BBK 12; ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಅತಿಥಿಯಾಗಿ ಚೈತ್ರಾ ಕುಂದಾಪುರ ಬಂದಿದ್ದಾರೆ. ಸೀಸನ್ 11 ಸ್ಪರ್ಧಿಯಾಗಿರುವ ಚೈತ್ರಾ ಕುಂದಾಪುರ ಅವರು, ದೊಡ್ಮನೆಯಲ್ಲಿ ಸಾಕಷ್ಟು ದಿನಗಳ ಕಾಲ ಇದ್ದರು. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಮದುವೆಯಾಯ್ತು, ಅವರ ಬದುಕು ಕೂಡ ಬದಲಾಯ್ತು.
ಬಿಗ್ ಬಾಸ್ ಟಾಸ್ಕ್ ನೀಡಿದ್ದು, ಚೈತ್ರಾ ಕುಂದಾಪುರ ಅವರು ಮಾತನಾಡಿ “ಬಿಗ್ ಬಾಸ್ ಶೋ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ, ಬಿಗ್ ಬಾಸ್ ಎಷ್ಟೋ ಜನರಿಗೆ ಟ್ರೋಫಿ ಕೊಟ್ಟಿದೆ, ದುಡ್ಡು ಕೊಟ್ಟಿದೆ, ಆದರೆ ನನಗೆ ಜೀವನ ಕೊಟ್ಟಿದೆ. ಪಿಯುಸಿಗೆ ಸಾಮಾಜಿಕ ಜೀವನಕ್ಕೆ ಬಂದ ನನಗೆ ದಿನ ಬೆಳಗಾದರೆ ಬೆದರಿಕೆ ಕರೆಗಳು, ಅಟ್ಯಾಕ್‌ಗಳು, ಕೇಸ್‌ಗಳು. ಎಲ್ಲಿಯವರೆಗೆ ಅಂದರೆ ಬಿಗ್ ಬಾಸ್ ಶೋ ಹಿಂದಿನ ದಿನ ಹೇಗಿತ್ತು ಅಂದರೆ ರೋಹಿಣಿ ಮಗಳು ಯಾವಾಗಲೋ ಒಂದು ದಿನ ಬೀದಿ ಹೆಣ ಆಗ್ತೀನಿ ಎಂದು ಜನರು ಹೇಳುತ್ತಿದ್ದರು. ಇದರಲ್ಲಿ ಬದುಕುತ್ತಿದ್ದೆ” ಎಂದು ಹೇಳಿದ್ದಾರೆ.
25
ಅಹಂಕಾರ ಬರುತ್ತದೆ
“ಜೀವನದಲ್ಲಿ ಸ್ಮೂಥ್ ಆಗಿ ನಡೆಯುತ್ತಿತ್ತು. ನಿಮಗೆ ಹೆಸರು ಬರುತ್ತದೆ, ಪವರ್ ಬರುತ್ತದೆ, ದುಡ್ಡು ಬರುತ್ತದೆ. 26-27 ನೇ ವಯಸ್ಸಿಗೆ ಇಷ್ಟೆಲ್ಲ ಬಂದಾಗ ಅಹಂಕಾರ ಬರುತ್ತದೆ, ಎಲ್ಲ ತಗೊಂಡುಬಿಟ್ಟೆ ಎನ್ನೋದು ಬರುತ್ತದೆ. ಆದರೆ ಒಂದು ಅಪಘಾತ ಆಗಿ ರಾತ್ರಿ ಬೆಳಗ್ಗೆ ಆಗೋದರೊಳಗಡೆ ಎಲ್ಲ ಬದಲಾಗುತ್ತದೆ. ಇನ್ನು ಜೀವನ ಮುಗಿದೋಯ್ತು ಎಂದುಕೊಂಡಿದ್ದೆ, ನನಗೆ ಯಾವ ದಾರಿಯೂ ಇರಲಿಲ್ಲ” ಎಂದು ಹೇಳಿದ್ದಾರೆ.
