ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್‌ಗೆ ಎರಡನೇ ಬಾರಿಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳಿಗೆ ಹೆಂಡತಿಯ ಎದುರು ಗೆಲ್ಲಲು ಪ್ರಯತ್ನಿಸಬೇಡಿ ಎಂದು ಕಿವಿಮಾತು ಹೇಳಿದ್ದು, ಸುದೀಪ್ ಅವರ ಪಯಣವನ್ನು ಟೆಸ್ಟ್ ಮ್ಯಾಚ್‌ಗೆ ಹೋಲಿಸಿದ್ದಾರೆ.
ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಎರಡನೇ ಬಾರಿಗೆ ಬಿಗ್ ಬಾಸ್‌ಗೆ ಬಂದಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬಿಗ್ ಹಿಟ್ ನೀಡಿದ ʻಹುಚ್ಚʼ ಸಿನಿಮಾದ ನಿರ್ದೇಶಕರೇ ಈ ಓಂ ಪ್ರಕಾಶ್ ರಾವ್. ಈ ಹಿಂದೆ ಅವರು ಬಿಗ್ಬಾಸ್ ಮನೆಗೆ ಬಂದಿದ್ದರೂ, ಅನಾರೋಗ್ಯ ಕಾರಣದಿಂದ ಹೊರಕ್ಕೆ ಹೋಗಿದ್ದರು. ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
26
ಹಾಸ್ಯಕ್ಕೆ ಕೊರತೆ ಇಲ್ಲ
ಇವರಿದ್ದರೆ ಹಾಸ್ಯಕ್ಕೆ ಕೊರತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ಅವರ ಹಾಸ್ಯದ ತುಣುಕುಗಳು ಇನ್ನಷ್ಟೇ ಒಂದೊಂದೇ ಹೊರಬರಬೇಕಿದೆ. ಅವರೀಗ ಬಿಗ್ಬಾಸ್ ಸ್ಪರ್ಧಿಗಳಿಗೆ ಒಂದು ಕಿವಿಮಾತು ಹೇಳಿಕೊಟ್ಟಿದ್ದಾರೆ.
36
ಹೆಂಡ್ತಿಯ ವಿಷ್ಯ
ಅದೇನೆಂದರೆ, ಪ್ರಪಂಚದಲ್ಲಿ ಎಲ್ಲಿ ಬೇಕಾದ್ರೂ ಗೆಲ್ಲೋಕೆ ಟ್ರೈ ಮಾಡಿ, ಆದ್ರೆ ಹೆಂಡ್ತಿ ಎದುರು ಮಾತ್ರ ಇದನ್ನು ಟ್ರೈ ಮಾಡಬೇಡಿ ಎಂದಿದ್ದಾರೆ. ಇದಕ್ಕೆ ಅಲ್ಲಿ ಇದ್ದವರು ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಬಳಿಕ, ಗಗನ್ ಚಿನ್ನಪ್ಪ ಅವರು, ನನ್ನ ಅಪ್ಪನೂ ಹಾಗೆ ಹೇಳ್ತಾರೆ ಎಂದರು.
ಅಂದಹಾಗೆ, ʻಹುಚ್ಚʼ ಸಿನಿಮಾದಲ್ಲಿ ನಾಯಕಿ ರೇಖಾ ದಾಸ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದವರೇ ಓಂ ಪ್ರಕಾಶ್ ಅವರ ಧರ್ಮಪತ್ನಿ. ಇದನ್ನು ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಹೇಳಿದ್ದರು.
56
ಕಿಚ್ಚನ ಜೋಕ್
ಈ ಸಂದರ್ಭದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕೊಟ್ಟʻಹುಚ್ಚʼ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು. “ಹುಚ್ಚ ಸಿನಿಮಾದಲ್ಲಿ ನಾಯಕಿ ರೇಖಾ ವೇದವ್ಯಾಸ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದವರೇ ಓಂ ಪ್ರಕಾಶ್ ಅವರ ಪತ್ನಿ. ನನ್ನ ಸಿನಿಮಾದ ಕ್ಲೈಮ್ಯಾಕ್ಸ್ ಏನಾಯ್ತೋ ಗೊತ್ತಿಲ್ಲ, ಆದರೆ ಇವರ ಜೀವನದ ಕ್ಲೈಮ್ಯಾಕ್ಸ್ ಮಾತ್ರ ಎಕ್ಸ್ಟ್ರಾ ಆರ್ಡಿನರಿ ಎಂದರು.
66
ಕ್ರಿಕೆಟ್ಗೆ ಹೋಲಿಕೆ
ಓಂ ಪ್ರಕಾಶ್ ರಾವ್ ಅವರ ಬಿಗ್ ಬಾಸ್ ಪಯಣವನ್ನ ಕ್ರಿಕೆಟ್ಗೆ ಹೋಲಿಸಿದ ಸುದೀಪ್, “ಕೆಲವರು ಬಿಗ್ ಬಾಸ್‌ಗೆ 20-20 ಮ್ಯಾಚ್ ತರಹ ಬಂದು ಹೋಗ್ತಾರೆ. ಇನ್ನು ಕೆಲವರಿಗೆ 50 ಓವರ್‌ಗಳ ಇನ್ನಿಂಗ್ಸ್. ಆದರೆ ನೀವು ಮಾತ್ರ ಇದನ್ನ ಟೆಸ್ಟ್ ಮ್ಯಾಚ್ ಮಾಡಿಕೊಂಡು ಬಿಟ್ಟಿದ್ದೀರ” ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.