ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?

Published : Dec 08, 2025, 04:04 PM IST

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸ್ಪಂದನಾ ಸೋಮಣ್ಣ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಇವರ ವೈಯಕ್ತಿಕ ಕೆಲಸಗಳನ್ನು ಮಾಡೋದು ಕೂಡ ಕಷ್ಟ ಆಗಿತ್ತು. ಇವ ಬದಲು ಚೈತ್ರಾ ಆಟ ಆಡಿ ಕ್ಯಾಪ್ಟನ್‌ ಆದರು. 

PREV
15
ಕ್ಯಾಪ್ಟನ್ಸಿ ಟಾಸ್ಕ್‌ ಅವಕಾಶ

ಬಿಗ್‌ ಬಾಸ್‌ ಮನೆಯಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಸ್ಪಂದನಾ ಸೋಮಣ್ಣ ಅವರು ಕೂತಲ್ಲೇ ಕೂರುವ ಸ್ಥಿತಿ ಬಂದಿತ್ತು. ಆದರೆ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಸ್ಪಂದನಾಗೆ ಫಿಸಿಕಲ್‌ ಟಾಸ್ಕ್‌ ಆಡಲು ಆಗಿರಲಿಲ್ಲ. ಆಗ ಚೈತ್ರಾ ಸಹಾಯಕ್ಕೆ ಬಂದರು.

25
ಸ್ಪಂದನಾ ಬದಲು ಚೈತ್ರಾ ಆಟ ಆಡಿದ್ರು

ಸ್ಪಂದನಾ ಸೋಮಣ್ಣ ಅವರ ಬದಲು ಬೇರೆಯವರು ಕ್ಯಾಪ್ಟನ್ಸಿ ಟಾಸ್ಕ್‌ ಆಡಬಹುದಿತ್ತು. ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿದ್ದ ಚೈತ್ರಾ ಕುಂದಾಪುರ ಅವರು ಸ್ಪಂದನಾ ಬದಲಿಗೆ ಅಭಿಷೇಕ್‌ ಶ್ರೀಕಾಂತ್‌ ಜೊತೆ ಆಟ ಆಡಿದರು, ಗೆದ್ದರು. ಆಟ ಆಡಿದ್ದು ಚೈತ್ರಾ ಆದರೆ, ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು ಸ್ಪಂದನಾಗೆ.

35
ಬಿಗ್‌ ಬಾಸ್‌ ಆಟ ನಡೆಯೋದಿಲ್ಲ

ಈಗ ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಬಾಸ್‌ ಆದೇಶ ನಡೆಯೋದಿಲ್ವಂತೆ. ವಿಲನ್‌ ಎಂಟ್ರಿಯಾಗಿದೆ. ವಿಲನ್‌ ಹೇಳಿದಂತೆ ಅಲ್ಲಿದ್ದವರು ಕೇಳಬೇಕು ಎನ್ನುವ ಪ್ರೋಮೋ ರಿಲೀಸ್‌ ಆಗಿದೆ, ವೀಕ್ಷಕರು ಕೂಡ ಸಿಕ್ಕಾಪಟ್ಟೆ ಕುತೂಹಲದಿಂದ ಇದ್ದಾರೆ. ಹೀಗಿರುವಾ ಇನ್ನೊಂದು ಪ್ರೋಮೋ ರಿಲೀಸ್‌ ಆಗಿದೆ.

45
ವಿಲನ್‌ ಬಿಗ್‌ ಬಾಸ್‌ ಟ್ವಿಸ್ಟ್‌ ಏನು?

“ವಾರ ಇಡೀ ರೆಸ್ಟ್‌ ಮಾಡಿದ್ರು, ಅವರ ಪರವಾಗಿ ನೀವು ಆಟ ಆಡಿದ್ರಿ. ನೀವು ಈಗ ಮನೆ ಕೆಲಸದವರು, ಅವರು ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಕ್ಯಾಪ್ಟನ್‌ ರಾಮ್‌ ಲಾಕ್‌ ಆಗಿದೆ. ನೀವು ಓಕೆ ಅಂದರೆ ನಿಮಗೆ ಕ್ಯಾಪ್ಟನ್‌ ಆಗುವ ಅವಕಾಶ ಸಿಗುತ್ತದೆ, ಕ್ಯಾಪ್ಟನ್‌ ರೂಮ್‌ ಓಪನ್‌ ಆಗುವುದು” ಎಂದು ವಿಲನ್ ಬಿಗ್‌ ಬಾಸ್‌ ಹೇಳಿದ್ದರು.

55
ಚೈತ್ರಾ ಕುಂದಾಪುರ ನಡೆ ಏನು?

ಈಗ ಬಿಗ್‌ ಬಾಸ್‌ ಹೇಳಿದ ಮಾತು ಕೇಳಿ ರಜತ್‌ ಅವರಂತೂ ಸಖತ್‌ ಟ್ವಿಸ್ಟ್‌ ಎಂದಿದ್ದಾರೆ. ವಿಲನ್‌ ಬಿಗ್‌ ಬಾಸ್‌ ಹೇಳಿದಂತೆ ಚೈತ್ರಾ ಓಕೆ ಎಂದರೆ ಸ್ಪಂದನಾ ಸ್ಥಾನದಲ್ಲಿ ಚೈತ್ರಾ ಕೂರಬಹುದು. ಓಕೆ ಹೇಳಿದರೆ ಸ್ಪಂದನಾ ಕಣ್ಣಿನಲ್ಲಿ ಅಥವಾ ಬೇರೆಯವರ ಕಣ್ಣಲ್ಲಿ ಚೈತ್ರಾ ಸ್ವಾರ್ಥಿಯಾಗಬಹುದು ಅಥವಾ ಇನ್ನೊಂದು ವಿಧದಲ್ಲಿ ಬಲಿಯಾಗಬಹುದು. ಚೈತ್ರಾ ಏನು ಮಾಡಬಹುದು ಎಂಬ ಕುತೂಹಲ ಇದೆ.

Read more Photos on
click me!

Recommended Stories