ಬಿಗ್ ಬಾಸ್ ಮನೆಯಿಂದ ಶಾಕಿಂಗ್ ನ್ಯೂಸ್, ಬೆಡ್ ರೂಂಲ್ಲಿ ಹಾವು ಪ್ರತ್ಯಕ್ಷ

Published : Oct 01, 2025, 08:50 PM IST

ಬಿಗ್ ಬಾಸ್ ಮನೆಯಿಂದ ಶಾಕಿಂಗ್ ನ್ಯೂಸ್, ಬೆಡ್ ರೂಂಲ್ಲಿ ಹಾವು ಪ್ರತ್ಯಕ್ಷ, ಎಲ್ಲರೂ ಭಯದಿಂದ ದೂರ ಸರಿದರೆ, ಓರ್ವ ಸ್ಪರ್ಧಿ ಬರಿಗೈಯಲ್ಲೇ ಹಾವು ಹಿಡಿದಿದ್ದಾರೆ. ಬಳಿಕ ಸಿಬ್ಬಂದಿಗಳಿಗೆ ಹಾವನ್ನು ಹಸ್ತಾಂತರಿಸಿ ಇತರ ಸ್ಪರ್ಧಿಗಳ ಆತಂಕ ದೂರ ಮಾಡಿದ ಘಟನೆ ನಡೆದಿದೆ.

PREV
15
ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿ

ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿ

ಬಿಗ್ ಬಾಸ್ ಶೋ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಅದ್ಧೂರಿಯಾಗಿ ಆರಂಭಗೊಂಡಿದೆ. ಮನೆಯೊಳಗೆ ಸ್ಪರ್ಧಿಗಳ ಆಟ ಬಲು ಜೋರಾಗಿದೆ. ಕನ್ನಡ ಬಿಗ್ ಬಾಸ್ ಆರಂಭಿಕ ಹಂತದಲ್ಲೇ ಭರ್ಜರಿ ಹೈಡ್ರಾಮಾಗೆ ಕಾರಣವಾಗಿದೆ. ಹಲವು ಭಾಷೆಗಳ ಬಿಗ್ ಬಾಸ್ ರಿಯಾಲಿಟಿ ಶೋಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಡುವೆ ಬಿಗ್ ಬಾಸ್ 19ರ ಮನೆಯೊಳಗೆ ಹಾವು ಪ್ರತ್ಯಕ್ಷಗೊಳ್ಳುವ ಮೂಲಕ ಸ್ಪರ್ಧಿಗಳು ಬೆಚ್ಚಿ ಬಿದ್ದಿ ಘಟನೆ ನಡೆದಿದೆ.

25
ಬೆಡ್ ರೂಂನಲ್ಲಿ ಕಾಣಿಸಿಕೊಂಡ ಹಾವು

ಬೆಡ್ ರೂಂನಲ್ಲಿ ಕಾಣಿಸಿಕೊಂಡ ಹಾವು

ಹಿಂದಿ ಬಿಗ್ ಬಾಸ್ 19ನೇ ಆವೃತ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಪರ್ಧಿ ಗೌರವ್ ಖನ್ನ ಬೆಡ್ ರೂಂಲ್ಲಿರುವಾಗ ಹಾವು ಕಾಣಿಸಿಕೊಂಡಿದೆ ಎಂದು ಫಿಲ್ಮ್ ವಿಂಡೋ (FilmWindow) ವರದಿ ಮಾಡಿದೆ. ತಕ್ಷಣವೇ ಗೌರವ್ ಖನ್ನ ಇತರ ಸ್ಪರ್ಧಿಗಳಿಗೆ ಸೂಚನೆ ನೀಡಿದ್ದಾರೆ. ಇತ್ತ ಬಿಗ್ ಬಾಸ್ ಧ್ವನಿ ಮೂಲಕ ಎಲ್ಲಾ ಸ್ಪರ್ಧಿಗಳು ಗಾರ್ಡನ್ ಏರಿಯಾದಲ್ಲಿ ಸೇರುವಂತೆ ಸೂಚಿಸಲಾಗಿದೆ.

