ಬಿಗ್‌ಬಾಸ್ 13ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ತಾಂಡವ್ (ಸುದರ್ಶನ್) ಮತ್ತು ಶ್ರೇಷ್ಠಾ (ಕಾವ್ಯಾ) ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಾಂಡವ್ ಅವರ ನಿಜವಾದ ಪತ್ನಿ ಸಂಗೀತಾ ಜೊತೆಗೆ, ಭಾಗ್ಯ (ಸುಷ್ಮಾ) ಕೂಡ ಸ್ಪರ್ಧಿಸುವ ಸಾಧ್ಯತೆಯಿದ್ದು, 'ಭಾಗ್ಯಲಕ್ಷ್ಮಿ ಪಾರ್ಟ್-2' ಮಾಡುವ ನಿರೀಕ್ಷೆ ಹುಟ್ಟಿಸಿದೆ.
ಬಿಗ್‌ಬಾಸ್ 13 (Bigg Boss Kannada 13) ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇಂದೇ ಷೋ ಆರಂಭವಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
26
ತಾಂಡವ್, ಶ್ರೇಷ್ಠಾ ಎಂಟ್ರಿ
ಇದರ ನಡುವೆಯೇ, ಕೆಲವು ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿದೆ. ಅದರಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ತಾಂಡವ್ ಉರ್ಫ್ ಸುದರ್ಶನ್ ರಂಗನಾಥ್ ಹಾಗೂ ಶ್ರೇಷ್ಠಾ ಉರ್ಫ್ ಕಾವ್ಯಾ ಗೌಡ ಎಂಟ್ರಿಯಾಗಿದೆ. ಕುತೂಹಲ ಎಂದರೆ, ಈ ಬಾರಿಯ ಸೀಸನ್ನಲ್ಲಿ ಭಾಗ್ಯಲಕ್ಷ್ಮಿ ಅರ್ಥಾತ್ ನಟಿ ಸುಷ್ಮಾ ಕೆ.ರಾವ್ ಕೂಡ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಇದೆ.
36
ಭಾಗ್ಯಲಕ್ಷ್ಮಿ ಪಾರ್ಟ್-2
ಈ ಹಿನ್ನೆಲೆಯಲ್ಲಿ ಈ ಬಾರಿಯ ಬಿಗ್‌ಬಾಸ್ ಭಾಗ್ಯಲಕ್ಷ್ಮಿ ಪಾರ್ಟ್-2 (Bhagyalakshmi Part-2) ಆಗುವ ಸಾಧ್ಯತೆ ಇದೆ ಎಂದೇ ನೆಟ್ಟಿಗರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ. ಹೀಗೆ ಆದರೆ ಬಿಗ್‌ಬಾಸ್ ಸಕತ್ ಇಂಟರೆಸ್ಟಿಂಗ್ ಆಗಲಿದೆ.
ಅದೇ ಇನ್ನೊಂದೆಡೆ ಕುತೂಹಲದ ವಿಷ್ಯ ಏನಪ್ಪಾ ಎಂದರೆ ತಾಂಡವ್ ಅರ್ಥಾತ್ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ಪತ್ನಿ, ಸಂಗೀತಾ ಕೂಡ ಬಿಗ್ಬಾಸ್ಗೆ ಇದಾಗಲೇ ಎಂಟ್ರಿಕೊಟ್ಟಿದ್ದಾರೆ.
56
ಏನು ಮಾಡಲಿ ಎಂದು ಹೌಹಾರಿದ ತಾಂಡವ್
ಇವರಿಬ್ಬರನ್ನೂ ನೋಡಿದ ಸುದರ್ಶನ್ ಅವರು ಹೌಹಾರಿದ್ದು, ಇಬ್ಬರೂ ಜಗಳ ಮಾಡಿಕೊಂಡರೆ ನಾನು ಏನು ಮಾಡಿಕೊಳ್ಳಲಪ್ಪ ಎಂದು ಹೇಳಿರುವ ಪ್ರೊಮೋ ಅನ್ನು ಕಲರ್ಸ್ ವಾಹಿನಿ ಶೇರ್ ಮಾಡಿಕೊಂಡಿದೆ.
66
ಭಾಗ್ಯಳ ಎಂಟ್ರಿ ಆದರೆ
ಇದೀಗ ಇವರಿಬ್ಬರ ನಡುವೆ, ಭಾಗ್ಯಳ ಎಂಟ್ರಿನೂ ಆಗಿಬಿಟ್ಟರೆ, ಭಾಗ್ಯಲಕ್ಷ್ಮಿ ಸೀರಿಯಲ್ ಮುಗಿಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿರುವವರಿಗೆ ಸಕತ್ ಖುಷಿ ಕೊಡುವ ಸುದ್ದಿ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.