Rakshitha Shetty mother in Bigg Boss: ಬಿಗ್‌ಬಾಸ್ ಸೀಸನ್ 12ರ ಫ್ಯಾಮಿಲಿ ವೀಕ್‌ನಲ್ಲಿ ರಕ್ಷಿತಾ ಶೆಟ್ಟಿಯವರ ತಾಯಿ ಮನೆಗೆ ಆಗಮಿಸಿದ್ದಾರೆ. ಈ ತಾಯಿ-ಮಗಳ ಬಾಂಧವ್ಯದ ಜೊತೆಗೆ, ರಕ್ಷಿತಾ ತನ್ನ ತಾಯಿಯೊಂದಿಗೆ ವ್ಲಾಗ್ ಮಾಡುವ ಅವಕಾಶವನ್ನೂ ಪಡೆದರು.
ಬಿಗ್‌ಬಾಸ್ ಸೀಸನ್ 12ರಲ್ಲಿ ಫ್ಯಾಮಿಲಿ ವೀಕ್ ಆರಂಭಗೊಂಡಿದೆ. ಮಂಗಳವಾರದ ಸಂಚಿಕೆಯಲ್ಲಿ ರಾಶಿಕಾ, ಸೂರಜ್, ಧನುಷ್ ಕುಟುಂಬದ ಸದಸ್ಯರು ಎಂಟ್ರಿ ಕೊಟ್ಟಿದ್ದರು. ಇದೀಗ ಮನೆಯ ಸ್ಪಾರ್ಕ್ ಅಂತಾ ಕರೆಸಿಕೊಳ್ಳುವ ರಕ್ಷಿತಾ ಶೆಟ್ಟಿಯವರ ತಾಯಿಯ ಆಗಮನವಾಗಿದೆ.
25
ರಕ್ಷಿತಾ ಶೆಟ್ಟಿ ಸಂಪೂರ್ಣ ತದ್ವಿರುದ್ದ
ರಕ್ಷಿತಾ ಶೆಟ್ಟಿಯನ್ನು ಹೊರತುಪಡಿಸಿ ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಮಹಿಳಾ ಸ್ಪರ್ಧಿಗಳು ಕಿರುತೆರೆ ಹಿನ್ನೆಲೆಯಿಂದ ಬಂದ ಕಲಾವಿದರು. ಹಾಗಾಗಿ ಮಹಿಳಾ ಸ್ಪರ್ಧಿಗಳು ತಮ್ಮ ಲುಕ್‌ಗೆ ಆದ್ಯತೆ ನೀಡುತ್ತಾರೆ. ಆದ್ದರಿಂದ ಚೆಂದ ಚೆಂದದ ಉಡುಗೆ ಧರಿಸಿಕೊಂಡು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ರಕ್ಷಿತಾ ಶೆಟ್ಟಿ ಸಂಪೂರ್ಣ ತದ್ವಿರುದ್ದವಾಗಿದ್ದಾರೆ.
35
ಮೇಕಪ್
ರಕ್ಷಿತಾ ಶೆಟ್ಟಿ ಸರಿಯಾಗಿ ತಲೆ ಬಾಚಿಕೊಳ್ಳಲ್ಲ, ಮೇಕಪ್ ಮಾಡಿಕೊಳ್ಳಲ್ಲ ಮತ್ತು ಬ್ರ್ಯಾಂಡೆಡ್ ಡ್ರೆಸ್ ಧರಿಸಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಮತ್ತೊಂದು ಕಡೆ ಇರೋ ಬಟ್ಟೆಗಳನ್ನು ಧರಿಸಿಕೊಂಡು ತಲೆ ಬಾಚಿಕೊಂಡು ಶಿಸ್ತಿನಿಂದ ಇರಬಹುದು. ಆದ್ರೆ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಲುಕ್ ಬಗ್ಗೆ ಕಾಳಜಿ ಇಲ್ಲ. ಆದ್ದರಿಂದ ಮನೆಯಲ್ಲಿರುವಂತೆಯೇ ಬಿಗ್‌ಬಾಸ್ ನಲ್ಲಿಯೂ ಇದ್ದಾರೆ ಎಂಬುವುದು ಸ್ಪರ್ಧಿಗಳ ಮಾತಾಗಿದೆ.
ಬಿಗ್‌ಬಾಸ್ ಮನೆಗೆ ಬರುತ್ತಿದ್ದಂತೆ ರಕ್ಷಿತಾ ಶೆಟ್ಟಿಗೆ ತಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂದಲು ಸಹ ಸರಿ ಮಾಡಿಕೊಳ್ಳಲ್ಲ ಎಂದು ಹೇಳಿ ಬಾಚಣಿಗೆ ಮಾಡಿದ್ದಾರೆ. ಮಕ್ಕಳು ಕೂದಲು ಹರಡಿಕೊಂಡು ಹೇಗೆ ಬೇಕೋ ಹಾಗಿದ್ರೆ ತಾಯಂದಿರಿಗೆ ಖಂಡಿತ ಇಷ್ಟವಾಗಲ್ಲ. ಮನೆಗೆ ಬರುತ್ತಿದ್ದಂತೆ ಮಗಳ ಕೂದಲನ್ನು ತಾಯಿ ಸರಿ ಮಾಡಿದ್ದಾರೆ.
ಇದನ್ನು ನೋಡಿದ ವೀಕ್ಷಕರು ಅಮ್ಮ ಅಂದ್ರೆ ಹಾಗೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಮ್ಮ ಇದ್ಮೇಲೆ ಮಕ್ಕಳು ನೀಟ್ ಆಗಿ ಇರಲೇಬೇಕು ಅಲ್ಲವಾ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಫ್ಯಾಮಿಲಿ ವೀಕ್ ಆಗಿರೋದರಿಂದ ರಕ್ಷಿತಾ ಶೆಟ್ಟಿ ಅವರಿಗೆ ತಾಯಿ ಜೊತೆ ವ್ಲಾಗ್ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಬಿಗ್‌ಬಾಸ್ ಮೊಬೈಲ್ ಕಳುಹಿಸಿದ್ದಾರೆ. ತಾಯಿ ತಂದಿರುವ ಮೀನಿನ ಅಡುಗೆ ಸವಿಯುತ್ತಾ ರಕ್ಷಿತಾ ಶೆಟ್ಟಿ ವ್ಲಾಗ್ ಮಾಡಿದ್ದಾರೆ. ಇತ್ತ ಧ್ರುವಂತ್ ಸಾಷ್ಟಂಗ ನಮಸ್ಕಾರ ಹಾಕಿ ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.