದೆ. ಮಾಳು ಅವರನ್ನು ಉಳಿಸಲು ಹೋಗಿ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಘಟನೆಯು ಸ್ಪರ್ಧಿಗಳ ನಡುವಿನ ಸ್ನೇಹ ಸಂಬಂಧದಲ್ಲಿ ಮನಸ್ತಾಪದ ಕಿಡಿ ಹೊತ್ತಿಸಿದೆ.

PREV
15
ಮನಸ್ತಾಪದ ಕಿಡಿ

ಬಿಗ್‌ಬಾಸ್ ಸೀಸನ್ 12 ಶೋ 9ನೇ ವಾರಕ್ಕೆ ಕಾಲಿಟ್ಟಿದ್ದು, ಹಲವು ತಿರುವುಗಳೊಂದಿಗೆ ವೀಕ್ಷಕರನ್ನು ಆಕರ್ಷಿಸುತ್ತಿದೆ. ಇಷ್ಟು ದಿನ ಬಂದಾಯ್ತು, ಟ್ರೋಫಿ ಪಡೆಯಲೇಬೇಕೆಂಬ ಹಠಕ್ಕೆ ಸ್ಪರ್ಧಿಗಳು ಬಂದಿದ್ದಾರೆ. ಹಾಗಾಗಿ ತಮ್ಮ ಆಟದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಿದ್ರೆ, ಜೊತೆಯಾಗಿದ್ದರ ನಡುವೆಯೇ ಮನಸ್ತಾಪದ ಕಿಡಿ ಹೊತ್ತಿಕೊಂಡಿದೆ

25
ನಾಮಿನೇಟ್

ಬೆನ್ನಿಗೆ ಕಟ್ಟಿಕೊಂಡಿರುವ ಅರ್ಧವೃತ್ತಾಕಾರದ ಹಲಗೆಗೆ ಚೂರಿ ಹಾಕುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿ ಅತ್ಯುತ್ಸಾಹದಿಂದ ಕಂಡು ಬಂತೆ ಕಾಣಿಸಿತ್ತು. ಜನರು ತಮ್ಮನ್ನು ಸೇವ್ ಮಾಡ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವೂ ಕಾಣಿಸಿತು. ಏಳನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಪಡೆದು ಮೊದಲಿಗರಾಗಿ ಸೇವ್ ಆಗಿರೋದು ಈ ಆತ್ಮವಿಶ್ವಾಸಕ್ಕೆ ಕಾರಣವಾಗಿರಬಹುದು.

35
ವಂಶದ ಕುಡಿ

ಗಿಲ್ಲಿ ನಟ ಅವನರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡುತ್ತಾರೆ. ತಮ್ಮ ಹಲಗೆಯಲ್ಲಿರುವ ಚೂರಿಗಳನ್ನು ತೆಗೆದುಕೊಳ್ಳದೇ ಮಾಳು ಅವರ ಬಳಿಯಲ್ಲಿದ್ದ ಚೂರಿ ಬಳಕೆ ಮಾಡುತ್ತಾರೆ. ಈ ಮೂಲಕ ಮಾಳು ಅವರನ್ನು ಸೇಫ್ ಮಾಡಲು ಪ್ರಯತ್ನಿಸುತ್ತಾರೆ. ಇದನ್ನು ನೋಡಿದ ಗಿಲ್ಲಿ ನಟ ತನ್ನ ವಂಶದ ಕುಡಿಗೆ ಬುದ್ಧಿ ಹೇಳುವ ಕೆಲಸವನ್ನು ಮಾಡುತ್ತಾರೆ.

45
ನಂಬಿಕೆ

ನಿನ್ನ ಹಲಗೆಯಲ್ಲಿಯೇ 5 ಚೂರಿಗಳಿದ್ದು, ಮೊದಲು ನೀನು ಸೇವ್ ಆಗೋದನ್ನು ನೋಡಿಕೊಳ್ಳಬೇಕು. ಇದೇನೋ ಫ್ಯಾಮಿಲಿ ಅಲ್ಲ. ನಿನ್ನ ಆಟವನ್ನು ನೀನು ಆಡಬೇಕು. ನಿನಗೆ ಮಾಳು ಅವರನ್ನು ಸೇವ್ ಮಾಡೋದು ಬೇಕಿದೆ ಎಂದು ಗಿಲ್ಲಿ ನಟ ಹೇಳುತ್ತಾರೆ. ಇದಕ್ಕೆ ಜನರು ನನ್ನನ್ನು ಉಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ರಕ್ಷಿತಾ ಶೆಟ್ಟಿ ತಿರುಗೇಟು ಹೇಳುತ್ತಾರೆ.

ಇದನ್ನೂ ಓದಿ: BBK 12: ಗಿಲ್ಲಿ ನಟ, ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ? - ವೀಕ್ಷಕರ ಕೆಂಗಣ್ಣಿಗೆ ಗುರಿಯಾದ Kavya Shaiva

55
ಮಾಳು 11ನೇ ಸ್ಥಾನ

ಮಾಳು ಅವರನ್ನು 11ನೇ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ರಕ್ಷಿತಾ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ. ತಮ್ಮನ್ನು ನಾಲ್ಕನೇ ಸ್ಥಾನದಲ್ಲಿ ನಿಲ್ಲಿಸಿದ್ಯಾಕೆ ಎಂಬುದರ ಬದಲಾಗಿ ಮಾಳು ಮತ್ತು ಗಿಲ್ಲಿ ನಟ ಅವರನ್ನು ಹೋಲಿಕೆ ಮಾಡಿ ಧನುಷ್ ಅವರನ್ನು ಪ್ರಶ್ನೆ ಮಾಡುತ್ತಾರೆ. ಹಾಗೆಯೇ ನಾಮಿನೇಷನ್ ಪ್ರಕ್ರಿಯೆಯಲ್ಲಿಯೂ ಕಾವ್ಯಾ ಜೊತೆಗೂ ರಕ್ಷಿತಾ ವಾಕ್ಸಮರ ನಡೆಸಿರೋದು ಕಂಡು ಬಂತು.

ಇದನ್ನೂ ಓದಿ: Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ

Read more Photos on
click me!

Recommended Stories