35
ಬರಿಗೈಯಲ್ಲಿ ಹಾವು ಹಿಡಿದ ಮೃದುಲ್ ತಿವಾರಿ

ಬರಿಗೈಯಲ್ಲಿ ಹಾವು ಹಿಡಿದ ಮೃದುಲ್ ತಿವಾರಿ

ಗೌರವ್ ಖನ್ನ, ಅಭಿಷೇಕ್ ಬಜಾಜ್, ಅಮಾಲ್ ಮಲಿಕ್ ಸೇರಿದಂತೆ ಬಿಗ್ ಬಾಸ್ 19ರ ಸ್ಪರ್ಧಿಗಳು ಗಾರ್ಡನ್ ಏರಿಯಾಗೆ ಬಂದಿದ್ದಾರೆ. ಆದರೆ ಮೃದುಲ್ ತಿವಾರಿ ಮಾತ್ರ ಧೈರ್ಯವಾಗಿ ಬೆಡ್ ರೂಂಗೆ ತೆರಳಿದ್ದಾರೆ. ಬಳಿಕ ಪ್ರತ್ಯಕ್ಷವಾಗಿದ್ದ ಹಾವನ್ನು ಬರಿಗೈಯಲ್ಲಿ ಹಿಡಿದಿದ್ದಾರೆ ಎಂದು ಫಿಲ್ಮ್‌ವಿಂಡೋ ವರದಿ ಮಾಡಿದೆ.

45
ಹಾವನ್ನು ಬಾಟಲಿಯಲ್ಲಿ ತುಂಬಿದ ಮೃದುಲ್

ಹಾವನ್ನು ಬಾಟಲಿಯಲ್ಲಿ ತುಂಬಿದ ಮೃದುಲ್

ಬೆಡ್ ರೂಂನಲ್ಲಿ ಕಾಣಿಸಿಕೊಂಡ ಹಾವನ್ನು ಬರಿಗೈಯಲ್ಲಿ ಹಿಡಿದ ಮೃದುಲ್ ತಿವಾರಿ, ಅಲ್ಲೇ ಇದ್ದ ಬಾಟಲಿಯೊಳಗೆ ಹಾವನ್ನು ತುಂಬಿದ್ದಾರೆ. ಬಳಿಕ ಸಿಬ್ಬಂದಿಗಳಿಗೆ ನೀಡಿದ್ದಾರೆ. ಮೃದಲ್ ತಿವಾರಿ ಧೈರ್ಯವನ್ನು ಎಲ್ಲಾ ಸ್ಪರ್ಧಿಗಳು ಮೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಸ್ಪರ್ಧಿಗಳ ಆತಂಕ ದೂರ ಮಾಡಿದ್ದಾರೆ.

55
ಬಿಗ್ ಬಾಸ್ ಘಟನೆ ಕುರಿತು ವೀಕ್ಷರ ಪ್ರತಿಕ್ರಿಯೆ

ಬಿಗ್ ಬಾಸ್ ಘಟನೆ ಕುರಿತು ವೀಕ್ಷರ ಪ್ರತಿಕ್ರಿಯೆ

ಬಿಗ್ ಬಾಸ್ ಮನೆಯೊಳಗೆ ಹಾವು ಕಾಣಿಸಿಕೊಂಡ ಘಟನೆ ಕುರಿತು ವೀಕ್ಷರು ಪ್ರತಿಕ್ರಿಯಿಸಿದ್ದರೆ. ಸಣ್ಣ ಬಾಟಲಿಯಲ್ಲಿ ಹಾವು ತುಂಬಿಸಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇತ್ತ ಮೃದುಲ್ ತಿವಾರಿ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಹಿಂದಿ ಬಿಗ್ ಬಾಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರೋಚಕತೆ ಹೆಚ್ಚಾಗುತ್ತಿದೆ.

Read more Photos on
click me!

Recommended Stories