BBK 12: ಹೆಣ್ಣು ಮಕ್ಕಳ ವಿಷಯದಲ್ಲಿ ಸೆನ್ಸಿಬಿಲಿಟಿ ಕಳ್ಕೊಂಡ ಗಿಲ್ಲಿ ನಟ; ಕ್ಲಾಸ್‌ ತಗೊಂಡ ಕಿಚ್ಚ ಸುದೀಪ್

Published : Nov 10, 2025, 07:57 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಿಷಾ ಗೌಡ, ಗಿಲ್ಲಿ ನಟ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ. ಇತ್ತೀಚೆಗೆ ನಡೆದ ಘಟನೆಯಲ್ಲಿ ಬಿಗ್‌ ಬಾಸ್‌ ನಿಯಮದ ಉಲ್ಲಂಘನೆ ಆಗಿದೆ. ಅಷ್ಟೇ ಅಲ್ಲದೆ ಹುಡುಗಿ ವಿಚಾರದಲ್ಲಿ ಗಿಲ್ಲಿ ನಟ ಸರಿ ಅಲ್ಲ ಎಂದು ಕಿಚ್ಚ ಸುದೀಪ್‌ ತಿಳಿ ಹೇಳಿದ್ದಾರೆ.

PREV
15
ನನ್ನೇ ಆಟ ಆಡಿಸ್ತೀಯಾ?

ಬಾತ್‌ರೂಮ್‌ನಲ್ಲಿದ್ದ ರಿಷಾಗೆ ಗಿಲ್ಲಿ ನಟ ಅವರು ಬಕೆಟ್‌ ಕೊಡು ಎಂದು ಹೇಳಿದ್ದರು. ಆದರೆ ರಿಷಾ ಐದು ನಿಮಿಷ ಎಂದಿದ್ದರು. ಗಿಲ್ಲಿ ನಟ ಮಾತ್ರ ನಾನು ಸುಮ್ಮನೆ ಇರಲ್ಲ, ನನ್ನೇ ಆಟ ಆಡಿಸ್ತೀಯಾ ಎಂದು ಅವರು ರಿಷಾರ ಬಟ್ಟೆಯನ್ನು ತಂದು ಬಾತ್‌ರೂಮ್‌ನಲ್ಲಿ ಹಾಕಿದ್ದರು. ಹೆಣ್ಣು ಮಕ್ಕಳ ಬಟ್ಟೆಯನ್ನು ಮುಟ್ಟೋದು ಸರಿಯೇ? ಎಂಬ ಪ್ರಶ್ನೆ ಎದ್ದಿತ್ತು.

25
ಹೆಣ್ಣು ಮಕ್ಕಳಿಗೆ ಕೊಡೋ ಗೌರವ ಅಲ್ಲ

“ನಮ್ಮ ಮನೆಯಲ್ಲಿ, ವೈಯಕ್ತಿಕ ನನ್ನ ಮನೆಯಲ್ಲಿ ನಮ್ಮ ಅಕ್ಕ-ಪಕ್ಕ ಇರೋದೆಲ್ಲ ಹೆಂಗಸರೇ ಜಾಸ್ತಿ. ಒಟ್ಟಿಗೆ ಹುಟ್ಟಿ ಬೆಳೆದಿದ್ದರೂ ಕೂಡ ಅವರ ಬಟ್ಟೆ ಅಲ್ಲ, ಪರ್ಸ್‌ ನೋಡಬೇಕಿದ್ರೂ ಕೂಡ ಹೆಸಿಟೇಟ್‌ ಮಾಡ್ತೀವಿ. ಆದರೆ ಕೆಲವೇ ದಿನಗಳ ಹಿಂದೆ ಬಂದ ರಿಷಾ ಗೌಡ ಅವರ ಬಟ್ಟೆಯನ್ನು ಮುಟ್ಟಿ, ಅದನ್ನು ಬಾತ್‌ರೂಮ್‌ನಲ್ಲಿ ಹಾಕೋದು ಸರಿಯಲ್ಲ, ಹೆಣ್ಣು ಮಕ್ಕಳಿಗೆ ಕೊಡೋ ಗೌರವ ಅಲ್ಲ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

35
ಕಿಚ್ಚ ಸುದೀಪ್‌ ಕಿವಿ ಹಿಂಡಿದ್ದಾರೆ.

