Bigg Boss ಮನೆಗೆ ಐಶ್ವರ್ಯ ಸಿಂಧೋಗಿ ವೈಲ್ಡ್​ ಕಾರ್ಡ್​ ಎಂಟ್ರಿ? ನಟಿ ಕೊಟ್ಟ ಹಿಂಟ್​ ಏನು ಕೇಳಿ!

Published : Nov 30, 2025, 06:50 PM IST

ಬಿಗ್‌ ಬಾಸ್‌ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ ಅವರ ಸ್ನೇಹದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗೆ ಶಿಶಿರ್ ಅವರ ತಂದೆಯ ಹುಟ್ಟುಹಬ್ಬದ ಡಿನ್ನರ್ ಪಾರ್ಟಿಯಲ್ಲಿ ಐಶ್ವರ್ಯ ಪಾಲ್ಗೊಂಡಿದ್ದು, ಇವರಿಬ್ಬರ ಮದುವೆಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.

PREV
19
ಬಿಗ್​ಬಾಸ್​ 11ರ ಸ್ಪರ್ಧಿ

ಬಿಗ್‌ಬಾಸ್‌ ಮನೆಯಲ್ಲಿ ಲವ್‌, ರೊಮಾನ್ಸ್‌ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್‌ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ (Shishir Shastry)

29
ಸಾಕಷ್ಟು ಬಾರಿ ಜೊತೆ

ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್‌ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್‌ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ.

39
ಡಿನ್ನರ್​ ಡೇಟ್​

ಇದೀಗ ಶಿಶಿರ್ ತಂದೆಯ ಹುಟ್ಟುಹಬ್ಬ ಮೊನ್ನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಶಿಶಿರ್ ತಮ್ಮ ತಂದೆ-ತಾಯಿಯನ್ನು ಜೊತೆಯಾಗಿ ಹೊಟೇಲ್ ಗೆ ಕರೆದುಕೊಂಡು ಹೋಗಿ ಅಪ್ಪನ ಹುಟ್ಟುಹಬ್ಬದ ಡಿನ್ನರ್ ಪಾರ್ಟಿ ಮಾಡಿದ್ದರು. ಶಿಶಿರ್ ಶಾಸ್ತ್ರಿ ಕುಟುಂಬದ ಜೊತೆಗೆ ಐಶ್ವರ್ಯ ಸಿಂಧೋಗಿ (Aishwarya Sindhogi) ಸಹ ಕಾಣಿಸಿಕೊಂಡಿದ್ದು, ಫ್ಯಾಮಿಲಿ ಜೊತೆಯಲ್ಲಿ ಡಿನ್ನರ್ ಡೇಟ್ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಈ ಫೋಟೊಗಳನ್ನು ಐಶ್ವರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದರಿಂದ ಇವರಿಬ್ಬರ ಮದುವೆ ಬಗ್ಗೆ ಮತ್ತೆ ಸುದ್ದಿ ಹರಿದಾಡುತ್ತಿದೆ.

49
ಬಿಗ್​ಬಾಸ್​ಗೆ ಮತ್ತೊಮ್ಮೆ!

ಇದೀಗ ಐಶ್ವರ್ಯ ಸಿಂಧೋಗಿ ಅವರು ಮತ್ತೆ ಬಿಗ್​ಬಾಸ್​ಗೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಫಿಲ್ಮಿ ಕ್ಲಿಪ್​ನಲ್ಲಿ ಇದನ್ನು ಶೇರ್​ ಮಾಡಿಕೊಳ್ಳಲಾಗಿದೆ. ಒಂದೊಂದು ಟಾಸ್ಕ್​ಗೆ ಒಬ್ಬೊಬ್ಬರನ್ನು ಒಳಗೆ ಕಳಿಸ್ತಾ ಇರ್ತಾರೆ. 100 ಪರ್ಸೆಂಟ್​ ಹೋಗಿಯೇ ಹೋಗ್ತೇನೆ. ಯಾವುದಕ್ಕೆ ಎಂದು ಗೊತ್ತಿಲ್ಲ ಎಂದಿದ್ದಾರೆ ನಟಿ. ಸಮ್​ಥಿಂಗ್​ ಸ್ಪೆಷಲ್​ ವೇಟಿಂಗ್​ ಫಾರ್​ ಮಿ ಎಂದಿದ್ದಾರೆ.

