ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ

Published : Sep 09, 2026, 02:53 PM IST

Bigg Boss Kannada: ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ವೇದಿಕೆಯಲ್ಲಿ ಯುವತಿಯೊಬ್ಬಳಿಗೆ ಕಿಚ್ಚ ಸುದೀಪ್ ತೋರಿದ ಅಪಾರ ಗೌರವ ಮತ್ತು ಕಾಳಜಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

PREV
15
ಕಿಚ್ಚನ ಮೇಲಿನ ಗೌರವ ದುಪ್ಪಟ್ಟು

ಕಿಚ್ಚನ ಮೇಲಿನ ಗೌರವ ದುಪ್ಪಟ್ಟು
ಕಿರುತೆರೆಯ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ' ಸೀಸನ್ 13 ಅದ್ದೂರಿಯಾಗಿ ಶುರುವಾಗಿದೆ. ಎಂದಿನಂತೆ ಕಿಚ್ಚ ಸುದೀಪ್ ತಮ್ಮ ಖಡಕ್ ನಿರೂಪಣೆ ಮತ್ತು ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಆದರೆ, ಗ್ರ್ಯಾಂಡ್‌ ಓಪನಿಂಗ್‌ ನಡೆದ ಒಂದು ಸೂಕ್ಷ್ಮ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಕಿಚ್ಚನ ಮೇಲಿನ ಗೌರವವನ್ನು ದುಪ್ಪಟ್ಟು ಮಾಡಿದೆ.

25
ವೇದಿಕೆಯಲ್ಲಿ ನಡೆದಿದ್ದೇನು?

ವೇದಿಕೆಯಲ್ಲಿ ನಡೆದಿದ್ದೇನು?
ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಮುನ್ನ ಪ್ರತಿ ಸ್ಪರ್ಧಿಗೂ ಸುದೀಪ್ 'ಫ್ಲೈಟ್ ಟಿಕೆಟ್' ನೀಡಿ ಕಳುಹಿಸುವುದು ಈ ಬಾರಿಯ ಪರಿಕಲ್ಪನೆ (Concept) ಆಗಿತ್ತು. ಈ ಟಿಕೆಟ್ ಅನ್ನು ಸುದೀಪ್ ಅವರ ಕೈಗೆ ತಲುಪಿಸಲು ಏರ್‌ಹೋಸ್ಟೆಸ್ ವೇಷ ಧರಿಸಿದ ಯುವತಿಯೊಬ್ಬರು ವೇದಿಕೆಗೆ ಬರುತ್ತಿದ್ದರು. ಆದರೆ ಆರಂಭದಲ್ಲಿ ವೇದಿಕೆಯ ಮೆಟ್ಟಿಲುಗಳನ್ನು ಹತ್ತಿ ಇಳಿದು ಬರುವಾಗ ಆ ಯುವತಿ ಆಯತಪ್ಪಿ ಒಮ್ಮೆ ಎಡವುತ್ತಾರೆ.

ಇದನ್ನು ಕಣ್ಣಾರೇ ಕಂಡ ಕಿಚ್ಚ ಸುದೀಪ್, ಆಕೆಗೆ ಮತ್ತೆ ಯಾವುದೇ ಮುಜುಗರ ಅಥವಾ ಕಷ್ಟವಾಗಬಾರದು ಎಂದು ತಕ್ಷಣವೇ ನಿರ್ಧಾರ ಬದಲಿಸುತ್ತಾರೆ. ನಂತರ ಪ್ರತಿ ಬಾರಿಯೂ ಆ ಯುವತಿಯನ್ನು ವೇದಿಕೆಯ ಮೇಲೆ ಹತ್ತಲು ಬಿಡದೆ, ಆಕೆ ದೂರದಲ್ಲಿ ಬರುತ್ತಿದ್ದಂತೆಯೇ ತಾವೇ ಸ್ವತಃ ಮುಂದೆ ನಡೆದುಹೋಗಿ ಆಕೆಯ ಬಳಿಯೇ ಟಿಕೆಟ್ ಪಡೆದುಕೊಂಡು ಬರುತ್ತಾರೆ.

35
ವಿಡಿಯೋ ಮಾಡಿ ಗುಟ್ಟು ರಟ್ಟು ಮಾಡಿದ ನೆಟ್ಟಿಗ!

