BBK 12: ಅಶ್ವಿನಿ ಗೌಡ ಮುಖದಲ್ಲಿ ಕೋತಿ ಕುಣಿಯುತ್ತಿದೆಯಾ? ಗರಂ ಆದ ಗಿಲ್ಲಿ ನಟ

Published : Oct 02, 2025, 08:50 AM IST

Bigg Boss Kannada Season 12:  ಬಿಗ್‌ಬಾಸ್ ಮನೆಯಲ್ಲಿ ಪಾತ್ರೆ ತೊಳೆಯದ ಕಾರಣಕ್ಕೆ ಜಂಟಿ ಮತ್ತು ಒಂಟಿಗಳ ನಡುವೆ ಜಗಳ ಶುರುವಾಗಿದೆ. ಅಶ್ವಿನಿ ಗೌಡ ಜಂಟಿಗಳನ್ನು 'ಸೇವಕರು' ಎಂದಿದ್ದಕ್ಕೆ ಗಿಲ್ಲಿ ನಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

PREV
15
ಬಿಗ್‌ಬಾಸ್ ಕನ್ನಡ

ಬಿಗ್‌ಬಾಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಮತ್ತೊಮ್ಮೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಜಗಳ ಶುರುವಾಗಿದೆ. ಸ್ಪರ್ಧಿಗಳು ಮಾಡಿದ ತಪ್ಪಿನಿಂದಾಗಿ ಬಿಗ್‌ಬಾಸ್ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆ ನೀಡಿದ್ದರಿಂದ ಒಂಟಿ ಮತ್ತು ಜಂಟಿಗಳ ನಡುವೆ ಕಿಚ್ಚು ಹೊತ್ತಿಕೊಂಡಿದೆ.

25
ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಕಿಡಿ

ಅಡುಗೆಮನೆಯ ಸಿಂಕ್‌ನಲ್ಲಿ ಪಾತ್ರೆಗಳನ್ನು ತೊಳೆಯದೇ ಬಿಟ್ಟಿದ್ದರಿಂದ ಮನೆಯ ಒಂಟಿಗಳು ಆಕ್ರೋಶ ಹೊರಹಾಕಿದ್ದಾರೆ. ಸಿಂಕ್‌ನಲ್ಲಿ ಪಾತ್ರೆಗಳು ಹಾಗೆ ಉಳಿದಿವೆ. ನೀವು ಹೋಗಿ ದರ್ಪ ತೋರಿಸಿ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ನಾವು-ನೀವು ಬೇರೆ ಬೇರೆ, ಒಂದೇ ಅಲ್ಲ. ನೀವು ಸೇವಕರು ಎಂದು ಜಂಟಿಗಳಿಗೆ ಅಶ್ವಿನಿ ಗೌಡ ಹೇಳುತ್ತಾರೆ. ಈ ಮಾತಿನ ವೇಳೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಕಿಡಿ ಹೊತ್ತಿಕೊಂಡಿದೆ.

35
ಮುಖದಲ್ಲಿ ಕೋತಿ ಕುಣಿಯುತ್ತಿದೆಯಾ?

ಇವತ್ತು ನಿಮ್ಮಿಂದ ನಮ್ಮೆಲ್ಲಾ ಊಟ ಕಿತ್ಕೊಂಡಿದ್ದು, ಈ ಬಗ್ಗೆ ನಿಮಗೆ ಪಶ್ಚಾತ್ತಾಪ ಇದೆಯಾ ಎಂದು ಅಶ್ವಿನಿ ಗೌಡ ಪ್ರಶ್ನೆ ಮಾಡ್ತಾರೆ. ಇದಕ್ಕೆ ಗಿಲ್ಲಿ ನಟ, ಇಲ್ಲ ಏನಿವಾದ ಅಂತ ಮರುಉತ್ತರ ನೀಡುತ್ತಾರೆ. ಇದೇ ವೇಳೆ ಅಶ್ವಿನಿ ಬೆಂಬಲಕ್ಕೆ ಧ್ರವಂತ್ ನಿಂತುಕೊಂಡಿದ್ದಾರೆ. ನನ್ನನ್ನು ನೋಡು ನೋಡು ಅಂತಾರೆ. ಅವರ ಮುಖದಲ್ಲಿ ಕೋತಿ ಕುಣಿಯುತ್ತಿದೆಯಾ ಎಂದು ಗಿಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

45
ಜಂಟಿ ವರ್ಸಸ್ ಒಂಟಿ

ಜಂಟಿಗಳು ತಪ್ಪು ಮಾಡಿದ್ರೆ ಒಂಟಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ. ಹಾಗಾಗಿ ಜಂಟಿಗಳು ನಿಯಮಗಳು ಪಾಲನೆ ಮಾಡುವಂತೆ ನೋಡಿಕೊಳ್ಳುವುದು ಒಂಟಿಗಳ ಜವಾಬ್ದಾರಿಯಾಗಿದೆ. ಮತ್ತೊಂದೆಡೆ ಅಶ್ವಿನಿ ಗೌಡ ಅವರ ಆದೇಶಗಳ ಬಗ್ಗೆ ಮಂಜು ಭಾಷಿಣಿ ಸೇರಿದಂತೆ ಎಲ್ಲಾ ಜಂಟಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: BBK 12: ಬಿಗ್‌ ಬಾಸ್‌ ಮನೆಯಲ್ಲಿ ಬಂಪರ್‌ ಲಾಟರಿ ಹೊಡೆದ ಮಲ್ಲಮ್ಮ; ಇದೆಲ್ಲ ಒಂಟಿಗಳ ಕೃಪೆ!

55
ಮಲ್ಲಮ್ಮ ಮತ್ತು ಧನುಷ್

ಒಂಟಿಗಳ ಒಮ್ಮತ ನಿರ್ಧಾರದಿಂದ ಮಲ್ಲಮ್ಮ ಈ ವಾರದ ಮೊದಲ ಫೈನಲಿಸ್ಟ್ ಆಗಿದ್ದಾರೆ. ಎರಡನೇ ಟಾಸ್ಕ್ ಗೆಲುವಿನ ಬಳಿಕ ಧನುಷ್ ಎರಡನೇ ಫೈನಲಿಸ್ಟ್ ಆಗಿದ್ದಾರೆ. ಫೈನಲಿಸ್ಟ್ ಆಗೋದಿರಂದ ಕೊನೆ ಕ್ಷಣದಲ್ಲಿ ವಂಚಿತರಾಗಿದ್ದಕ್ಕೆ ದೃವಂತ್ ಬೇಸರಗೊಂಡಿದ್ದಾರೆ.

ಇದನ್ನೂ ಓದಿ: BBK 12: ರಾಶಿಕಾ ಸೊಂಟ, ಸ್ಪಂದನಾ ಕಾಲು, ಫ್ಲರ್ಟ್‌ ಮಾಡ್ತಿದ್ದಾರಂತೆ ಅಭಿಷೇಕ್‌ ಶ್ರೀಕಾಂತ್;‌ ಅಶ್ವಿನಿ ದೂರು

Read more Photos on
click me!

Recommended Stories