ಬಿಗ್‌ಬಾಸ್ ಮನೆಯಲ್ಲಿ ವಿಮಾನದ ಸದಸ್ಯರು ಮತ್ತು ಮನೆಯ ಸದಸ್ಯರ ನಡುವೆ 'ಮಾಡಿದ್ದುಣ್ಣೋ ಮಾರಾಯಾ' ಆಹಾರ ಟಾಸ್ಕ್ ನಡೆದಿದೆ. ಈ ಮಧ್ಯೆ, ಬೇಸ್ ವಾಯ್ಸ್ ವಿಚಾರವಾಗಿ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಡೈಮಂಡ್ ಹುಡುಕಾಟದಲ್ಲಿ ಸೋತ ಆಸಿಯಾ ಮತ್ತೆ ವಿಮಾನ ಸೇರಿದ್ದಾರೆ.
ವಿಮಾನದಲ್ಲಿರೋರು ಮತ್ತು ಬಿಗ್‌ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ನಡುವೆ ಟಾಸ್ಕ್ ಶುರುವಾಗಿದೆ. ಆರು ಜನರ ಒಂದೊಂದು ತಂಡಗಳ ನಡುವೆ ಸೇವಿಸಲು ಸಾಧ್ಯವಾಗದಂತಹ ಆಹಾರ ತಿನ್ನಬೇಕು. ಒಂದೆಡೆ ಇಂತಹ ಆಹಾರ ತಿನ್ನಲು ಮಂಜ ಮತ್ತು ಲಿಖಿತ್ ಕುಳಿತಿದ್ದಾರೆ. ಮತ್ತೊಂದೆಡೆ ಓಂಪ್ರಕಾಶ್ ರಾವ್ ಮತ್ತು ಜಗದೀಶ್ ತಿನ್ನುತ್ತಿದ್ದಾರೆ.
25
ವಿಮಾನದ ಸದಸ್ಯರು
ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವಿಮಾನದ ಸದಸ್ಯರು ಟಾಸ್ಕ್ ಗೆದ್ದಂತೆ ಕಾಣಿಸುತ್ತಿದೆ. ಗೆದ್ದ ಬಳಿಕ ಮಾಡರ್ನ್ ಕವಿ ಮಂಜ, ಬಡದ್ದು ಬಾಯಿಗೆ ಹಾಕೊಂಡು ತೇಗ್ ಹೊಡೆದು ಹೋಗ್ತಿನಿ ಎಂದು ಡೈಲಾಗ್ ಹೊಡೆಯುತ್ತಾರೆ. ನಂತರ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ಮಾತಿನ ಚಕಮಕಿ ಉಂಟಾಗಿದೆ.
35
ಇಬ್ಬರ ನಡುವೆ ಬೇಸ್ ವಾಯ್ಸ್‌ಗಾಗಿ ಜಗಳ
ಈ ಹಿಂದೆಯೂ ವಿಮಾನದಲ್ಲಿದ್ದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅಧಿಕ ಪ್ರಸಂಗತನ ಮಾತಾಡಬೇಡ, ಸೈಡ್‌ಗೆ ಹೋಗ್ರಿ ಎಂದು ಮಂಜನಿಗೆ ಗಗನ್ ವಾರ್ನಿಂಗ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಂಜ, ಆರಾಮ್ ಆಗಿ ಮಾತಾಡು ಬ್ರೋ ಎಂದು ಗಗನ್ ರೀತಿಯಲ್ಲಿ ಹೇಳಿ ಟಾಂಗ್ ಕೊಟ್ಟಿದ್ದಾರೆ. ಇಬ್ಬರ ನಡುವೆ ಬೇಸ್ ವಾಯ್ಸ್‌ಗಾಗಿ ಜಗಳ ನಡೆದಿದೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ.
ಡೈಮಂಡ್ ಹುಡುಕಾಟದಲ್ಲಿ ಎಲ್ಲಾ ಸದಸ್ಯರು ತಪ್ಪಾಗಿ ಆಸಿಯಾ ಫಿರ್ದೋಸ್ ಹೆಸರು ಹೇಳಿದ್ದರಿಂದ ಶ್ರಾವಣಿ ಕಣ್ಣೀರು ಹಾಕುತ್ತಾ ಮತ್ತೆ ವಿಮಾನ ಸೇರಿಕೊಂಡಿದ್ದಾಳೆ. ಕಣ್ಣೀರು ಹಾಕುತ್ತಾ ಬಂದ ಶ್ರಾವಣಿಯನ್ನು ವಿಮಾನದಲ್ಲಿದ್ದ ಸದಸ್ಯರು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಸಿಯಾ ಆರೋಪಿಸಿದ್ದಾರೆ.
55
ಡೈಮಂಡ್ ಹುಡುಕಾಟ
ಡೈಮಂಡ್ ಹುಡುಕಾಟದಲ್ಲಿ ಚಾಣಕ್ಷನಾಗಿ ಗೆದ್ದಿರುವ ಗಗನ್ ಚಿನ್ನಪ್ಪ, ಈ ವಾರ ಸೇಫ್ ಆಗಿದ್ದಾರೆ. ಇಂದಿನ ಟಾಸ್ಕ್ ಗೆದ್ದಿರುವ ಸ್ಪರ್ಧಿಗಳು ಯಾರು ಸೇವ್ ಆಗ್ತಾರೆ ಅನ್ನೋದು ಇವತ್ತಿನ ಸಂಚಿಕೆಯಲ್ಲಿ ತಿಳಿಯಲಿದೆ. ಮೊದಲ ಸೇವ್ ಕಂಟೆಸ್ಟಂಟ್ ಆಗಿರೋ ಗಗನ್, ಈಗ ಮನೆಯ ವಿವಿಐಪಿ ಆಗಿ ಹಲವು ಸೌಲಭ್ಯ ಮತ್ತು ಅಧಿಕಾರಗಳನ್ನು ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.