ಬಿರುಗಾಳಿ ಎದುರು ಸುಂಟರಗಾಳಿ! ಅಖಾಡಕ್ಕಿಳಿದ ಸೌಂದರ್ಯ ಶೆಟ್ಟಿ, ಟಾಸ್ಕ್‌ಗಾಗಿ ಜಟಾಪಟಿ

Published : Sep 10, 2026, 08:38 AM IST

ಬಿಗ್‌ಬಾಸ್ ಮನೆಯಲ್ಲಿ ಮೂರನೇ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಈ ಹಿಂದೆ ಹೆಚ್ಚು ಕಾಣಿಸಿಕೊಳ್ಳದ ಸೌಂದರ್ಯ ಶೆಟ್ಟಿ, ಇದೀಗ ಟಾಸ್ಕ್ ಆಡಲು ಆಸಿಯಾ ಫಿರ್ದೋಸ್ ಜೊತೆ ಜಟಾಪಟಿಗೆ ಇಳಿದಿದ್ದಾರೆ. ಇವರಿಬ್ಬರ ನಡುವಿನ ಈ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.

PREV
15
ಸೌಂದರ್ಯ ಶೆಟ್ಟಿ

ಸೌಂದರ್ಯ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಕಳೆದು ಹೋದ್ರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶೋ ಆರಂಭವಾಗಿ ಮೂರು ದಿನ ಕಳೆದ್ರೂ ಸೌಂದರ್ಯ ಶೆಟ್ಟಿ ಸ್ಕ್ರೀನ್ ಮೇಲೆ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಇಂದು ಬೆಳಗ್ಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಹುಶಃ ಆಸಿಯಾ ಫಿರ್ದೋಸ್‌ ಅವರನ್ನು ಸೌಂದರ್ಯ ವ್ಯಂಗ್ಯ ಮಾಡಿದಂತೆ ಕಾಣಿಸುತ್ತಿದೆ.

25
ಬಿಗ್‌ಬಾಸ್ ಮನೆಯಲ್ಲಿ ನಾನಾ? ನೀನಾ?

ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ನಾನಾ? ನೀನಾ ಎಂಬ ಆಟ ಶುರುವಾಗಿದೆ. ಎರಡು ಟಾಸ್ಕ್‌ಗಳ ಪೈಕಿ ಒಂದನ್ನು ಮನೆಯ ಸದಸ್ಯರು, ಮತ್ತೊಂದನ್ನು ವಿಮಾನದ ಪ್ರಯಾಣಿಕರು ಗೆದ್ದಿದ್ದಾರೆ. ಈಗ ಮೂರನೇ ಟಾಸ್ಕ್ ನೀಡಲಾಗಿದೆ. ಎರಡೂ ತಂಡಗಳಿಂದ ತಲಾ ಮೂವರು ಸ್ಪರ್ಧಿಗಳಾಡಬೇಕು. ಇದೀಗ ಆಟ ಯಾರು ಆಡಬೇಕು ಎಂಬುದರ ಬಗ್ಗೆ ಸ್ಪರ್ಧಿಗಳ ನಡುವೆ ಜಗಳ ಏರ್ಪಟ್ಟಿದೆ.

35
ಮೂರನೇ ಟಾಸ್ಕ್‌

ವಿಮಾನದ ಪ್ರಯಾಣಿಕರ ಪೈಕಿ ಆಸಿಯಾ ಫಿರ್ದೋಸ್ ನಾನು ಈ ಟಾಸ್ಕ್ ಆಡಲೇಬೇಕು. ಈ ಹಿಂದಿನ ಟಾಸ್ಕ್ ನಾನು ಆಟವಾಡಿಲ್ಲ. ಹಾಗಾಗಿ ನಾನು ಆಟವಾಡಬೇಕಿದೆ ಎಂದು ಹಠ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಒಂದು ಕ್ಷಣ ಆಸಿಯಾ ಫಿರ್ದೋಸ್ ಭಾವುಕರಾದರು. ಇತ್ತ ಸೌಂದರ್ಯ ಶೆಟ್ಟಿ, ನಾನು ಸಹ ಹಿಂದಿನ ಎರಡೂ ಟಾಸ್ಕ್ ಆಡಿಲ್ಲ. ಮೂರನೇ ಟಾಸ್ಕ್‌ಗೆ ನಾನು ಸ್ಪರ್ಧಿಯಾಗುತ್ತೇನೆ ಎಂದು ಜೋರು ಮಾಡಿದರು.

45
ಟಾಸ್ಕ್ ಆಡೋರು ಯಾರು?

ಟಾಸ್ಕ್ ಯಾರು ಆಡಬೇಕು ಎಂಬುದರ ಬಗ್ಗೆ ಸೌಂದರ್ಯ ಮತ್ತು ಆಸಿಯಾ ನಡುವೆ ಜಗಳ ಏರ್ಪಟ್ಟಿದೆ. ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿಯಾಗಿ ನಿಂತಿದ್ದಾರೆ. ಅಂತಿಮವಾಗಿ ಮೂರನೇ ಟಾಸ್ಕ್ ಆಡೋರು ಯಾರು? ಏನು ಟಾಸ್ಕ್? ಗೆಲ್ಲೋರು ಯಾರು? ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

55
ಬಿರುಗಾಳಿ Vs ಸುಂಟರಗಾಳಿ

ಬುಧವಾರದ ಸಂಚಿಕೆ ಬಗ್ಗೆ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗಗನ್ ಚಿನ್ನಪ್ಪ ಅವರ ಉಸ್ತುವಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಜಗದೀಶ್ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ. ಧನುಷ್ ವಿಮಾನದಲ್ಲಿಯೇ ಮುಂದಿನ ದಿನಗಳನ್ನು ಕಳಯುವ ಸ್ಪರ್ಧಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories