Annayya Serial: ಅಣ್ಣಯ್ಯ ಧಾರಾವಾಹಿಯಿಂದ ಹೊರಬಂದ್ರಾ ಖ್ಯಾತ ನಟಿ? ಕಾರಣ ಏನು?

Published : Nov 22, 2025, 02:58 PM IST

Annayya Kannada Serial: ಧಾರಾವಾಹಿಗಳಲ್ಲಿ ಹೀರೋ, ಹೀರೋಯಿನ್‌ ಪೋಷಕ ಪಾತ್ರಗಳಿಂದ ಹಿಡಿದು ಬದಲಾವಣೆ ಆಗುತ್ತಿರುತ್ತದೆ. ಕೆಲವರು ಮಾತ್ರ ಆರಂಭದಿಂದ ಅಂತ್ಯದವರೆಗೂ ಅವರ ಪಾತ್ರಕ್ಕೆ ಜೀವ ತುಂಬೋದುಂಟು. ಈಗ ಅಣ್ಣಯ್ಯ ಸೀರಿಯಲ್‌ನಿಂದ ಓರ್ವ ನಟಿ ಹೊರಬಂದಿದ್ದಾರಾ ಎಂಬ ಪ್ರಶ್ನೆ ಮೂಡಿದೆ. 

PREV
15
ಸಾಕಷ್ಟು ಟ್ರ್ಯಾಕ್‌ಗಳಿವೆ

ಅಣ್ಣಯ್ಯ ಧಾರಾವಾಹಿಯಲ್ಲಿ ಸಾಕಷ್ಟು ಟ್ರ್ಯಾಕ್‌ಗಳಿವೆ. ಪಾರು-ಶಿವು, ರಶ್ಮಿ-ಜಿಮ್‌ ಸೀನ, ರಾಣಿ-ಮನು, ವೀರಭದ್ರೇಗೌಡ ಕುಟುಂಬ ಹೀಗೆ ಕಥೆಗಳಿವೆ. ಅದರಲ್ಲಿ ರಶ್ಮಿ ಹಾಗೂ ಜಿಮ್‌ ಸೀನ ಮದುವೆ ಸ್ಟೋರಿಯಂತೂ ವಿಭಿನ್ನವಾಗಿದೆ.

25
ಜಿಮ್‌ ಸೀನ, ರಶ್ಮಿ ಮಧ್ಯೆ ಲವ್‌ ಇಲ್ಲ

ಜಿಮ್‌ ಸೀನ ಹಾಗೂ ರಶ್ಮಿ ಮದುವೆಯಾದರೂ ಕೂಡ ಪ್ರೀತಿಯೂ ಇಲ್ಲ. ಸೀನ ಮೊದಲೇ ಪಿಂಕಿ ಎನ್ನುವವರನ್ನು ಪ್ರೀತಿ ಮಾಡುತ್ತಿದ್ದನು. ಮದುವೆಯಾದರೂ ಕೂಡ ಅವನು, ಪಿಂಕಿಯನ್ನು ಬಿಡಲು ರೆಡಿ ಇಲ್ಲ.

35
ರಶ್ಮಿ, ಸೀನನನ್ನು ದೂರ ಮಾಡ್ತಿರೋ ಪಿಂಕಿ

ಪಿಂಕಿ ಪಾತ್ರದಲ್ಲಿ ನಟಿ ಸಹನಾ ಶೆಟ್ಟಿ ಅವರು ಅಭಿನಯಿಸುತ್ತಿದ್ದಾರೆ. ಸಹನಾ ಅವರ ಅಭಿನಯಕ್ಕೆ ಒಳ್ಳೆಯ ಮೆಚ್ಚುಗೆ ಸಿಗ್ತಿದೆ. ರಶ್ಮಿ-ಸೀನನನ್ನು ಪಿಂಕಿ ದೂರ ಮಾಡುತ್ತಿದ್ದಾಳೆ ಎಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದೂ ಇದೆ.

45
ಸಹನಾ ಶೆಟ್ಟಿ ಹೊರಬಂದ್ರಾ?

ಪಿಂಕಿ ಪಾತ್ರಧಾರಿ ಸಹನಾ ಶೆಟ್ಟಿ ಅವರು ಈ ಸೀರಿಯಲ್‌ ಬಿಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸೀರಿಯಲ್‌ ತಂಡವಾಗಲೀ, ಸಹನಾ ಶೆಟ್ಟಿಯಾಗಲೀ ಉತ್ತರ ನೀಡಿಲ್ಲ.

55
ಕಾರಣ ಏನು?

ಅಂದಹಾಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಗೌರಿ ಕಲ್ಯಾಣ ಎನ್ನುವ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಸೀರಿಯಲ್‌ನಲ್ಲಿ ಸಹನಾ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ಲೀಡ್‌ ಪಾತ್ರದಲ್ಲಿ ನಟಿಸುವವರು ಏಕಕಾಲಕ್ಕೆ ಎರಡು ವಾಹಿನಿಗಳ ಸೀರಿಯಲ್‌ಗಳಲ್ಲಿ ನಟಿಸುವಂತಿಲ್ಲ. ಹೀಗಾಗಿ ಸಹನಾ ಶೆಟ್ಟಿ ಅವರು ಅಣ್ಣಯ್ಯ ಧಾರಾವಾಹಿಯಿಂದ ಔಟ್‌ ಆದರೂ ಆಶ್ಚರ್ಯವಿಲ್ಲ.

Read more Photos on
click me!

Recommended Stories