35
ದೇವರ ಪ್ರಸಾದ ಬಿದ್ದಿತು
“ಒಂದು ದಿನ ಫೋನ್ ಬರುತ್ತದೆ, ಆ ಫೋನ್ ಮಾಡಿದ ವ್ಯಕ್ತಿ 20 ನಿಮಿಷ ಸಂಘಟನೆಯಲ್ಲಿ ನೀವು ಹೇಗೆ ಕೆಲಸ ಮಾಡಿದ್ದೀರಿ? ನಾನು ಕೆಲಸ ಮಾಡಿದ್ದೀನಿ ಎಂದು ಮಾತನಾಡುತ್ತಾರೆ, ಕೊನೆಯಲ್ಲಿ ನಾವು ಬಿಗ್ ಬಾಸ್ ಕಡೆಯಿಂದ ಎಂದು ಹೇಳುತ್ತಾರೆ. ಆ ಟೈಮ್‌ನಲ್ಲಿ ದೇವರ ಮನೆಗೆ ಹೋದಾಗ ದೇವರ ಪ್ರಸಾದ ಬಿದ್ದಿತು. ಏನೂ ಯೋಚನೆ ಮಾಡದೆ ಬಿಗ್ ಬಾಸ್ ಶೋ ಒಪ್ಪಿಕೊಂಡೆ, ಆ ನಿರ್ಧಾರ ಮಾಡಿಲ್ಲ ಅಂದಿದ್ದರೆ ಬಿಗ್ ಬಾಸ್ ಎನ್ನೋದು ನನ್ನನ್ನು ದಶಪಥ ಹೈವೆಯಲ್ಲಿ ನೇರವಾಗಿ ಕರೆದುಕೊಂಡು ಹೋಯ್ತು” ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
“ನಮ್ಮ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು, ಗಂಡು ದಿಕ್ಕಿಲ್ಲ. ನನ್ನ ತಾಯಿ ಜೈಲಿನಲ್ಲಿದ್ದಾಗ, ಮುಖ ತೋರಿಸೋಕೆ ಆಗದ ಪರಿಸ್ಥಿತಿಯಲ್ಲಿದ್ದರು. ಇಂದು ಹೊರಗಡೆ ಬಂದರೆ ನಮ್ಮ ತಾಯಿ ಹೀರೋಯಿನ್. ಇಂದಿಗೂ ಕೂಡ ನನ್ನ ತಾಯಿ ಜೊತೆ ಫೋಟೋ ತೆಗೆಸಿಕೊಳ್ಳುವ ಜನರಿದ್ದಾರೆ. ನನಗೆ ಮದುವೆ ಆಗುತ್ತಿರಲಿಲ್ಲ ಎನ್ನುವ ಪರಿಸ್ಥಿತಿ ಇತ್ತು. ಸೌಂದರ್ಯ ಮಾಡಿಕೊಳ್ತೀನಿ ಎಂದುಕೊಂಡಿರಲಿಲ್ಲ. ನಮ್ಮ ಮದುವೆ ಶಾಸ್ತ್ರದಲ್ಲಿ ಬಿಗ್ ಬಾಸ್ ಪ್ರತಿನಿಧಿ ಇರಬೇಕು ಎಂದುಕೊಂಡಿದ್ದೆವು, ರಜತ್ ಬಂದರು” ಎಂದಿದ್ದಾರೆ.
55
ಕಲರ್ಸ್ ಕನ್ನಡದ ಲೋಗೋ ಇಟ್ಟುಕೊಂಡಿದ್ದೀವಿ
“ದೇವರು ಎಂದಿಗೂ ಕಾಣಿಸಲ್ಲ, ಕಾಣಿಸದೆ ಇದ್ದರೆ ಅವನು ದೇವರು ಎನಿಸೋದಿಲ್ಲ. ಬಿಗ್ ಬಾಸ್ ನಮಗೆ ಇನ್ನೊಂದು ಜನ್ಮ ಅಲ್ಲ, ಪುನರ್‌ಜನ್ಮ. ಸೌಂದರ್ಯ, ಪರಿಕಲ್ಪನೆ ಎನ್ನುವ ಬದುಕನ್ನು ಬದುಕಲು ಸಾಧ್ಯ ಆಗಿದ್ದು ಬಿಗ್ ಬಾಸ್ ಶೋನಿಂದ. ನಮ್ಮ ಮನೆಯ ದೇವರ ಕೋಣೆಯಲ್ಲಿ ಕಲರ್ಸ್ ಕನ್ನಡದ ಲೋಗೋ ಇಟ್ಟುಕೊಂಡಿದ್ದೇವೆ” ಎಂದಿದ್ದಾರೆ.