Bigg Boss Kannada Season 12 Episoe: ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಗೆ ನಂದಗೋಕುಲ ಧಾರಾವಾಹಿ ಟೀಂ ಬಂದಿದೆ. ಮಾಧವನ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದರು. ಆ ವೇಳೆ ಮದುವೆ ಬಗ್ಗೆ ಚರ್ಚೆಯಾಗಿದೆ. ಈ ನಡುವೆ ಗಿಲ್ಲಿ ನಟನ ಬಗ್ಗೆ ನಂದಕುಮಾರ್ ಮಾತನಾಡಿದ್ದಾರೆ.
ಅರೇಂಜ್ ಮ್ಯಾರೇಜ್ ಬೆಸ್ಟ್? ಲವ್ ಮ್ಯಾರೇಜ್ ಬೆಸ್ಟ್ ಎಂದು ನಂದಕುಮಾರ್ ಅವರು ಪ್ರಶ್ನೆ ಮಾಡಿದ್ದರು. ಆಗ ಗಿಲ್ಲಿ ನಟ ಅವರು “ನನ್ನ ಪ್ರಕಾರ ಮ್ಯಾರೇಜ್ ಆಗಬಾರದು, ನಾವು ಹೋಗಿ ಬಿದ್ದರೂ, ಅವರೇ ತಳ್ಳಿದರೂ ಕೂಡ ಮದುವೆ ಒಂದೇ” ಎಂದು ಹೇಳಿದ್ದಾರೆ.
25
ಕಾವ್ಯ ಶೈವ ಏನಂದ್ರು?
ಇನ್ನು ಕಾವ್ಯ ಶೈವ ಅವರು, “ನಾನು ಮದುವೆ ಆಗುವ ಹುಡುಗ ಪ್ರಾಮಾಣಿಕವಾಗಿರಬೇಕು. ನಾನು ಲವ್ ಮಾಡ್ತೀನೋ, ಅರೇಂಜ್ ಮ್ಯಾರೇಜ್ ಆಗ್ತಿನೋ, ಗೊತ್ತಿಲ್ಲ” ಎಂದಿದ್ದಾರೆ.
35
ರಾಶಿಕಾ ಶೆಟ್ಟಿ ಏನಂದ್ರು?
ಇನ್ನು ರಾಶಿಕಾ ಶೆಟ್ಟಿ ಅವರು, “ನಾನು ಮದುವೆ ಆಗುವ ಹುಡುಗ ನೋಡೋಕೆ ಚೆನ್ನಾಗಿರಬೇಕು, ನನಗೆ ತಾಳ್ಮೆ ಇಲ್ಲ, ಅವನಿಗೆ ತಾಳ್ಮೆ ಇರಬೇಕು. ನನ್ನನ್ನು ಜಾಸ್ತಿ ಪ್ರೀತಿ ಮಾಡಬೇಕು” ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ನಮ್ಮ ಸ್ಪರ್ಧಿಗಳಲ್ಲಿ ಒಬ್ಬರಿಗೆ ಈ ಗುಣ ಇತ್ತು” ಎಂದು ಹೇಳಿದ್ದಾರೆ.
ನಂದಗೋಕುಲ ಧಾರಾವಾಹಿ ಟೀಂ ಜೊತೆ ಮಾತನಾಡುವಾಗ, “ನಮ್ಮನ್ನು ನೋಡಿ ಹೊಡೆಯಬೇಕು ಅಂತ ಅನಿಸತ್ತಾ?” ಎಂದು ಗಿಲ್ಲಿ ನಟ ಅವರು ಪ್ರಶ್ನೆ ಮಾಡಿದ್ದಾರೆ. ಆಗ ನಂದಕುಮಾರ್ ಅವರು, “ಗಿಲ್ಲಿ ಎಷ್ಟು ಕಾಮಿಡಿ ಮಾಡ್ತಾನೋ ಹಾಗೆ ಲೈಫ್‌ನ್ನು ಸೀರಿಯಸ್ ಆಗಿಯೂ ತಗೊಂಡಿದ್ದಾನೆ. ಗಿಲ್ಲಿಗೆ ಎರಡು ಮುಖವಿದೆ, ಸೀರಿಯಸ್ ಇದ್ದಾಗ ಒಂದು ವರ್ತನೆ, ಕಾಮಿಡಿಯಾಗಿದ್ದಾಗ ವರ್ತಿಸೋದು ಬೇರೆ ಥರ ಇದೆ” ಎಂದು ಹೇಳಿದ್ದಾರೆ. ಇದು ಟಿವಿಯಲ್ಲಿ ಬಂದೇ ಇಲ್ಲ. 24/7 ಲೈವ್‌ನಲ್ಲಿ ಪ್ರಸಾರ ಆಗಿದೆ.
55
ರಕ್ಷಿತಾ ಶೆಟ್ಟಿ ಏನಂದ್ರು?
ರಕ್ಷಿತಾ ಶೆಟ್ಟಿ ಅವರು, “ನನ್ನ ಹುಡುಗ ಓವರ್ ಥಿಂಕ್ ಮಾಡಬಾರದು, ಎಂಜಾಯ್ ಮಾಡಬೇಕು, ಆರಾಮಾಗಿರಬೇಕು” ಎಂದು ಹೇಳಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.