ಅಂದು ನಡೆದ ಘಟನೆ ಬಳಸ್ಕೊಂಡು, ದೇಶ-ವಿದೇಶದಲ್ಲಿ ಉದ್ಯಮ ಮಾಡಿ ಗೆದ್ದ Bigg Boss ಸ್ಪರ್ಧಿ! ಯಾರದು?

Published : Dec 23, 2025, 05:07 PM IST

Bigg Boss Shrutika Arjun: ಇಂದು ಅನೇಕರು ಉದ್ಯಮ ಮಾಡಿ ಗೆದ್ದ ಉದಾಹರಣೆಯೂ ಇದೆ, ಕೆಲವರು ಉದ್ಯಮ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಯೂ ಇದೆ. ಕೆಲವೊಮ್ಮೆ ನಾವು ಏನೂ ಪ್ಲ್ಯಾನ್‌ ಮಾಡದೆ, ಏನೇನೋ ಆಗುವುದುಂಟು. ಅಂತೆಯೇ ಈ ನಟಿ ಕೂಡ ಉದ್ಯಮ ಆರಂಭಿಸಿ, ಇಂದು ದೊಡ್ಡ ಮಟ್ಟದದಲ್ಲಿ ಯಶಸ್ಸು ಪಡೆದಿದ್ದಾರೆ. 

PREV
16
20 ವರ್ಷ ನಟಿಸಲೇ ಇಲ್ಲ

15 ನೇ ವಯಸ್ಸಿಗೆ 2002ರಲ್ಲಿ ಶ್ರುತಿಕಾ ಅರ್ಜುನ್‌ ಅವರು ಸೂರ್ಯ ಅವರ Sri ಎನ್ನುವ ಸಿನಿಮಾಕ್ಕೆ ನಾಯಕಿಯಾದರು. ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದಾದ ಬಳಿಕ ಅವರು 20 ವರ್ಷಗಳ ಬ್ರೇಕ್‌ ತಗೊಂಡು, ತಮಿಳು ರಿಯಾಲಿಟಿ ಶೋ, ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದರು.

26
ಸುಮ್ಮನೆ ಮನೆಯಲ್ಲಿದ್ದರು

23ನೇ ವಯಸ್ಸಿಗೆ ಶ್ರುತಿಕಾ ಅರ್ಜುನ್‌ ಅವರಿಗೆ ಮದುವೆಯಾಗಿ ಮಗು ಕೂಡ ಇತ್ತು. ಅರ್ಜುನ್‌ ಎನ್ನುವ ಉದ್ಯಮಿಯನ್ನು ಪ್ರೀತಿಸಿದ್ದ ಶ್ರುತಿಕಾಗೆ ಮಗ ಹುಟ್ಟಿದ್ದನು. ಒಳ್ಳೆಯ ವಿದ್ಯಾರ್ಥಿಯಾಗಿದ್ದ ಶ್ರುತಿಕಾಗೆ ಗೃಹಿಣಿ ಆಗುವ ಆಸೆ ಇತ್ತು. ಬೇಗ ಬೇಗ ಕೆಲಸ ಮಾಡಿ ಮನೆಯಲ್ಲಿ ಸುಮ್ಮನೆ ಕೂರುತ್ತಿದ್ದ ಶ್ರುತಿಕಾಗೆ, ಪತಿಯೇ ಅವರಿಗೆ ಏನಾದರೂ ಮಾಡು ಎಂದು ಹುರಿದುಂಬಿಸಿದರಂತೆ.

36
ಕಾಂತಿಯುತ ಚರ್ಮ ಬೇಕು

ಫ್ಯಾಷನ್‌ ಡಿಸೈನಿಂಗ್‌ ಓದಿ, ಏನಾದರೂ ಮಾಡಬೇಕು ಎಂದು ಶ್ರುತಿಕಾ ಅಂದುಕೊಂಡಿದ್ದರು. ಮಗ ಕೂಡ ಶಾಲೆಗೆ ಹೋಗುವಷ್ಟು ದೊಡ್ಡವನಾಗಿದ್ದ. ಅವನನ್ನು ಸ್ಕೂಲ್‌ಗೆ ಬಿಡಲು ಹೋಗುವಾಗ, ಉಳಿದ ತಾಯಂದಿರು ಶ್ರುತಿಕಾರನ್ನು ನೋಡಿ ನಮಗೂ ನಿಮ್ಮ ರೀತಿ ಕಾಂತಿಯುತ ಚರ್ಮ ಬೇಕು. ಟಿಪ್ಸ್‌ ಕೊಡಿ ಎಂದು ಕೇಳುತ್ತಿದ್ದರು. ಆಗ ಶ್ರುತಿಕಾ ತಾವು ಮನೆಯಲ್ಲಿ ತಯಾರಿಸಿಕೊಂಡ ಪೇಸ್ಟ್‌, ಪೌಡರ್‌ಗಳನ್ನು ಸ್ವಲ್ಪ ಸ್ವಲ್ಪ ಕೊಡುತ್ತ ಬಂದಿದ್ದರು.

46
ಕಾಂತಿಯುತ ಚರ್ಮದ ರಹಸ್ಯ ಏನು?

ಶ್ರುತಿಕಾ ಅವರು 23 ವರ್ಷದವರೆಗೂ ತಾಯಿಯ ಭಯದಿಂದ ಡಯೆಟ್‌ ಮಾಡುತ್ತ ಬಂದಿದ್ದರು. ಪ್ರತಿದಿನ ಅವರು ಹಾಲು, ಒಂದು ರೀತಿಯ ಜ್ಯೂಸ್‌ ಕುಡಿಯಲೇಬೇಕಿತ್ತು. ಹೀಗಾಗಿ ಇವರ ಚರ್ಮ ಕೂಡ ಚೆನ್ನಾಗಿ ಆಗಿತ್ತು. ಬೀಟ್ರೂಟ್‌, ಅರಿಷಿಣ, ಹೆಸರುಕಾಳು, ಆಲೂವೆರಾ, ಕಡಲೆಹಿಟ್ಟು ಮುಂತಾದವುಗಳನ್ನು ಬಳಸಿ ಅವರು ಚರ್ಮದ ಆರೈಕೆ ಮಾಡುತ್ತಿದ್ದರು.

56
ಶ್ರುತಿಕಾ ಸಕ್ಸಸ್‌ಫುಲ್‌

ಇವುಗಳನ್ನು ಬಳಸಿ ಅವರು ಯಾಕೆ ಉದ್ಯೋಗ ಮಾಡಬಾರದು ಎಂದು ಸೌಂದರ್ಯಯುತ ಉತ್ಪನ್ನಗಳನ್ನು ಮಾಡಿ, ಮಾರಾಟ ಮಾಡಲು ಆರಂಭಿಸಿದರು. ಆ ಪ್ರೊಡಕ್ಟ್‌ ಈಗ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದು, ಇಂದು ದೇಶ-ವಿದೇಶಗಳಲ್ಲಿ ಮಾರಾಟ ಆಗುವುದು. ಇಂದು ಶ್ರುತಿಕಾ ಸಕ್ಸಸ್‌ಫುಲ್‌ ಆಗಿದ್ದಾರೆ.

66
ಮತ್ತೆ ನಟಿಸೋದಿಲ್ಲ

ಶ್ರುತಿಕಾ ಅರ್ಜುನ್‌ ಅವರಿಗೆ ನಟನೆ ಮಾಡಲು ಇಷ್ಟವೇ ಇಲ್ಲವಂತೆ. ನಾನು ಮಾಡಿರುವ ಸಿನಿಮಾಗಳೆಲ್ಲವೂ ಸೋತಿವೆ, ಮತ್ತೆ ನಟನೆಗೆ ಬರಲು ಇಷ್ಟವೇ ಇಲ್ಲ, ಉದ್ಯಮದಲ್ಲಿಯೇ ನಾನು ಬ್ಯುಸಿ ಆಗಿದ್ದೇನೆ ಎಂದು ಅವರು ಹೇಳುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories