ಇಷ್ಟು ವಾರಗಳಿಂದ ಸ್ವಲ್ಪ ಸಮಾಧಾನದಿಂದ ಬಿಗ್ ಬಾಸ್ ಕನ್ನಡ 12 ಶೋನಲ್ಲಿ ವೀಕೆಂಡ್ ಎಪಿಸೋಡ್ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಈ ಬಾರಿ ಸ್ಪರ್ಧಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇವತ್ತು ನಾನು ಮುಖಕ್ಕೆ ಹೊಡೆದಂತೆ ಮಾತಾಡ್ತೀನಿ ಎಂದು ಅವರು ಮೊದಲೇ ಎಚ್ಚರಿಕೆ ಕೊಟ್ಟಿದ್ದರು.
ಈ ವಾರ ಅಶ್ವಿನಿ ಗೌಡ ಅವರದ್ದೇ ಸೌಂಡ್ ಆಗಿತ್ತು. ಗಿಲ್ಲಿ ನಟ ಹಾಗೂ ರಘು ಜೊತೆ ಅಶ್ವಿನಿ ಗೌಡ ಅವರು ಜಗಳ ಮಾಡಿಕೊಂಡಿದ್ದರು. ವಾರ ಪೂರ್ತಿ ಅಶ್ವಿನಿ ಕಿರುಚಾಟವೇ ಕೇಳಿಸುತ್ತಿತ್ತು. ಇದರ ಮಧ್ಯೆ ಉಪವಾಸ ಸತ್ಯಾಗ್ರಹ ಕೂಡ ಇತ್ತು.
25
ಟಾಸ್ಕ್ ಹಳ್ಳ ಹಿಡಿದಿತ್ತು.
ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರು ಮನೆಯಲ್ಲಿ ಸರಿಯಾಗಿ ಕೆಲಸ ಮಾಡೋದಿಲ್ಲ ಎಂಬ ಆರೋಪ ಇತ್ತು. ಇವರನ್ನು ಉಸ್ತುವಾರಿಯನ್ನಾಗಿ ಮಾಡಿದರೆ, ಅಲ್ಲಿಯೂ ಜಗಳ ಆಡಿದ್ದರು. ಉಸ್ತುವಾರಿಗಳೇ ಆಟವನ್ನು ಸರಿಯಾಗಿ ಆಡಿಸಲಿಲ್ಲ, ಅರ್ಥ ಮಾಡಿಕೊಂಡಿಲ್ಲ ಅಂದರೆ ಏನು ಕಥೆ. ಒಟ್ಟಿನಲ್ಲಿ ಟಾಸ್ಕ್ ಹಳ್ಳ ಹಿಡಿದಿತ್ತು.
35
ಅಶ್ವಿನಿ ಸುತ್ತವೇ ವೀಕೆಂಡ್ ಚರ್ಚೆ
ನನಗೆ ಗೌರವ ಕೊಡಿ, ಅಶ್ವಿನಿ ಗೌಡ ಅವರೇ ಎಂದು ಹೇಳಿ ಎಂದು ಅಶ್ವಿನಿ ಬೇರೆ ಪಟ್ಟು ಹಿಡಿದಿದ್ದರು. ವೀಕ್ಷಕರು ಕೂಡ ಇದನ್ನು ತಿರಸ್ಕಾರ ಮಾಡಿದ್ದರು. ಈಗ ಈ ವಿಚಾರವನ್ನು ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆ ಮಾಡಿದ್ದಾರೆ. ಅಶ್ವಿನಿ ಸುತ್ತವೇ ವೀಕೆಂಡ್ ಎಪಿಸೋಡ್ ಪ್ರಸಾರ ಆದಂತಿದೆ.
ಒಂದು ಟಾಸ್ಕ್ ಬರುತ್ತದೆ, ಉಸ್ತುವಾರಿಯಾಗಿ ಮಾಡಿದ್ದು ಸರಿನಾ? ನಿಮಗೆ ಕಾಣಿಸ್ತಿಲ್ವಾ? ರೂಲ್ಸ್ ಬುಕ್ ಇಲ್ವಾ? ಈ ರೀತಿ ಅರ್ಥ ಮಾಡಿಕೊಂಡಿದ್ದಕ್ಕೆ ಚಪ್ಪಾಳೆ ತಟ್ಟಲಾ? ಶಿಳ್ಳೆ ಹೊಡೆಯಲಾ? ಊಟ ಬಿಟ್ಟು ಸಾರಿ ಕೇಳಿಸಿಕೊಳ್ಳೋದು. ಅಶ್ವಿನಿಗೋಸ್ಕರ ಯಾರು ಊಟ ಬಿಟ್ಟರು ಅಂತ ಗೊತ್ತಾಗಲಿಲ್ಲ. ಊಟ ಬಿಡೋದು ಇಮೋಶನಲ್ ಬ್ಯಾಕ್‌ಮೇಲ್ ಆಗತ್ತೆ ಎಂದು ಕಿಚ್ಚ ಸುದೀಪ್ ಅವರು ಸಿಟ್ಟಿನಿಂದ ಹೇಳಿದ್ದಾರೆ.
55
ಅಶ್ವಿನಿ ಗೌಡಗೆ ಬೇಸರ
ಕಿಚ್ಚ ಸುದೀಪ್ ಮಾತಿಗೆ ಅಶ್ವಿನಿ ಗೌಡ ಅವರಿಗೆ ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದಾರೆ. ಅಶ್ವಿನಿ ಗೌಡ ಅವರು ಪದೇ ಪದೇ ಹೆಣ್ಣು ಮಕ್ಕಳಿಗೆ ಅವಮಾನ ಆಗ್ತಿದೆ, ನಿಂದನೆ ಆಗ್ತಿದೆ, ಏಕವಚನದಲ್ಲಿ ಮಾತನಾಡೋದು ಸರಿ ಅಲ್ಲ ಎಂದು ಹೇಳುತ್ತಿದ್ದರು. ಇದಕ್ಕೂ ಕೂಡ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.