BBK 12: ಅಶ್ವಿನಿ ಗೌಡ ಮಾತು ಕೇಳಿಸಿಕೊಂಡು ಪರ ಪರ ಅಂತ ತಲೆ ಕೆರೆದುಕೊಂಡ ರಕ್ಷಿತಾ ಶೆಟ್ಟಿ

Published : Jan 07, 2026, 12:55 PM IST

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಕಿರಿಕ್ ಮುಂದುವರೆದಿದೆ. ಟಾಸ್ಕ್ ಒಂದರಲ್ಲಿ ಅಶ್ವಿನಿ ಆಡಿದ ಅನಿರೀಕ್ಷಿತ ಮಾತುಗಳು ಮತ್ತು ಕ್ಷಮೆ ಕೇಳಿದ್ದು ರಕ್ಷಿತಾರನ್ನು ಗೊಂದಲಕ್ಕೀಡು ಮಾಡಿದೆ. ಇದು ಅಶ್ವಿನಿಯ ಹೊಸ ಆಟದ ತಂತ್ರವೇ ಎಂಬ ಪ್ರಶ್ನೆ ಮೂಡಿದೆ.

PREV
15
ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಮೊದಲ ದಿನದಿಂದಲೂ ಕಿರಿಕ್ ನಡೆಯುತ್ತಲೇ ಇದೆ. ವೀಕೆಂಡ್ ಸಂಚಿಕೆಯಲ್ಲಿ ತಮ್ಮ ನಡುವಿನ ಜಗಳದಲ್ಲಿ ಇಬ್ಬರ ಪಾಲು ಸಮವಾಗಿದೆ ಎಂದು ರಕ್ಷಿತಾ ಹೇಳಿಕೊಂಡಿದ್ದರು. ಈ ವಾರ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಬೇರೆ ಬೇರೆ ತಂಡಗಳಲ್ಲಿ ಆಟವಾಡಿದ್ದಾರೆ. ಟಾಸ್ಕ್ ಸಂದರ್ಭದಲ್ಲಿ ಅಶ್ವಿನಿ ಮಾತು ಕೇಳಿ ರಕ್ಷಿತಾ ಶಾಕ್ ಆಗಿ, ತಲೆ ಕೆರೆದುಕೊಂಡಿದ್ದಾರೆ.

25
ಟಾಸ್ಕ್‌

ಟಾಸ್ಕ್‌ನಲ್ಲಿ ರಾಶಿಕಾ ಶೆಟ್ಟಿ ಮತ್ತು ರಘು ಕಂಬವೊಂದನ್ನು ಹಿಡಿದುಕೊಂಡು ನಿಂತಿರುತ್ತಾರೆ. ಈ ಕಂಬ ಬಿಡುವಂತೆ ಎದುರಾಳಿಗಳು ಮಾಡಬೇಕು. ಈ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರು ರಾಶಿಕಾಗೆ ಎದುರಾಳಿಯಾಗಿರುತ್ತಾರೆ. ಸ್ಪರ್ಧಿಗಳ ನೀರು ಎರಚುವ ಮೂಲಕ ಅಥವಾ ಅವರಿಗೆ ಕೋಪ ಬರುವಂತೆ ಮಾಡಿ ಕಂಬ ಬಿಡುವಂತೆ ಮಾಡಬೇಕು.

35
ರಕ್ಷಿತಾ ಆಶ್ಚರ್ಯ

ಈ ವೇಳೆ ರಾಶಿಕಾ ಶೆಟ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನಿ ಗೌಡ, ಆಟದ ಭರದಲ್ಲಿ ಯಾವುದೇ ವ್ಯಕ್ತಿತ್ವವನ್ನು ಕೆಳಗಿಡಬಾರದು ಎಂದು ಟಾಂಗ್ ನೀಡುತ್ತಾರೆ. ನಂತರ ರಾಶಿಕಾ ಮೇಲೆ ಸಾಬೂನಿನ ನೀರು ಸುರಿಯುವ ಮುನ್ನವೇ ಅಶ್ವಿನಿ ಗೌಡ ಕ್ಷಮೆ ಕೇಳಿ ಆಟ ಆರಂಭಿಸುತ್ತಾರೆ. ಈ ಮಾತುಗಳಿಗೆ ರಕ್ಷಿತಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

45
ಅಶ್ವಿನಿ ಗೌಡ ತಿರುಗೇಟು

ಟ್ರಬಲ್ ಮಾಡಿಕೊಂಡು ಬಂದವರಿಗೆ ಟ್ರಬಲ್ ಮಾಡೋಕೆ ಬರಲ್ಲವಾ? ಈಗ ಇವರಿಗೆ ಟ್ರಬಲ್ ಮಾಡೋದಕ್ಕೆ ಮನಸ್ಸು ಇಲ್ಲವಾ? ಎರಡು ದಿನದಲ್ಲಿ ಒಳ್ಳೆಯವರಾಗಲು ಸಾಧ್ಯವಾ ಎಂದು ಪ್ರಶ್ನೆ ಮಾಡುತ್ತಾ ತಲೆಕೂದಲು ಕೆರೆದುಕೊಳ್ಳುತ್ತಾರೆ. ಕೊನೆ ಕ್ಷಣದಲ್ಲಿ ಸ್ನೇಹ ಬೆಳೆಸೋಣ ಅಂತ ಅಂದ್ಕೊಳ್ಳುತ್ತಿದ್ದೇನೆ ಎಂದು ಅಶ್ವಿನಿ ಗೌಡ ತಿರುಗೇಟು ನೀಡುತ್ತಾರೆ.

ಇದನ್ನೂ ಓದಿ: Bigg Boss Kannada 12: ಟಾಪ್ 5 ಸ್ಪರ್ಧಿಗಳು ಇವರು, ವಿನ್ನರ್ ಯಾರು?.. ಭವಿಷ್ಯ ಹೇಳಿದ ಕಿರಿಕ್ ಕೀರ್ತಿ!

55
ಟಿಕೆಟ್ ಟು ಟಾಪ್ 6 ಟಾಸ್ಕ್

ಈ ವಾರ ಮನೆಯಿಂದ ಹೊರಗೆ ಹೋಗಲು ಧನುಷ್ ಹೊರತುಪಡಿಸಿ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಟಿಕೆಟ್ ಟು ಟಾಪ್ 6 ಟಾಸ್ಕ್ ಆಟವಾಡಲು ಧನುಷ್ ಮತ್ತು ಕಾವ್ಯಾ ಆಯ್ಕೆಯಾಗಿದ್ರೆ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಆಟದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ: ಗಿಲ್ಲಿಗೆ ಕಪ್ ಮಿಸ್ ಆಗೋದು ಗ್ಯಾರಂಟಿನಾ? ಇಷ್ಟು ದೊಡ್ಡ ತಪ್ಪು ಮಾಡ್ಬಿಟ್ರಾ..? ಎಲ್ಲರಿಂದ ಟಾರ್ಗೆಟ್ ಆಗಿರೋ ಗಿಲ್ಲಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories