BBK 12: ಕಳೆದ ವರ್ಷ ತ್ರಿವಿಕ್ರಮ್ ಮಾಡಿರೋ ಆರೋಪಕ್ಕೆ‌, ಈಗ ಮನೇಲಿ ನೆನಪಿಟ್ಟು ಉತ್ತರ ಕೊಟ್ಟ ಮೋಕ್ಷಿತಾ ಪೈ

Published : Nov 29, 2025, 06:57 AM IST

BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮನೆಗೆ ಸೀಸನ್‌ 11 ರ ಕೆಲ ಸ್ಪರ್ಧಿಗಳು ಬಂದಿದ್ದಾರೆ. ಬಿಗ್‌ ಬಾಸ್‌ ಶೋನಿಂದ ಏನು ಬದಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ, ಆದರೆ ಮೋಕ್ಷಿತಾ ಅವರು ತ್ರಿವಿಕ್ರಮ್‌ಗೆ ಉತ್ತರ ಕೊಟ್ಟು ಸುಮ್ಮನಾಗಿದ್ದಾರೆ.

PREV
15
ಸೀಸನ್‌ 11 ಸ್ಪರ್ಧಿಗಳು ಬಂದಿದ್ದು ಯಾಕೆ?

ಈ ಮನೆಗೆ ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತ್ರಿವಿಕ್ರಮ್‌, ಮ್ಯಾಕ್ಸ್ ಮಂಜು‌, ರಜತ್‌ ಅವರು ಆಗಮಿಸಿದ್ದರು. ಈ ಸೀಸನ್‌ ಮನೆಯು ರೆಸಾರ್ಟ್‌ ಆಗಿದ್ದು, ಸೀಸನ್‌ 11ರ ಸ್ಪರ್ಧಿಗಳು ಅತಿಥಿಗಳಾಗಿದ್ದರೆ, ಸೀಸನ್‌ 12ರ ಸ್ಪರ್ಧಿಗಳು ವೇಟರ್‌, ಸಪ್ಲೈಯರ್‌ ಆಗಬೇಕಿತ್ತು. ಈ ಟಾಸ್ಕ್‌ ನಡುವೆ ಮನದಾಳದ ಮಾತುಗಳನ್ನು ಹೇಳಲು ಸಮಯ ಸಿಕ್ಕಿತ್ತು.

25
ತ್ರಿಮೋಕ್ಷಿ ನೆನಪಿದೆಯಾ?

ಸೀಸನ್‌ 11ರಲ್ಲಿ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ ನಡುವೆ ಬೇಸರ ಇತ್ತು, ಇವರಿಬ್ಬರಿಗೂ ಸಾಕಷ್ಟು ಮನಸ್ತಾಪ ಇತ್ತು. ಮೋಕ್ಷಿತಾ ಅವರು ತ್ರಿವಿಕ್ರಮ್‌ ಅವರನ್ನು ಗೋಮುಖ ವ್ಯಾಘ್ರ ಎಂದು ಕರೆದರೆ, ತ್ರಿವಿಕ್ರಮ್‌ ಅವರು ಮೋಕ್ಷಿತಾರನ್ನು ಜೋಕರ್‌ ಎಂದಿದ್ದರು. ಆದರೆ ಹೊರಗಡೆ ಮಾತ್ರ ಕೆಲವರು ಇವರಿಬ್ಬರನ್ನು ಜೋಡಿಯಾಗಿ ನೋಡುತ್ತಿದ್ದರು, ತ್ರಿಮೋಕ್ಷಿ ಎಂದು ಹ್ಯಾಶ್‌ಟ್ಯಾಗ್‌ ಕ್ರಿಯೇಟ್‌ ಮಾಡಿದ್ದರು.

35
ಈ ಮನೇಲಿ ಜೀವಿಸಬೇಕು

ಬಿಗ್‌ ಬಾಸ್‌ ಟಾಸ್ಕ್‌ ನೀಡಿದಾಗ ಮೋಕ್ಷಿತಾ ಪೈ ಮಾತನಾಡಿದ್ದು, “ಬಿಗ್‌ ಬಾಸ್‌ ಮನೆಯಲ್ಲಿ ನಾನು ಹೆಚ್ಚು ನಾಮಿನೇಟ್‌ ಆಗಿದ್ದೆ, ಹೀಗಾಗಿ ಫಿನಾಲೆವರೆಗೂ ಹೋಗ್ತೀನಿ ಅಂತ ಸತ್ಯವಾಗಲೂ ಅಂದುಕೊಂಡಿರಲಿಲ್ಲ. ಕಪ್‌ ಗೆಲ್ತೀವೋ ಇಲ್ಲವೋ ಅದು ಸೆಕೆಂಡರಿ, ಆದರೆ ಈ ಮನೇಲಿ ಜೀವಿಸಬೇಕು ಎಂದು ಆಸೆ ಹುಟ್ಟಿಕೊಳ್ಳುತ್ತದೆ” ಎಂದಿದ್ದಾರೆ.

45
ನಿಂತ ಸಿನಿಮಾ ರಿಲೀಸ್‌ ಆಗ್ತಿದೆ

“ಈ ಮನೆ ಎಷ್ಟು ಕೊಟ್ಟಿದೆ ಅಂದರೆ, ರಜತ್‌ ಆಗ ಅತ್ತರು, ಆ ಪ್ರೀತಿಯನ್ನು ಹೊರಗಡೆ ನೋಡಿದೀವಿ, ಆಫರ್ಸ್‌ ಬರ್ತಿದೆ. ನಾನು ದೇವರ ದಯೆಯಿಂದ ಎರಡು ಸಿನಿಮಾಗಳನ್ನು ಮಾಡುತ್ತಿದ್ದೀನಿ, ನಿಂತು ಹೋಗಿರೋ ಸಿನಿಮಾ ಈಗ ರಿಲೀಸ್‌ ಆಗ್ತಿದೆ” ಎಂದಿದ್ದಾರೆ.

55
ತ್ರಿವಿಕ್ರಮ್‌ಗೆ ಟಾಂಟ್‌ ಕೊಟ್ಟರು

“ಮೋಕ್ಷಿತಾ ಅವರನ್ನು ನೋಡಿದರೆ ಜೋಕರ್‌ ಎಂದು ಅನಿಸುತ್ತದೆ ಎಂದು ತ್ರಿವಿಕ್ರಮ್‌ ಹೇಳಿದರು. ಫಿನಾಲೆಯಲ್ಲಿ ನಾನು ಟಾಪ್‌ 4 ಅಲ್ಲಿದ್ದೆ, ಈಗ ಹೇಳಿದೆ ಎಂದು ತ್ರಿವಿಕ್ರಮ್ ಬೇಸರ ಮಾಡಿಕೊಳ್ಳೋದು ಬೇಡ, ಬೇರೆಯವರ ಹಿಂದೆ ಈ ಮಾತು ಹೇಳಿಲ್ಲ, ನಿಮ್ಮ ಮುಂದೆ ಹೇಳಿದೆ” ಎಂದಿದ್ದಾರೆ.

Read more Photos on
click me!

Recommended Stories