ಗಿಲ್ಲಿ ನಟ ತಪ್ಪು ಮಾಡಿದಾಗ ಸ್ನೇಹಿತೆಯಾಗಿ ಕಾವ್ಯ ಶೈವ ಅವರು ಬುದ್ಧಿ ಹೇಳುತ್ತಾರೆ, ಅಷ್ಟೇ ಸಲುಗೆಯಿದೆ. ಆದರೆ ನೀವು ಅಲ್ಲೇ ಇದ್ದಿರಿ. ಗಿಲ್ಲಿ ನಟ ಆ ರೀತಿ ಮಾಡಿದಾಗ ನೀವು ಆ ಬಟ್ಟೆ ತಂದು ಬೆಡ್‌ ರೂಮ್‌ನಲ್ಲಿ ಇಡಬಹುದಿತ್ತು. ಆದರೆ ನೀವು ಆ ಕೆಲಸ ಮಾಡಲಿಲ್ಲ ಎಂದು ಕಾವ್ಯ ಶೈವಗೆ ಕಿಚ್ಚ ಸುದೀಪ್‌ ಕಿವಿ ಹಿಂಡಿದ್ದಾರೆ.

45
ರಿಷಾಳನ್ನು ಉಳಿಸಿಕೊಂಡ ಮನೆಯವರು

“ಸಲುಗೆ ಇದೆ ಎಂದು ಬೇಡದಿದ್ದ ಕಡೆ ಕೈ ಎತ್ತೋಕೆ ಹೋದರೆ ಆಗೋದು ಇದೆ. ಆದರೆ ಯಾವ ಮನೆಯವರ ಜೊತೆ ನೀವು ಇಷ್ಟೊಂದೆಲ್ಲ ಜಗಳ ಆಡಿ ಕೂಗಾಡ್ತೀರೋ, ಅದೇ ಮನೆ ನಿಮಗೆ ವಾರ್ನಿಂಗ್‌ ಕೊಟ್ಟು ಉಳಿಸಿಕೊಂಡಿದೆ. ಬಹುಮತವಾಗಿ ಮತ ಹಾಕಿ, ಈ ಮನೆ ನಿಮ್ಮನ್ನು ಉಳಿಸಿಕೊಂಡಿದೆ” ಎಂದು ರಿಷಾ ಗೌಡ ಹೇಳಿದ್ದಾರೆ.

55
ಮ್ಯಾನ್‌ಹ್ಯಾಂಡಲಿಂಗ್‌ ಮಾಡಿದ್ರು ಬಚಾವ್‌ ಆದರು

“ಮ್ಯಾನ್‌ ಹ್ಯಾಂಡಲಿಂಗ್‌ ಮಾಡೋದು ಬಿಗ್‌ ಬಾಸ್ ನಿಮಯದ ವಿರುದ್ಧವೇ. ಆದರೆ ಹೊಡೆದಾಗ ಬಿಗ್‌ ಬಾಸ್‌ ಅವರನ್ನು ಮನೆಯಿಂದ ಹೊರಗಡೆ ಕಳಿಸಲಾಗುತ್ತದೆ.‌ ಇಡೀ ಮನೆಯಲ್ಲಿ ತಮಾಷೆಯಾಗಿ ಹೊಡೆಯಲಾಗುತ್ತದೆ. ಹೀಗಾದಾಗ ಏನು ನಿರ್ಧಾರ ತಗೋಬೇಕು ಅಂತ ಗೊತ್ತಾಗಲ್ಲ. ಆದರೆ ಸ್ಪರ್ಧಿಗಳಿಂದಲೇ ಬಹುಮತ ಸಿಕ್ಕಿದ್ದಕ್ಕೆ ಬಚಾವ್‌ ಆಗಿದ್ದೀರಿ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories