Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟನ ಸ್ನೇಹ, ತಮಾಷೆ, ಜಗಳ, ಮುನಿಸು ಕೂಡ ಹೈಲೈಟ್ ಆಗಿದೆ. ಯಾವಾಗ ನೋಡಿದರೂ ಕಾವು ಕಾವು ಎಂದು ಹೇಳಿಕೊಂಡು ಓಡಾಡುತ್ತಿದ್ದ ಗಿಲ್ಲಿ ನಟನಿಗೆ ಭಯ ಶುರುವಾಗಿದೆ.
ಹೌದು, ಯಾವಾಗ ನೋಡಿದರೂ ಕಾವ್ಯ ಅಂದ್ರೆ ಇಷ್ಟ, ಮದುವೆಯಾಗಲು ಕಾವ್ಯಳಂಥ ಹುಡುಗಿ ಬೇಕು, ಕಾವ್ಯಳನ್ನು ನಾನು ಮಾತ್ರ ಅಳಿಸಬೇಕು ಹೀಗೆ ಅವರು ಒಂದಿಷ್ಟು ತರಲೆಯ, ತಮಾಷೆಯ ಮಾತುಗಳನ್ನು ಹೇಳುತ್ತಲೇ ಇದ್ದರು.
25
ಗಿಲ್ಲಿಯನ್ನು ನಾಮಿನೇಟ್ ಮಾಡಿದ್ರು
ನನಗೆ ಈ ರೀತಿ ರೇಗಿಸಬೇಡ, ಹೀಗೆಲ್ಲ ಮಾತನಾಡಬೇಡ, ಒಳ್ಳೆಯದಲ್ಲ. ಹೊರಗಡೆ ಚೆನ್ನಾಗಿ ಕಾಣಿಸೋದಿಲ್ಲ, ನನ್ನ ವೈಯಕ್ತಿಕ ವ್ಯಕ್ತಿತ್ವವಿದೆ, ಗಿಲ್ಲಿಯಿದ್ದರೆ ಮಾತ್ರ ನಾನಲ್ಲ ಎಂದು ಕಾವ್ಯ ಶೈವ ಅವರು ಸಾಕಷ್ಟು ಬಾರಿ ಹೇಳಿದ್ದರು. ಇದೇ ಕಾರಣ ಇಟ್ಟುಕೊಂಡು ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದರು.
35
ಪೇರೆಂಟ್ಸ್ ಮೀಟ್ ಇರುತ್ತದೆ
ಬಿಗ್ ಬಾಸ್ ಮನೆಯಲ್ಲಿ ಪೇರೆಂಟ್ಸ್ ಮೀಟ್ ಇರುತ್ತದೆ. ಸಾಕಷ್ಟು ಬಾರಿ ಪೇರೆಂಟ್ಸ್‌ಗಳು ಬಂದಾಗ ಸಹಸ್ಪರ್ಧಿಗಳನ್ನು ಹೊಗಳುವುದುಂಟು, ಕೆಲವೊಮ್ಮೆ ವಿರೋಧ ಕೂಡ ಮಾಡೋದುಂಟು. ಈಗ ಕಾವ್ಯ ಮನೆಯವರು ಬಂದರೆ ಏನು ಗತಿ ಎಂದು ಗಿಲ್ಲಿ ನಟ ಅವರು ತಲೆ ಕೆಡಿಸಿಕೊಂಡಿದ್ದಾರೆ.
ಕಾವ್ಯ ಶೈವ ಅವರನ್ನು ಗಿಲ್ಲಿ ನಟ ಗೋಳು ಹೊಯ್ದುಕೊಂಡಿದ್ದಕ್ಕೆ ಅವರ ಮನೆಯವರು ಏನು ಹೇಳಬಹುದು? ಏನು ಮಾತನಾಡಬಹುದು ಎಂದು ಗಿಲ್ಲಿ ನಟ ತಲೆ ಕೆಡಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಅವರು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.
55
ಓಡಿ ಹೋಗ್ತೀನಿ
ಕಾವ್ಯ ಶೈವ ಅವರ ಪಾಲಕರು ಬಂದರೆ ಓಡಿ ಹೋಗ್ತೀನಿ. ಸುಮ್ನೆ ಯಾಕೆ ಬೇಕು? ಅವಿತುಕೊಂಡು ಅವರ ರಿಯಾಕ್ಷನ್ ನೋಡ್ತೀನಿ, ಗಿಲ್ಲಿ ಎಲ್ಲಿ ಹೋದ್ರು ಎಂದು ಹುಡುಕಾಟ ಮಾಡಿದ್ರೆ ನಾನು ಅಲ್ಲೇ ಇರ್ತೀನಿ. ಅದಿಕ್ಕೆ ಒಂದು ಸೂಟ್ ಎತ್ತಿಕೊಂಡಿರ್ತೀನಿ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.