Bigg Boss Kannada 12 : ಮತ್ತೆ ಬಿಗ್ ಬಾಸ್ ಮನೆಗೆ ಬರೋದು ಅಸಾಧ್ಯ, ಬೇಸರದಲ್ಲಿ ರಕ್ಷಿತಾ ವೀಕ್ಷಕರಿಗೆ ಮನವಿ ಮಾಡಿದ್ದೇನು?

Published : Jan 10, 2026, 01:45 PM IST

Bigg Boss Kannada 12 Rakshita Shetty : ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತಕ್ಕೆ ಬಂದಿದೆ. ಶೋ ಮುಗಿಯೋಕೆ ಇನ್ನೊಂದೇ ವಾರ ಇದೆ. ಇಂದು ಎಲಿಮಿನೇಷನ್ ನಡೆಯಲಿದ್ದು, ನೋವಿನಲ್ಲಿ ರಕ್ಷಿತಾ ಏನು ಹೇಳಿದ್ದಾರೆ ಗೊತ್ತಾ?

PREV
16
ಕೊನೆ ಘಟ್ಟದಲ್ಲಿ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ 12ರ ರಿಯಾಲಿಟಿ ಶೋ ಕೊನೆ ಹಂತಕ್ಕೆ ಬರ್ತಿದೆ. ಟಾಪ್ 6 ಸ್ಪರ್ಧಿಗಳಲ್ಲಿ ಧನುಷ್ ಮೊದಲ ಫಿನಾಲೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ವೀಕ್ ಡೇ ಹಾಗೂ ವೀಕ್ ಆಂಡ್ ನಲ್ಲಿ ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡ್ತಿದ್ದ ಬಿಗ್ ಬಾಸ್ ಫಿನಾಲೆ ಜನವರಿ 17 -18 ರಂದು ನಡೆಯಲಿದೆ. ಬಿಗ್ ಬಾಸ್ ಮುಗಿಯುತ್ತಿರೋದು ಬರೀ ವೀಕ್ಷಕರಿಗಲ್ಲ ಕಂಟೆಸ್ಟೆಂಟ್ ಗಳಿಗೂ ಬೇಸರದ ವಿಷ್ಯ

26
ರಕ್ಷಿತಾ ಶೆಟ್ಟಿ ಬೇಸರ

ಬಿಗ್ ಬಾಸ್ ಮನೆಯ ಪುಟ್ಟಿ, ಗಿಲ್ಲಿಯ ವಂಶದ ಕುಡಿ ಎಂದೇ ಪ್ರಸಿದ್ಧಿ ಪಡೆದಿರುವ ರಕ್ಷಿತಾ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಪ್ರಸಿದ್ಧಿ ಪಡೆದಿದ್ದರು, ಇಷ್ಟು ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿರಲಿಲ್ಲ. ಬಿಗ್ ಬಾಸ್ ಗೆ ಬಂದಾಗ್ಲೂ ಇವರ್ಯಾರು ಅಂತ ಗೂಗಲ್ ಸರ್ಚ್ ಮಾಡಿದವರು ಸಂಖ್ಯೆ ಸಾಕಷ್ಟಿದೆ. ಈಗ ರಕ್ಷಿತಾ, ಕರ್ನಾಟಕದ ಮೂಲೆ ಮೂಲೆಗೆ ಪರಿಚಿತರಾಗಿದ್ದಾರೆ. ತಮ್ಮ ಆಟದ ಮೂಲಕ ಇಲ್ಲಿಯವರೆಗೆ ಬಂದಿದ್ದಾರೆ. ಬಿಗ್ ಬಾಸ್ ಶೋ ಮುಗಿತಿರೋದು ಅವರಿಗೂ ಬೇಸರತರಿಸಿದೆ. ಬಿಗ್ ಬಾಸ್ ಮನೆಯಲ್ಲಿ ಸಂಪೂರ್ಣ ಜೀವಿಸಿರುವ ರಕ್ಷಿತಾಗೆ ಕುಟುಂಬಸ್ಥರು ನೆನಪಾಗಿದ್ದು ಬಹಳ ಅಪರೂಪ. ಗಿಲ್ಲಿ ಫ್ರೆಂಡ್, ರಘು ಅಣ್ಣ, ಮಾಳು ಅಣ್ಣ ಎನ್ನುತ್ತಲೇ ಸಂಬಂಧ ಬೆಳೆಸಿಕೊಂಡಿರುವ ರಕ್ಷಿತಾ, ಬಿಗ್ ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ತಾರಂತೆ.

