BBK 12: ಮನದಾಳದ ನೋವು ಹಂಚಿಕೊಳ್ಳುತ್ತಾ ಮನೆಯಲ್ಲಿನ ರಾಜಕೀಯ ರಿವೀಲ್ ಮಾಡಿದ ರಾಶಿಕಾ

Published : Nov 30, 2025, 02:29 PM IST

ಬಿಗ್‌ಬಾಸ್ ಕನ್ನಡ ಸೀಸನ್ 12ರ ಪ್ರಬಲ ಸ್ಪರ್ಧಿ ರಾಶಿಕಾ ಶೆಟ್ಟಿ, ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗುಳಿದಿದ್ದಾರೆ. ಮನೆಯೊಳಗಿನ ರಾಜಕೀಯದಿಂದಾಗಿ ಇತರ ಸ್ಪರ್ಧಿಗಳು ಸ್ಪಂದನಾಗೆ ಪಾಯಿಂಟ್ಸ್ ನೀಡಿದ್ದರಿಂದ ತಮಗೆ ಅವಕಾಶ ತಪ್ಪಿತು ಎಂದು ರಾಶಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

PREV
15
ರಾಶಿಕಾ ಶೆಟ್ಟಿ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಪ್ರಬಲ ಮಹಿಳಾ ಸ್ಪರ್ಧಿಗಳ ಪೈಕಿ ರಾಶಿಕಾ ಶೆಟ್ಟಿ ಒಬ್ಬರಾಗಿದ್ದಾರೆ. ಯಾವುದೇ ಟಾಸ್ಕ್ ಬಂದ್ರೂ ರಾಶಿಕಾ ಶೆಟ್ಟಿ ಮುಂದೆ ಬರುತ್ತಾರೆ. ಅದರಲ್ಲಿಯೂ ವಿಶೇಷವಾಗಿ ದೈಹಿಕ ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡುವ ಮೂಲಕ ತಮ್ಮನ್ನು ಸಾಬೀತು ಮಾಡಿಕೊಂಡಿದ್ದಾರೆ. ಮನೆಯೊಳಗಿನ ರಾಜಕೀಯದಿಂದಾಗಿ ತಾವು ಕ್ಯಾಪ್ಟನ್ಸಿ ಟಾಸ್ಕ್‌ಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ರಾಶಿಕಾ ಹೇಳಿಕೊಂಡಿದ್ದಾರೆ.

25
ಪಾಯಿಂಟ್ಸ್

ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪಡೆದುಕೊಂಡ ಪಾಯಿಂಟ್ಸ್ ಆಧಾರದ ಮೇಲೆ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಲಾಗುತ್ತಿತ್ತು. ಸ್ಪಂದನಾ ಮತ್ತು ರಾಶಿಕಾ ಪಾಯಿಂಟ್ಸ್ ಸಮಾನವಾಗಿದ್ದರಿಂದ ಬಿಗ್‌ಬಾಸ್ ಸಣ್ಣದಾದ ಟ್ವಿಸ್ಟ್ ನೀಡುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗದ ಸ್ಪರ್ಧಿಗಳು ತಮ್ಮಲ್ಲಿರುವ ಪಾಯಿಂಟ್ಸ್‌ನ್ನು ಇಬ್ಬರ ಪೈಕಿ ಒಬ್ಬರಿಗೆ ನೀಡಬೇಕು ಎಂದು ಸೂಚಿಸುತ್ತಾರೆ.

35
ಸ್ಪಂದನಾಗೆ ಹೆಚ್ಚು ಪಾಯಿಂಟ್ಸ್

ರಕ್ಷಿತಾ ಶೆಟ್ಟಿ ಮತ್ತು ಮಾಳು ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಪರ್ಧಿಗಳು ಸ್ಪಂದನಾ ಅವರಿಗೆ ಪಾಯಿಂಟ್ಸ್ ನೀಡುತ್ತಾರೆ. ಇದರಿಂದಾಗಿ ಸ್ಪಂದನಾ ಟಾಸ್ಕ್ ಆಡುತ್ತಾರೆ. ಅಂತಿಮವಾಗಿ ಧನುಷ್ ಟಾಸ್ಕ್ ಗೆದ್ದು ಎರಡನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವಿಷಯವಾಗಿ ಅಭಿಷೇಕ್ ಜೊತೆ ಮಾತನಾಡುವ ಸಂದರ್ಭದಲ್ಲಿ ರಾಶಿಕಾ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

45
ಟಾಸ್ಕ್

ನನ್ನ ಹೆಸರು ಪದೇ ಪದೇ ಹೇಳ್ತಿದ್ರೆ ಈ ಮನೆಯಲ್ಲಿ ನಾನು ಏನೋ ಮಾಡ್ತೀದ್ದೀನಿ ಅಂತ. ನಾನು ಕ್ಯಾಪ್ಟನ್ಸಿ ಆಟಕ್ಕೆ ಹೋಗೋದು ಯಾರಿಗೂ ಇಷ್ಟ ಇರಲಿಲ್ಲ ಅಂತ ಮಂಜಣ್ಣ ಸರಿಯಾಗಿಯೇ ಹೇಳಿದ್ದಾರೆ. ನನಗೆ ಪಾಯಿಂಟ್ಸ್ ಸಿಗಲ್ಲ ಅಂತ ನನಗೆ ಗೊತ್ತಿತ್ತು. ಸ್ಪಂದನಾ ಟಾಸ್ಕ್ ವಿನ್ ಆಗಲ್ಲ ಅಂತ ನನ್ನ ಮುಂದೆಯೇ ಗಿಲ್ಲಿ ಹೇಳಿದ. ರಾಶಿಕಾ ಮೊದಲ ಮಹಿಳಾ ಕ್ಯಾಪ್ಟನ್ ಆಗಬಾರದು ಅನ್ನೋ ತಂತ್ರಗಾರಿಕೆ ಅಲ್ಲಿದೆ ಎಂದು ರಾಶಿಕಾ ಶೆಟ್ಟಿ ಹೇಳುತ್ತಾರೆ.

ಇದನ್ನೂ ಓದಿ: ನಿಮಗೆ ಬೇಕಾದ ಉತ್ತರ ಬೇಕಿದ್ರೆ ಪ್ರಶ್ನೆ ಯಾಕೆ ಕೇಳಬೇಕು? ಕಾವ್ಯಾ ಅಭಿಪ್ರಾಯ ಬದಲಿಸಿದ್ರಾ ಸುದೀಪ್?

55
ತುಳಿಯುವ ಕೆಲಸ

ಟಾಸ್ಕ್‌ನಲ್ಲಿ ನಾನು ಸ್ಟ್ರಾಂಗ್ ಅನ್ನೋ ಕಾರಣಕ್ಕೆ ನನ್ನನ್ನು ತುಳಿಯುವ ಕೆಲಸ ಆಗ್ತಿದೆ. ನೀವಿಬ್ಬರು (ಧನುಷ್ ಮತ್ತು ಅಭಿಷೇಕ್) ಸ್ಟ್ರಾಂಗ್ ಎಂಬ ಕಾರಣಕ್ಕೆ ಹಿಂದೆ ನಿಮ್ಮಿಬ್ಬರನ್ನು ಟಾರ್ಗೆಟ್ ಮಾಡಲಾಯ್ತು. ನೀವು ಬಂದ್ರೆ ಅವರ ಆಟಕ್ಕೆ ತೊಂದರೆ ಆಗುತ್ತೆ ಎಂದು ಗೊತ್ತಿತ್ತು. ನೀವು ಸ್ಟ್ರಾಂಗ್ ಇದ್ರೆ ತಾನೇ ನಿಮ್ಮನ್ನು ಟಾರ್ಗೆಟ್ ಮಾಡ್ತಾರೆ. ಇಲ್ಲಾಂದ್ರೆ ನಿಮ್ಮನ್ನು ಮುಟ್ಟೋದೇ ಇಲ್ಲ ಎಂದು ಅಭಿಷೇಕ್ ಮುಂದೆ ರಾಶಿಕಾ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: BBK 12: ಆಚೆ ಬಂದ್ರೆ ಫ್ರೆಂಡ್‌ಶಿಪ್ ಉಳಿಯಲ್ಲ, ಈ ಲವ್ವೆಲ್ಲಾ ಕಬ್ಬನ್‌ ಪಾರ್ಕ್‌ಗೆ ಸೀಮಿತ ಎಂದ Prashanth Sambargi

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories