Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ 11ನೇ ವಾರ ಹೊರಗಡೆ ಬಂದಿರುವ ಅಭಿಷೇಕ್ ಶ್ರೀಕಾಂತ್ ಅವರು ಗಿಲ್ಲಿ ನಟ ಹಾಗೂ ರಘು ನಡುವಿನ ಬಾಂಧವ್ಯದ ಜೊತೆಗೆ ರಘು ಬಳಿ ಮನವಿ ಮಾಡಿದ್ರೂ ಚಪಾತಿ ಕೊಟ್ಟಿಲ್ಲ ಎನ್ನುವ ವಿಚಾರ ಚರ್ಚೆಯಾಗಿದೆ.
ಈ ವಾರದಲ್ಲಿ ರಘು ಅವರು ಕೂತ್ಕೊಂಡು ಚಪಾತಿ ತಿನ್ನುತ್ತಾರೆ. ಆದರೆ ಗಿಲ್ಲಿ ನಟ ಅವರು ಬಂದು, ನನಗೆ ಕೊಡು ಸ್ವಲ್ಪ ಅಂತ ಹೇಳುತ್ತಾರೆ. ಆದರೂ ರಘು ಮಾತ್ರ ಸ್ವಲ್ಪವೂ ಚಪಾತಿ ಕೊಡೋದಿಲ್ಲ ಇಲ್ಲ. ಆದರೆ ರಾಶಿಕಾ ಚಪಾತಿ ಕೊಡು ಎಂದಾಗ, ರಘು ಅವರು ಪ್ಲೇಟ್‌ನಿಂದ ಚಪಾತಿ ತಗೊಂಡು ತಿಂತಾರೆ. ಈ ವಿಷಯವು ರಘು ಅವರಿಗೆ ಸ್ವಲ್ಪ ನೆಗೆಟಿವ್ ಆಗಿದೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ.
25
ಗಿಲ್ಲಿಯಿಂದಲೇ ರಘು
ಈ ದೃಶ್ಯ ನೋಡಿ ಅನೇಕರಿಗೆ ಬೇಸರ ಆಗಿದೆ. ಹೀಗಾಗಿ ವೀಕ್ಷಕರು, “ಮಾನವೀಯತೆ ಇಲ್ಲ. ಶತ್ರುಗು ಕೂಡ ಈ ರೀತಿ ಮಾಡಬಾರದು. ಗಿಲ್ಲಿಯಿಂದಲೇ ರಘು” ಎಂದೆಲ್ಲ ನೆಗೆಟಿವ್ ಕಾಮೆಂಟ್‌ಗಳು ಬಂದಿದೆ. ನೀವು ನೋಡಿದಂತೆ ಅಲ್ಲಿ ಏನಾಗಿದೆ ಎಂದು ಪ್ರಶ್ನೆ ಮಾಡಲಾಗಿದೆ.
35
ಚಪಾತಿ ಕೇಳಿದಾಗ ಕೊಟ್ಟಿಲ್ಲ
ಪದೇ ಪದೇ ರಘು ಬಳಿ ಚಪಾತಿ ಕೇಳಿದಾಗ ಕೊಟ್ಟಿಲ್ಲ, ಆಮೇಲೆ ಬೇಸರಗೊಂಡ ಗಿಲ್ಲಿ ಅಲ್ಲಿಂದ ಹೊರನಡೆದಿದ್ದಾರೆ. ಅಂದಹಾಗೆ ರಘು ಕೊಟ್ಟಿಲ್ಲ ಎಂದು ಗಿಲ್ಲಿ ನಟ ಅವರು ರಕ್ಷಿತಾ ಬಳಿ ಚಪಾತಿ ಮಾಡಿಕೊಡು ಎಂದು ಹೇಳಿದ್ದರು. ಈ ವಿಡಿಯೋ ಅನೇಕರ ಮನಸ್ಸನ್ನು ಕಲಕಿತ್ತು.
“ರಘು ಹಾಗೂ ಗಿಲ್ಲಿ ನಟ ಅವರು ಹಾವು ಮುಂಗುಸಿ ಇದ್ದಂತೆ. ಯಾವಾಗಲೂ ಜಗಳ ಆಡಿಕೊಂಡು, ಮತ್ತೆ ಒಂದಾಗಿರುತ್ತಾರೆ. ಗಿಲ್ಲಿ ನಟ ಎಲ್ಲರ ಜೊತೆ ಚೆನ್ನಾಗಿರುತ್ತಾನೆ. ಅವನು ಎಲ್ಲರ ಬಳಿ ತಿಂಡಿ ಕೇಳುತ್ತಾನೆ” ಎಂದು ಅಭಿಷೇಕ್ ಹೇಳಿದ್ದಾರೆ.
55
ಗಿಲ್ಲಿ ನಟನಿಗೆ ತಿಂಡಿಯನ್ನು ಕೊಟ್ಟಿದ್ದಾರೆ
“ಯಾವಾಗಲೂ ಎಲ್ಲರೂ ಗಿಲ್ಲಿ ನಟನಿಗೆ ತಿಂಡಿಯನ್ನು ಕೊಟ್ಟಿದ್ದಾರೆ. ಅಣ್ಣ ಒಂದು ಕೊಡೋಣ. ಅಣ್ಣ ಒಂದು ಕೊಡು ಅಣ್ಣ ಕೊಡು ಅಂತ ಹೇಳಿರುತ್ತಾನೆ. ಆದರೆ ಒಂದು ಸಲ ಎರಡು ಸಲ ಓಕೆ, ಸಾವಿರ ಸಲ ಕೇಳಿರಬಹುದು, ಆಮೇಲೆ ರಘು ಅವರು ಕೊಡಲ್ಲ ಎಂದಿರಬಹುದು ಅಷ್ಟೇ, ಬೇರೆ ಏನೂ ಆಗಿರಲ್ಲ” ಎಂದಿದ್ದಾರೆ.