36
ವೀಕ್ಷಕರಿಗೆ ರಕ್ಷಿತಾ ಮನವಿ

ರಕ್ಷಿತಾ ಬೆಡ್ ಮೇಲೆ ಮಲಗಿಕೊಂಡು ಕ್ಯಾಮರಾ ಜೊತೆ ಮಾತನಾಡಿದ್ದಾರೆ. ವೀಕ್ಷಕರಿಗೆ ಮನವಿ ಕೂಡ ಮಾಡಿದ್ದಾರೆ. ಇನ್ನು ಬಿಗ್ ಬಾಸ್ ಇರೋದು ಹತ್ತೇ ದಿನ. ಆ ನಂತ್ರ ಬಿಗ್ ಬಾಸ್ ಮನೆಯಲ್ಲಿ ನಮ್ಮನ್ನು ನೀವು ನೋಡೋಕೆ ಸಾಧ್ಯ ಇಲ್ಲ. ಹತ್ತು ದಿನ ಮಾತ್ರ ನೀವು ನಮ್ಮನ್ನು ನೋಡಬಹುದು. ಹಾಗಾಗಿ ಈ ಹತ್ತು ದಿನ ಎಷ್ಟು ಸಾಧ್ಯವೋ ಅಷ್ಟು ಬಿಗ್ ಬಾಸ್ ನೋಡಿ, ನಮ್ಮನ್ನು ನೋಡಿ ಎಂದು ರಕ್ಷಿತಾ ಹೇಳಿದ್ದಾರೆ.

46
ಮೂರು ತಿಂಗಳು ಕಳೆದಿದ್ದು ತಿಳಿಯಲಿಲ್ಲ

ರಕ್ಷಿತಾಗೆ ಮೂರು ತಿಂಗಳು ಕಳೆದಿದ್ದು ತಿಳಿಯಲಿಲ್ಲವಂತೆ. ಬರುವಾಗ ನಾನು ವಾಪಸ್ ಹೋಗ್ತೇವೆ ಎಂಬುದನ್ನು ಆಲೋಚನೆ ಮಾಡಿರಲಿಲ್ಲ. ಅನ್ಲಿಮಿಟೆಡ್ ಅಂದ್ಕೊಂಡಿದ್ದೆ. ಆದ್ರೆ ಈಗ ಗೊತ್ತಾಗಿದೆ ಅನ್ಲಿಮಿಟೆಡ್ ಅಲ್ಲ, ಲಿಮಿಟೆಡ್ ಎಂಬುದು ಅಂತ ರಕ್ಷಿತಾ ಹೇಳಿದ್ದಾರೆ.

56
ರಕ್ಷಿತಾ ಹೇಳಿದ್ದು ಸತ್ಯ

ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಲಕ್ಷದಲ್ಲಿದೆ. ಒಂದಿಷ್ಟು ಮಂದಿ ಲೈವ್ ನೋಡಿದ್ರೆ ಮತ್ತೊಂದಿಷ್ಟು ಮಂದಿ ಎಪಿಸೋಡ್ ನೋಡಿ ಎಂಜಾಯ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಬಿಗ್ ಬಾಸ್ ಹವಾ ಜೋರೇ ಇತ್ತು. ಬಿಗ್ ಬಾಸ್ ಮುಗಿಯುತ್ತಿದ್ದು, ರಕ್ಷಿತಾ ಹೇಳಿದ ಮಾತು ನೂರಕ್ಕೆ ನೂರು ಸತ್ಯ ಎನ್ನುತ್ತಿದ್ದಾರೆ ಫ್ಯಾನ್ಸ್. ಇನ್ನು 10 ದಿನ ಮಾತ್ರ ಬಿಗ್ ಬಾಸ್ ನೋಡ್ಬಹುದು ಎನ್ನುವ ಬೇಸರ ನಮಗೂ ಇದೆ ಅಂತ ಕಮೆಂಟ್ ಕೂಡ ಮಾಡಿದ್ದಾರೆ.

66
ಕಲರ್ಸ್ ಮೇಲೆ ಮುನಿಸು

ಕಲರ್ಸ್ ಕನ್ನಡ ಬಿಗ್ ಬಾಸ್ ಇಂದಿನ ಪ್ರೋಮೋ ಬಿಡುಗಡೆ ಮಾಡಿದೆ. ಸಂಬಂಧದ ವಿಷ್ಯಕ್ಕೆ ಕಿಚ್ಚ ಸುದೀಪ್, ರಕ್ಷಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ರಕ್ಷಿತಾ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಬೇರೆಯವರು ಕಣ್ಣಿಗೆ ಕಾಣೋದಿಲ್ಲ. ಟಿಆರ್ ಪಿಗೆ ರಕ್ಷಿತಾ ಬೇಕು, ಆದರೆ ಅವರನ್ನೇ ನೆಗೆಟಿವ್ ಮಾಡ್ತಿದ್ದಾರೆ, ರಕ್ಷಿತಾ ಮುಗ್ದೆ, ವೋಟ್ ಕೇಳುವ ಬದಲು ಶೋ ನೋಡಿ ಎಂದಿದ್ದಾರೆ. ರಕ್ಷಿತಾ ಈ ಬಾರಿ ಬಿಗ್ ಬಾಸ್ ಗೆಲ್ಲಬೇಕು ಎನ್ನುವ ಕಮೆಂಟ್ ಗಳನ್ನು ಫ್ಯಾನ್ಸ್ ಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories