ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಇರುವಾಗಲೇ ಕಥೆ ಯಾವುದ್ಯಾವುದೋ ಮಜಲುಗಳನ್ನು ತೆಗೆದುಕೊಳ್ಳುತ್ತಿದೆ. ಭೂಮಿಕಾ ಮನಸ್ಸು ಒಪ್ಪಿಸಿ, ಅವಳ ಜೊತೆಗೆ ಜೀವನ ಮಾಡಬೇಕು ಎಂದು ಗೌತಮ್ ಅಂದುಕೊಂಡರೆ, ಇನ್ನೊಂದು ಕಡೆ ಜಯದೇವ್ ಆಟವೇ ನಡೆಯುತ್ತಿದೆ.
ಆಸ್ತಿಗೋಸ್ಕರ ಶಕುಂತಲಾ-ಜಯದೇವ್ ನಾಟಕ ಮಾಡಿದ ಬಳಿಕ, ಗೌತಮ್ ತನ್ನೆಲ್ಲ ಆಸ್ತಿಯನ್ನು ಜಯದೇವ್‌ಗೆ ಕೊಟ್ಟು, ಮನೆಯಿಂದ ಹೊರಟು ಹೋದರನು. ಆದರೆ ಗೌತಮ್ 600 ಕೋಟಿ ರೂಪಾಯಿ ಸಾಲ ಮಾಡಿದ್ದನು. ಈ ಸಾಲವನ್ನು ಜಯದೇವ್ ತೀರಿಸಬೇಕಿತ್ತು. ಈಗ ಬ್ಯಾಂಕ್‌ನವರು ಎಲ್ಲ ಅಕೌಂಟ್, ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ. ಗೌತಮ್ ಮನೆಗೆ ಬಂದು ಸಾಲ ತೀರಿಸಬೇಕು ಎಂದು ಜಯದೇವ್ ಆಸೆ ಪಟ್ಟಿದ್ದನು. ಆದರೆ ಗೌತಮ್ ಇವರ ಕೈಗೆ ಸಿಕ್ಕಿರಲಿಲ್ಲ.
25
ಅಜ್ಜಿಯನ್ನು ಕಿಡ್ನ್ಯಾಪ್ ಮಾಡಿಸಿದ ಜಯದೇವ್
ಈಗ ಅಜ್ಜಿ ಮನೆಗೆ ಬಂದಿದ್ದಾಳೆ. ಅಜ್ಜಿ ಬಳಿ ಜಯದೇವ್ ಥಂಬ್ ಇಂಪ್ರೆಶನ್ ಹಾಕಿಸಿಕೊಂಡು, ಬಾಕಿ ಕೆಲಸಗಳನ್ನು ಫೇಕ್ ಮಾಡಿ ಅವಳ ಆಸ್ತಿಯನ್ನು ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಅವಳನ್ನು ಕಿಡ್ನ್ಯಾಪ್ ಮಾಡಿ ಒಂದು ಕಡೆ ಇಟ್ಟಿದ್ದಾನೆ. ಇದು ಲಕ್ಷ್ಮೀಕಾಂತ್ ಕಣ್ಣಿಗೆ ಬಿದ್ದಿದೆ. ಇದನ್ನೀಗ ಅವನು ಆನಂದ್‌ಗೆ ತಿಳಿಸಬೇಕಿದೆ. ಆನಂದ್ ಇದನ್ನು ಗೌತಮ್‌ಗೆ ಹೇಳಬೇಕು.
35
ಜಯದೇವ್ ತಪ್ಪಿಗೆ ಶಿಕ್ಷೆ ಸಿಕ್ಕಿಲ್ಲ
ಆದರೆ ಇದೆಲ್ಲ ಆಗೋದು ಕಷ್ಟ ಇದೆ. ಲಕ್ಷ್ಮೀಕಾಂತ್ ಹಾಗೂ ಆನಂದ್ ಒಟ್ಟಾಗಿರೋದು ಈಗಲೇ ಜಯದೇವ್‌ಗೆ ಗೊತ್ತಾದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಜಯದೇವ್-ಶಕುಂತಲಾಗೆ ಯಾವ ಗತಿ ಬರಲಿದೆ ಎಂದು ಕಾದು ನೋಡಬೇಕಿದೆ. ಕಲಿಯುಗದಲ್ಲಿ ಕುತಂತ್ರಿಗಳು, ಕೇಡಿಗಳೇ ಕಾಲ ಎನ್ನುವಂತೆ ಆಯ್ತು. ಜಯದೇವ್ ಮೆರೆದು ಆರಾಮಾಗಿದ್ದಾನೆ, ಅವನು ಮಾಡಿದ ತಪ್ಪಿಗೆ ಶಿಕ್ಷೆ ಸಿಕ್ಕಿಲ್ಲ.
600 ಕೋಟಿ ರೂಪಾಯಿ ಸಾಲ ಆಗಿದ್ದಕ್ಕೆ ಜಯದೇವ್ ಬೀದಿಗೆ ಬೀಳಬಹುದು ಅಥವಾ ಗೌತಮ್-ಭೂಮಿಕಾ ಸೇರಿಕೊಂಡು ಇವರಿಗೆ ಪಾಠ ಕಲಿಸಬಹುದು ಎಂದು ವೀಕ್ಷಕರು ಬಯಸಿದ್ದರು. ಆದರೆ ಭೂಮಿಕಾ ಮಾತ್ರ ಶಕುಂತಲಾಳ ಭಯದಿಂದ ಕುಟುಂಬದಿಂದ, ಗಂಡನಿಂದ ದೂರ ಇರೋದಾಗಿ ಎಲ್ಲಿಯೂ ಹೇಳುತ್ತಿಲ್ಲ. ಇದು ವೀಕ್ಷಕರಿಗೆ ಬೇಸರ ತಂದಿದೆ. ತಾನಿಲ್ಲ, ತನ್ನ ಮಗ ಕೂಡ ನನ್ನಿಂದ ದೂರ ಇದ್ದಾನೆ ಎಂದು ಗೌತಮ್ ಬೇಸರ ಮಾಡಿಕೊಂಡಿರೋದು ಗೊತ್ತಿದ್ದರೂ ಭೂಮಿಕಾ, ಬಾಯಿಗೆ ಬೀಗ ಹಾಕಿಕೊಂಡಿದ್ದಾಳೆ.
55
ಗೌತಮ್ ಬುದ್ಧಿ ಕಲಿಸ್ತಾನಾ?
ಜಯದೇವ್ ಹಾಗೂ ಶಕುಂತಲಾಗೆ ನಿಜಕ್ಕೂ ಗೌತಮ್ ಬುದ್ಧಿ ಕಲಿಸ್ತಾನಾ? ಮತ್ತೆ ಅವನು ಹಳೆ ಮನೆಗೆ ಬರುತ್ತಾನಾ? ಗೌತಮ್-ಭೂಮಿ ಮನೆಗೆ ಬರಬೇಕು ಎಂದು ಅಜ್ಜಿ ಬಯಸಿದ್ದಳು, ಅದಕ್ಕೆ ಅವಳು ಪ್ಲ್ಯಾನ್ ಮಾಡಿದ್ದಳು. ಅಜ್ಜಿಯಿಂದ ಏನಾದರೂ ಆಗಲಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಅಜ್ಜಿ ಕಿಡ್ನ್ಯಾಪ್ ಆಗಿದೆ. ಹೀಗಾಗಿ ವೀಕ್ಷಕರಿಗೆ ನಿರಾಸೆ ಆಗಿದೆ. ಮುಂದೆ ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.