ವಿಡಿಯೋ ಮಾಡಿ ಗುಟ್ಟು ರಟ್ಟು ಮಾಡಿದ ನೆಟ್ಟಿಗ!
ವೀಕ್ಷಕರ ಕಣ್ಣಿಗೆ ಸಾಮಾನ್ಯವಾಗಿ ಕಾಣದ ಈ ಪುಟ್ಟ ಘಟನೆಯನ್ನು ತೇಜಸ್ ಗೌಡ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಸೂಕ್ಷ್ಮವಾಗಿ ಗಮನಿಸಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. "ಸುದೀಪ್ ಸರ್ ಆ ಯುವತಿಯನ್ನು ಸ್ಟೇಜ್ ಮೇಲೆ ಕರೆಯದೆ ತಾವೇ ಏಕೆ ಹೋಗಿ ಟಿಕೆಟ್ ಪಡೆಯುತ್ತಿದ್ದರು"? ಎಂಬ ಅಸಲಿ ಕಾರಣವನ್ನು ವಿವರಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

45
ವಿಷ್ಣುದಾದಾ ಅವರನ್ನ ನೆನೆದ ಅಭಿಮಾನಿಗಳು

ವಿಷ್ಣುದಾದಾ ಅವರನ್ನ ನೆನೆದ ಅಭಿಮಾನಿಗಳು
ಸುದೀಪ್ ಅವರ ಈ ಮಾನವೀಯತೆ ಮತ್ತು ಹೆಣ್ಣುಮಕ್ಕಳಿಗೆ ನೀಡುವ ಗೌರವವನ್ನು ಕಂಡ ನೆಟ್ಟಿಗರು, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡಿದ್ದಾರೆ. ವಿಷ್ಣುದಾದಾ ಕೂಡ ಹೆಣ್ಣುಮಕ್ಕಳಿಗೆ ಅಪಾರ ಗೌರವ ನೀಡುತ್ತಿದ್ದರು, ಸುದೀಪ್ ಅವರಲ್ಲೂ ಅದೇ ಸಂಸ್ಕಾರ ಎದ್ದು ಕಾಣುತ್ತಿದೆ ಎಂದು ಕೊಂಡಾಡಿದ್ದಾರೆ.

55
ವೈರಲ್ ವಿಡಿಯೋಗೆ ಬಂದ ನೆಟ್ಟಿಗರ ಮೆಚ್ಚುಗೆಯ ಕಮೆಂಟ್‌ಗಳು

ವೈರಲ್ ವಿಡಿಯೋಗೆ ಬಂದ ನೆಟ್ಟಿಗರ ಮೆಚ್ಚುಗೆಯ ಕಮೆಂಟ್‌ಗಳು
"ಸತ್ಯ ಸತ್ಯ ಸತ್ಯ... ಇದು ನೂರಕ್ಕೆ ನೂರರಷ್ಟು ಸತ್ಯ. ವಿಷ್ಣುವರ್ಧನ್ ಅವರು ಹೆಣ್ಣಿಗೆ ತುಂಬಾ ಗೌರವ ಕೊಡುತ್ತಿದ್ದರು. ಕಿಚ್ಚ ಕೂಡ ಹೆಣ್ಣನ್ನು ಅಷ್ಟೇ ಗೌರವದಿಂದ ಕಾಣುತ್ತಾರೆ. ಹೆಣ್ಣಿಗೆ ಗೌರವ ಕೊಡುವ ಮನುಷ್ಯ ಯಾವತ್ತೂ ದೊಡ್ಡವನೇ!"

"ವಿಷ್ಣು ಸರ್... ಕಿಚ್ಚನ ದೇವರು, ಗುರುವಿನ ಗುಣ ಶಿಷ್ಯನಿಗೆ ಬಂದಿದೆ."

"Proud to be a Kiccha Fan! ಸುದೀಪ್ ಅವರ ಈ ಸರಳತೆ ಮತ್ತು ಕಾಳಜಿಯೇ ಅವರನ್ನು ಎತ್ತರಕ್ಕೆ ಕೊಂಡೊಯ್ದಿರುವುದು."

ಒಟ್ಟಿನಲ್ಲಿ ಬಿಗ್ ಬಾಸ್ ಜಗಳ, ಕಾಂಟ್ರವರ್ಸಿಗಳ ನಡುವೆ ಸುದೀಪ್ ಅವರ ಈ 'ಜೆಂಟಲ್‌ಮ್ಯಾನ್' ಗುಣ ವೀಕ್ಷಕರ ಮನಗೆದ್ದಿರುವುದಂತೂ ಸುಳ್ಳಲ್ಲ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories