BBK 12: ಬಿಗ್‌ ಬಾಸ್‌ ಮನೆಯಲ್ಲಿ ಬಂಪರ್‌ ಲಾಟರಿ ಹೊಡೆದ ಮಲ್ಲಮ್ಮ; ಇದೆಲ್ಲ ಒಂಟಿಗಳ ಕೃಪೆ!

Published : Oct 02, 2025, 12:58 AM IST

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೂರನೇ ವಾರ ಮೊದಲ ಫಿನಾಲೆ ನಡೆಯಲಿದೆ. ಹೀಗಿರುವಾಗ ಮೊದಲ ಫೈನಲಿಸ್ಟ್‌ ಯಾರು ಎಂದು ರಿವೀಲ್‌ ಆಗಿದೆ. ಇನ್ನು ಮಲ್ಲಮ್ಮ ಹೊಸ ಮೈಲಿಗಲ್ಲು ತಲುಪಿದ್ದಾರೆ.  

PREV
15
ಒಂಟಿ, ಜಂಟಿ ಕಾಳಗ

ಬಿಗ್‌ ಬಾಸ್‌ ಮನೆಯಲ್ಲಿ ಮೂರನೇ ವಾರಕ್ಕೆ ಮೊದಲ ಫಿನಾಲೆ ನೆಯಲಿದೆ. ಈಗಾಗಲೇ ಟಾಸ್ಕ್‌ಗಳು ಕೂಡ ಶುರುವಾಗಿವೆ. ಒಂಟಿ ಹಾಗೂ ಜಂಟಿ ನಡುವೆ ಫೈಟ್‌ ಶುರುವಾಗಿದೆ. ಸಿಕ್ಕಿನ ಕಾಳಗವನ್ನು ಒಂಟಿ ತಂಡ ಗೆದ್ದುಕೊಂಡಿದೆ.

25
ಓರ್ವ ಫೈನಲಿಸ್ಟ್‌ ಆಯ್ಕೆ

ಈಗ ಓರ್ವ ಫೈನಲಿಸ್ಟ್‌ ಆಗಬೇಕಿತ್ತು. ಅದನ್ನೀಗ ಮನೆ ಚರ್ಚೆ ಮಾಡಿ ಓರ್ವರ ಹೆಸರನ್ನು ಬಿಗ್‌ ಬಾಸ್‌ ಸೂಚಿಸಲು ಹೇಳಿತ್ತು. ಧ್ರುವಂತ್‌, ಕಾಕ್ರೋಚ್‌ ಸುಧಿ, ಧನುಷ್‌ ಗೌಡ, ಮಲ್ಲಮ್ಮ, ಜಾಹ್ನವಿ ಅವರು ಚರ್ಚೆ ಮಾಡಿ ಓರ್ವ ಫೈನಲಿಸ್ಟ್‌ ಹೆಸರನ್ನು ಹೇಳಬೇಕಿತ್ತು.

35
ಮಲ್ಲಮ್ಮನನ್ನು ಸೇವ್‌ ಮಾಡ್ತೀನಿ

“ಜನರು ನೋಡುತ್ತಾರೆ ಅಥವಾ ಎಮೋಶನಲ್‌ ಆಗಿಯಾದರೂ ಪರವಾಗಿಲ್ಲ. ಮಲ್ಲಮ್ಮ ಅವರನ್ನು ಸೇವ್‌ ಮಾಡೋಣ. ಈ ವಯಸ್ಸಿನಲ್ಲಿ ಇಷ್ಟು ಕಷ್ಟಪಡುವ ಮಲ್ಲಮ್ಮನನ್ನು ನಾವು ನಾಮಿನೇಟ್‌ ಮಾಡಿದ್ರೆ ಜನರು ಬಯ್ತಾರೆ ಅಂತ ಅಂದುಕೊಂಡು ಕೆಲವರು ನಾಮಿನೇಟ್‌ ಮಾಡಲ್ಲ, ಹೀಗಾಗಿ ನಾವು ಮಲ್ಲಮ್ಮನನ್ನು ಸೇವ್‌ ಮಾಡೋಣ” ಎಂದು ಕಾಕ್ರೋಚ್‌ ಸುಧಿ ಹೇಳಿದ್ದರು.

45
ಅಶ್ವಿನಿ ಗೌಡ ಹೇಳಿದ್ದೇನು?

“ನಾವು ಹೋರಾಟ ಮಾಡಿ ಸೇವ್‌ ಆಗಬಹುದು, ಆದರೆ ಮಲ್ಲಮ್ಮನಿಗೆ ಕಷ್ಟ ಆಗಬಹುದು ಎಂದು ನಾವು ಅವರನ್ನು ಸೇವ್‌ ಮಾಡ್ತೀವಿ” ಎಂದು ಅಶ್ವಿನಿ ಗೌಡ ಹೇಳಿದ್ದರು. ಹೀಗಾಗಿ ಮಲ್ಲಮ್ಮ ಅವರೇ ಈ ವಾರದ ಮೊದಲ ಫೈನಲಿಸ್ಟ್‌ ಹೆಸರಾಗಿದ್ದಾರೆ.

55
ಪ್ಯಾಂಟ್‌, ಟೀ ಶರ್ಟ್‌

ಅಂದಹಾಗೆ ಈ ಬಾರಿ ಡಬಲ್‌ ಟ್ವಿಸ್ಟ್, ಡಬಲ್‌ ಫಿನಾಲೆ, ಡಬಲ್‌ ವಿನ್ನರ್‌ ಕೂಡ ಇರಬಹುದು ಎಂದು ಬಿಗ್‌ ಬಾಸ್‌ ಸೂಚನೆ ನೀಡಿದೆ. 58 ವರ್ಷದ ಮಲ್ಲಮ್ಮ ಈಗ ವರ್ಕೌಟ್‌ ಮಾಡೋಕೆ, ಟಾಸ್ಕ್‌ ಆಡೋಕೆ ಎಂದು ಬಿಗ್‌ ಬಾಸ್‌ ಟೀ ಶರ್ಟ್‌, ಪ್ಯಾಂಟ್‌ ಕೂಡ ನೀಡಿದೆ.

Read more Photos on
click me!

Recommended Stories