59
ನಟಿಯ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಬಿಗ್​ಬಾಸ್​ ಕನ್ನಡ 11ರ ಪಯಣದ ಕುರಿತು ಹೇಳುವುದಾದರೆ, ಉತ್ತಮ ರೀತಿಯಲ್ಲಿ ಭಾವಪೂರ್ಣವಾಗಿ ಅಷ್ಟೇ ಭಾವುಕ ಎನ್ನಿಸುವಂತೆ ಮನೆಯಿಂದ ಹೊರಕ್ಕೆ ಬಂದವರು ಐಶ್ವರ್ಯಾ ಸಿಂಧೋಗಿ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಗುಡ್​ಬೈ ಹೇಳಿದ್ದ ದೃಶ್ಯ ಕೆಲ ಕಾಲ ಮನೆಯಲ್ಲಿ ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು. ಆಕೆಯನ್ನು ಮಗಳೇ ಎಂದು ಪತ್ರದಲ್ಲಿ ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

69
ಭಾವುಕ ಬೀಳ್ಕೊಡುಗೆ

'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ' ಎಂದು ಅದರಲ್ಲಿ ಬರೆಯಲಾಗಿತ್ತು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದರು.

79
ಸೀರಿಯಲ್​ನಲ್ಲೂ ಮಿಂಚಿಂಗ್​

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ಬ್ಯೂಟಿ ಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಮನೆಮಗಳು ಎಂದೇ ಕರೆಯಲ್ಪಟ್ಟವರು. ಬಿಗ್ ಬಾಸ್ ನಿಂದ ಬಂದ ಬಳಿಕ ಸಿನಿಮಾ, ಸೀರಿಯಲ್ ಎಂದು ಬ್ಯುಸಿಯಾಗಿರುವ ಐಶ್ವರ್ಯ, ಇದರ ಜೊತೆಗೆ ಟ್ರಾವೆಲ್ ಮಾಡೋದನ್ನು ಮಾತ್ರ ಮರೆತಿಲ್ಲ. ಹೆಚ್ಚಾಗಿ ಸುಂದರ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ ಈ ಬ್ಯೂಟಿ.

89
ಮದುವೆಯ ಬಗ್ಗೆ ಐಶ್ವರ್ಯ

ಮದುವೆಯ ಬಗ್ಗೆ ಮಾತನಾಡಿದ್ದ ಐಶ್ವರ್ಯ, ನನಗೆ ಇನ್ನೂ ಮಾಡಬೇಕಾದದ್ದಷ್ಟು ಬಹಳ ಇದೆ. ಕರಿಯರ್​ನಲ್ಲಿ ಮುಂದೆ ಹೋಗಬೇಕು ಎಂದು ಇದೆ. ಸದ್ಯ ಮದುವೆ ಇಲ್ಲ. ಆದರೆ ಮದುವೆ ಮತ್ತು ಲವ್​ ಯಾವಾಗ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದನ್ನು ನಾವಾಗಿಯೇ ಮಾಡಿಕೊಂಡು ಹೋಗುವುದಲ್ಲ, ತಂತಾನೆಯಾಗಿಯೇ ಆಗಿಬಿಡುತ್ತದೆ. ಅದಕ್ಕಾಗಿ ಇಷ್ಟು ವರ್ಷ ಅಂತೆಲ್ಲಾ ನಾನು ಹೇಳುವುದಿಲ್ಲ ಎಂದಿದ್ದರು.

99
ಯಾವಾಗ ಮದುವೆ?

ಒಳ್ಳೆಯ ಹುಡುಗ, ತುಂಬಾ ಕೇರಿಂಗ್​ ಮಾಡುವವ ಇದ್ದರೆ ಮದುವೆಯಾಗುವೆ. ಅದಕ್ಕಿಂತ ಮುಖ್ಯವಾಗಿ ಗೌರವ ಕೊಡುವುದು ಆತನಿಗೆ ತಿಳಿದಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದಾರೆ ಐಶ್ವರ್ಯ. ಒಟ್ಟಿನಲ್ಲಿ ಐಶ್ವರ್ಯ ಅವರ ಮದುವೆ ಯಾವಾಗ ಎಂದು ಕಾಯುತ್ತಿದ್ದಾರೆ ಅವರ ಅಭಿಮಾನಿಗಳು.

Read more Photos on
click me!

Recommended Stories