BBK 12: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ: ಧ್ರುವಂತ್‌ಗೆ ಗಿಲ್ಲಿ ವಾರ್ನಿಂಗ್

Published : Jan 01, 2026, 02:41 PM IST

ಬಿಗ್‌ಬಾಸ್ ಮನೆಯಲ್ಲಿ ಹೊಸ ವರ್ಷದ ಹಾಡು ರಚನೆ ವೇಳೆ ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ತೀವ್ರ ವಾಕ್ಸಮರ ನಡೆದಿದೆ. ತನ್ನ ಹೆಸರು ಬಳಸದಂತೆ ಧ್ರುವಂತ್ ಹೇಳಿದ್ದಕ್ಕೆ ಕೋಪಗೊಂಡ ಗಿಲ್ಲಿ ನಟ, 'ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. 

PREV
15
ಗಿಲ್ಲಿ ನಟ ಖಡಕ್ ಎಚ್ಚರಿಕೆ

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿಯೂ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಈ ಆಚರಣೆಗಾಗಿ ಮನೆಯ ಘಟನೆಗಳನ್ನು ಆಧರಿಸಿ ಹಾಡು ರಚಿಸುವಂತೆ ಬಿಗ್‌ಬಾಸ್ ಸೂಚನೆ ನೀಡಿದ್ದಾರೆ. ಆದರೆ ಈ ಹಾಡು ರಚನೆ ವೇಳೆ ಧ್ರುವಂತ್‌ಗೆ ಗಿಲ್ಲಿ ನಟ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

25
ಹಾಡಿನ ಸಾಹಿತ್ಯಕ್ಕೆ ಧ್ರುವಂತ್ ಬೇಸರ

ಈ ವಾರದ ಆರಂಭದಿಂದಲೂ ಗಿಲ್ಲಿ ನಟ ಮತ್ತು ಧ್ರುವಂತ್ ಹಾವು-ಮುಂಗೂಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ಸೂಚನೆ ಬಳಿ ಹಾಡು ರಚನೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ರಘು ಜೊತೆ ಚರ್ಚಿಸಿ ಗಿಲ್ಲಿ ನಟ ಸಾಹಿತ್ಯ ಬರೆಯುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಧ್ರುವಂತ್, ಹಾಡಿನಲ್ಲಿ ತಮ್ಮ ಹೆಸರು ಸೇರಿಸದಂತೆ ಹೇಳುತ್ತಾರೆ.

35
ಧ್ರುವಂತ್ ಕೋಪ

ಇದಕ್ಕೆ ಕೋಪಗೊಂಡ ಗಿಲ್ಲಿ ನಟ, ಸೇರಿಸುವೆ ಮತ್ತು ಮನೆಯಲ್ಲಿರುವ ಎಲ್ಲಾ ಸದಸ್ಯರ ಹೆಸರುಗಳನ್ನು ಸೇರಿಸುತ್ತೇವೆ ಎಂದು ಹೇಳುತ್ತಾರೆ. ನಿನ್ನ ಹಾಡಿನಲ್ಲೊ ನನ್ನ ಹೆಸರು ಬಂದ್ರೆ ಕಾಗದ ಹರಿದು ಹಾಕುವೆ ಅಂತ ಕೋಪ ವ್ಯಕ್ತಪಡಿಸುತ್ತಾರೆ. ಇದರಿಂದ ಕೋಪಗೊಂಡ ಗಿಲ್ಲಿ ನಟ, ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.

45
ಹಾರಾಟ, ಕೂಗಾಟ

ಬುಧವಾರದ ಸಂಚಿಕೆಯಲ್ಲಿಯೂ ಗಿಲ್ಲಿ ನಟನ ವಿರುದ್ಧ ಅಶ್ವಿನಿ ಗೌಡ ಅವರೊಂದಿಗೆ ಸೇರಿಕೊಂಡು ಧ್ರುವಂತ್ ವಾಕ್ಸಮರವೇ ನಡೆಸಿದ್ದರು. ಮನೆಯ ಸದಸ್ಯರು ತಿಳಿ ಹೇಳಿದರೂ ಮೂವರು ತಮ್ಮ ಮಾತುಗಳನ್ನು ನಿಲ್ಲಿಸಿರಲಿಲ್ಲ. ನಿಮ್ಮ ಹಾರಾಟ, ಕೂಗಾಟದಿಂದ ಗಾರ್ಡನ್ ಏರಿಯಾಗೆ ಬರೋದಕ್ಕೆ ಆಗ್ತಿಲ್ಲ ಎಂದು ಸ್ಪಂದನಾ ಬೇಸರ ಹೊರ ಹಾಕಿದ್ದರು.

ಇದನ್ನೂ ಓದಿ: BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು?

55
ಕ್ಯಾಪ್ಟನ್ಸಿ ಟಾಸ್ಕ್‌

ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಮುಂದಿನ ವಾರ ಕ್ಯಾಪ್ಟನ್ ಆಗುವ ಸದಸ್ಯ ನೇರವಾಗಿ ಗ್ರ್ಯಾಂಡ್ ಫಿನಾಲೆಯ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಹಾಗಾಗಿ ಕ್ಯಾಪ್ಟನ್ಸಿ ಟಾಸ್ಕ್ ಯಾರು ಗೆಲ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: BBK 12: ಯಾಕಿಂಗೆ ಆದೆ ಗಿಲ್ಲಿ? ಅಭಿಮಾನಿಗಳಿಂದಲೇ ಬೇಸರ; ಇತ್ತ ಗಿಲ್ಲಿಯಾಗಿ ಬದಲಾದ್ರಂತೆ ರಘು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories