BBK 12: ಕಾವ್ಯಾನ ‘ಕಾಂತಾರ’ ಕನಕವತಿಗೆ ಹೋಲಿಸಿದ ಗಿಲ್ಲಿ ಫ್ಯಾನ್ಸ್… ಪೂರ್ತಿ ವಿಡಿಯೋ ನೋಡಿ ಎಂದ ಜನ

Published : Nov 30, 2025, 12:36 PM IST

BBK 12: ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿಚ್ಚನ ಪಂಚಾಯತಿಯಲ್ಲಿ ಗಿಲ್ಲಿ ತಪ್ಪು ಮಾಡಿದ ಎಂದು ಹೇಳಿದ ಕಾವ್ಯಾಳನ್ನು ಗಿಲ್ಲಿ ಫ್ಯಾನ್ಸ್ ಕಾಂತಾರ ಚಾಪ್ಟರ್ 2ನಲ್ಲಿ ರುಕ್ಮಿಣಿ ವಸಂತ್ ನಿರ್ವಹಿಸಿರುವ ಕನಕವತಿ ಪಾತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಆದ್ರೆ ಜನರು ಪೂರ್ತಿ ಗೊತ್ತಿರದೇ ಮಾತಡಬೇಡಿ ಎಂದಿದ್ದಾರೆ. 

PREV
15
ಬಿಗ್ ಬಾಸ್ ಕನ್ನಡ

ಬಿಗ್ ಬಾಸ್ ಕನ್ನಡದಲ್ಲಿ ಕಳೆದ ವಾರ ಗೆಸ್ಟ್ ಗಳ ಆಗಮನ ಆಗಿತ್ತು. ಮನರಂಜನೆ ಭರ್ಜರಿಯಾಗಿತ್ತು. ಆದರೆ ಗಿಲ್ಲಿ ಹಾಗೂ ಸ್ಪರ್ಧಿಗಳ ನಡುವೆ ಕೊಂಚ ಕಿರಿಕ್ ಉಂಟಾಗಿತ್ತು. ತಮಾಷೆ ಮಾಡಲು ಹೋಗಿ ಗಿಲ್ಲಿ ಅತಿಥಿಗಳ ಕೋಪಕ್ಕೆ ಗುರಿಯಾಗಿದ್ದರು. ಇದೇ ವಿಷಯ ಈಗ ಚರ್ಚೆಯಲ್ಲಿದೆ.

25
ಕಿಚ್ಚ ಸುದೀಪ್ ಪ್ರಶ್ನೆ

ಕಿಚ್ಚನ ಪಂಚಾಯತಿಯಲ್ಲೂ ಕೂಡ ಅದೇ ವಿಚಾರದ ಕುರಿತು ಚರ್ಚೆ ನಡೆದಿದೆ. ಕಿಚ್ಚ ನೀವು ಮಾಡಿದ್ದು, ಸರೀನಾ ಗಿಲ್ಲಿ? ನೀವು ಯಾವುದಾದರು ಹೊಟೇಲ್ ಹೋದಾಗ ನಿಮ್ಮ ಜೊತೆ ಆ ಥರ ನಡೆದುಕೊಂಡಾಗ ಹೇಗನಿಸುತ್ತದೆ ಎಂದು ಕೇಳಿದ್ದಾರೆ. ಮನೆ ಮಂದಿ ಕೂಡ ಗಿಲ್ಲಿ ಮಾಡಿದ್ದು ತಪ್ಪು ಎಂದಿದ್ದಾರೆ.

35
ಕಾವ್ಯಾ ಏನು ಹೇಳಿದ್ರು?

ಸುದೀಪ್ ಪ್ರಶ್ನೆಗೆ ಕಾವ್ಯಾ ಕೂಡ ಹೌದು, ಗಿಲ್ಲಿ ಮಾಡಿದ್ದು ತಪ್ಪು ಎಂದು ಹೇಳಿದ್ದರು. ನಿನ್ನೆಯ ಪ್ರೊಮೋದಲ್ಲಿ ಇದನ್ನ ನೋಡಿದ್ದ ಜನರು ಕಾವ್ಯಾ ಹೀಗೆ ಹೇಳಬಾರದಿದ್ದು, ಇದನ್ನು ನೋಡಿದ್ರೆ ಕಾಂತಾರ ಚಾಪ್ಟರ್ 1ರಲ್ಲಿ ರುಕ್ಮಿಣಿ ವಸಂತ್ ನಟಿಸಿದ ಕನಕವತಿ ಪಾತ್ರದಂತೆ ಕಾಣುತ್ತಿದೆ. ಜೊತೆಗಿದ್ದೇ ಚೂರಿ ಹಾಕಿದ್ರು ಎಂದಿದ್ದಾರೆ.

45
ಕಾವ್ಯಾ ಬೆಂಬಲಕ್ಕೆ ನಿಂತ ಫ್ಯಾನ್ಸ್

ಇನ್ನು ಹಲವು ಫ್ಯಾನ್ಸ್ ಕಾವ್ಯಾ ಬೆಂಬಲಕ್ಕೆ ನಿಂತಿದ್ದಾರೆ. ಕಾವ್ಯ ಮಾಡಿದ್ದು, ತಪ್ಪಲ್ಲ, ನೀವು ನಿಜವನ್ನು ತಿಳಿಯದೇ, ಪೂರ್ತಿ ವಿಡಿಯೋ ನೋಡದೇ ಈ ರೀತಿಯಾಗಿ ಮಾಡೋದು ಸರಿಯಲ್ಲ ಎಂದು ಹೇಳಿದ್ದರು. ಎಲ್ಲರೂ ಗಿಲ್ಲಿ ವಿರುದ್ಧ ಮಾತನಾಡಿದಾಗ ಕಾವ್ಯಾ ಒಬ್ಬಳು ಮಾತ್ರ ಗಿಲ್ಲಿ ಬೆಂಬಲಕ್ಕೆ ನಿಂತಿದ್ದರು ಎಂದು ಹೇಳಿದ್ದಾರೆ.

55
ಕಾವ್ಯಾ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರ?

ಇನ್ನೂ ಕೆಲವು ಅಭಿಮಾನಿಗಳು ಹೇಳುವಂತೆ, ಕಾವ್ಯಾಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನೆಗೆಟಿವ್ ಆಗಿ ತೋರಿಸುತ್ತಿದ್ದಾರಂತೆ. ಸುಮ್ಮನೆ ಕಾವ್ಯಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರಂತೆ. ರಕ್ಷಿತಾ ಸೇರಿ ಮನೆಯವರೆಲ್ಲರೂ ಗಿಲ್ಲಿ ವಿರುದ್ಧ ಮಾತನಾಡಿದಾಗ ಆತನ ಪರ ಸ್ಟ್ಯಾಂಡ್ ತೆಗೆದುಕೊಂಡು ಮಾತನಾಡಿರೋದು ಕಾವ್ಯಾ ಮಾತ್ರ. ಕಾವ್ಯ ಸರಿ ಕಂಡಲ್ಲಿ, ಸರಿ ಹಾಗೂ ತಪ್ಪು ಕಂಡಲ್ಲಿ ತಪ್ಪು ಎಂದೇ ಹೇಳುತ್ತಾಳೆ, ಆಕೆಯದು ತಪ್ಪಿಲ್ಲ ಎಂದು ಕಾವ್ಯಾ ಪರ ಮಾತನಾಡಿದ್ದಾರೆ.

Read more Photos on
click me!

Recommended Stories