Mahanati Grand Finale: 15 ಲಕ್ಷ ರೂ. ಬೆಲೆಬಾಳುವ ಕಿರೀಟ ಇಂದು ಈ ನಟಿಯ ಮುಡಿ ಏರಲಿದೆ!

Published : Nov 09, 2025, 03:51 PM IST

20 ವಾರಗಳ ನಂತರ 'ಮಹಾನಟಿ ಸೀಸನ್-2' ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದು, ಐವರು ಫೈನಲಿಸ್ಟ್‌ಗಳಾದ ಮಾನ್ಯ, ವರ್ಷಾ, ವಂಶಿ, ಶ್ರೀಯ, ಮತ್ತು ಭೂಮಿಕಾ ನಡುವೆ ತೀವ್ರ ಪೈಪೋಟಿ ಇದೆ.  15 ಲಕ್ಷ ಮೌಲ್ಯದ ಕಿರೀಟವನ್ನು ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ.

PREV
16
20 ವಾರಗಳ ಅಭಿನಯ

20 ವಾರಗಳ ಅಭಿನಯದ ನಂತರ ಇಂದು ಮಹಾನಟಿ ಸೀಸನ್​-2 ಗ್ರ್ಯಾಂಡ್​ ಫಿನಾಲೆ (Mahanati Reality Show) ನಡೆಯುತ್ತಿದೆ. ಫಿನಾಲೆ ನಡೆಯುತ್ತಿದೆ. ಇದು ಸೀಸನ್​ -2 ಆಗಿದ್ದು, ಯಾರಿಗೆ ಮಹಾನಟಿಯ ಪಟ್ಟ ಒಲಿಯಲಿದೆ ಎನ್ನುವ ಬಗ್ಗೆ ಸಕತ್​ ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.

26
ಐವರು ಫೈನಲಿಸ್ಟ್​

ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದಾರೆ. ರಮೇಶ್ ಅರವಿಂದ್, ಪ್ರೇಮ, ನಿರ್ದೇಶಕ ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಅವರು ಈ ರಿಯಾಲಿಟಿ ಷೋನ ತೀರ್ಪುಗಾರರಾಗಿದ್ದು, ಇದಾಗಲೇ ಮಹಾನಟಿ ಯಾರು ಎನ್ನುವ ಬಗ್ಗೆ ಡಿಸೈಡ್​ ಮಾಡಲಾಗಿದೆ. ಇಂದು ಅದು ಅಂತಿಮವಾಗಿ ರಿವೀಲ್​ ಆಗಲಿದೆ.

36
ಪ್ರೊಮೋ ರಿಲೀಸ್​

ಇದಾಗಲೇ ಇದರ ಪ್ರೊಮೋ ರಿಲೀಸ್​ ಆಗಿದೆ. 15 ಲಕ್ಷ ರೂಪಾಯಿ ಬೆಲೆ ಬಾಳುವ ಈ ಕಿರೀಟ ಯಾರ ಮುಡಿಲಿಗೆ ಏರಲಿದೆ ಎನ್ನುವ ಬಗ್ಗೆ ನಟಿ ಸುಧಾರಾಣಿ ರಿವೀಲ್​​ ಮಾಡಲಿದ್ದು, ಮಹಾನಟಿಯ ಮುಡಿಗೆ ಕಿರೀಟ ತೊಡಿಸಲಿದ್ದಾರೆ.

46
ಮಹಾನಟಿ ಬಿ.ಸರೋಜಾ ದೇವಿ

ಮಹಾನಟಿ ಬಿ.ಸರೋಜಾ ದೇವಿ ಅವರ ಸ್ಮರಣಾರ್ಥ ಈ ಕಿರೀಟವನ್ನು ನೀಡಲಾಗುತ್ತಿದ್ದು, ಸರೋಜಮ್ಮನವರು ನಾಡು ಕಂಡ ಅದ್ವಿತೀಯ ಕಲಾವಿದೆ ಎಂದು ಸುಧಾರಾಣಿ ಹಾಡಿ ಹೊಗಳಿದ್ದಾರೆ. ಹಾಗಿದ್ದರೆ ಯಾರ ಮುಡಿಲಿಗೆ ಏರಲಿದೆ ಈ ಕಿರೀಟ?

56
ಷಾರ್ಟ್ ಮೂವಿಗಳ ಸ್ಕ್ರೀನಿಂಗ್

ಅಂದಹಾಗೆ, ಅಂತಿಮ ಸ್ಪರ್ಧಿಗಳಾಗಿರುವವರು ಇದಾಗಲೇ ನಿರ್ದೇಶಕರುಗಳಾದ ಹರಿ ಸಂತೋಷ್, ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ನಿರ್ದೇಶಿಸಿರುವ ಷಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ. ಈ ಷಾರ್ಟ್ ಮೂವಿಗಳ ಸ್ಕ್ರೀನಿಂಗ್ ಇದೇ 3ರಂದು ಆಗಿದೆ.

66
ಮಹಾನಟಿ ಉದ್ದೇಶ

ಕಿರುತೆರೆಯಿಂದ ಬೆಳ್ಳಿತೆರೆಗೆ ಎಲ್ಲ ರೀತಿಯ ಅರ್ಹತೆ, ಪ್ರತಿಭೆ ಇರುವ ಯುವತಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ.

ಪ್ರೊಮೋಗಾಗಿ ಇದರ ಮೇಲೆ ಕ್ಲಿಕ್​ ಮಾಡಿ

Read more Photos on
click me!

Recommended Stories