ವಿವಾದಗಳಿಂದಲೇ ಖ್ಯಾತರಾಗಿದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮೂಲಕ ಮತ್ತೆ ಜನಪ್ರಿಯತೆ ಗಳಿಸಿದ್ದರು. ಇದೀಗ ಚೀನಾಕ್ಕೆ ಹಾರಿದ್ದು, ಅಲ್ಲಿ ಚೀನಿ ಯುವತಿಯೊಂದಿಗೆ ಕಾಣಿಸಿಕೊಂಡು ಡ್ರೋನ್ ಬಗ್ಗೆ ಪಾಠ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್ (Drone Pratap) ಎರಡು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ ಹೆಸರು. ಡ್ರೋನ್ ತಯಾರಿಸುವುದಾಗಿ ಹೇಳಿ ಘಟಾನುಘಟಿಗಳು, ದಿಗ್ಗಜರನ್ನೇ ಯಾಮಾರಿಸಿ ಸದ್ದು ಮಾಡಿದ್ದರು ಡ್ರೋನ್ ಪ್ರತಾಪ್. ತಾವೊಬ್ಬ ಸೈಂಟಿಸ್ಟ್ ಎಂದು ಹೇಳಿ, ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಛಾನ್ಸ್ ಗಿಟ್ಟಿಸಿಕೊಂಡು, ತಮ್ಮ ಬಡತನದ ಕಟ್ಟುಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಕೊನೆಗೆ ತಗ್ಲಾಕ್ಕೊಂಡು ಜೈಲಿಗೂ ಹೋಗಿ ಬಂದರು.
26
ಕಾಂಟ್ರವರ್ಸಿಯಿಂದ ಬಿಗ್ಬಾಸ್ಗೆ ಅವಕಾಶ
ಇಷ್ಟು ಕಾಂಟ್ರವರ್ಸಿಯಾದ ಬಳಿಕ ಬಿಗ್ಬಾಸ್ನಲ್ಲಿ ಅವಕಾಶ ಸಿಗದಿದ್ದರೆ ಹೇಗೆ? ಬಿಗ್ಬಾಸ್ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಬಿಗ್ಬಾಸ್ ಡ್ರೋನ್ ಪ್ರತಾಪ್ (Bigg Boss Drone Pratap) ಆದ ಪ್ರತಾಪ್, ಕೊನೆಗೆ ಸೆಲೆಬ್ರಿಟಿಯಾದರು. ವಿವಿಧ ರಿಯಾಲಿಟಿ ಷೋಗಳಲ್ಲಿ, ವಿವಿಧ ಫಂಕ್ಷನ್ಗಳಲ್ಲಿ ಛಾನ್ಸ್ ಗಿಟ್ಟಿಸಿಕೊಂಡು ಅಭಿಮಾನಿಗಳ ಸಂಖ್ಯೆಯನ್ನು ಏರಿಸಿಕೊಂಡರು. ಮಾತಿನಲ್ಲಿಯೇ ಎಂಥವರನ್ನೂ ಮೋಡಿ ಮಾಡುವ ತಾಕತ್ತು ಮೊದಲಿನಿಂದಲೂ ಇರುವ ಹಿನ್ನೆಲೆಯಲ್ಲಿ ತಮ್ಮ ಸೊಗಸಾದ ಮಾತುಗಳಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸ್ಥಾಪಿಸಿಕೊಂಡಿರುವ ಡ್ರೋನ್ ಪ್ರತಾಪ್ ಈಗ ಚೀನಾಕ್ಕೆ ಹಾರಿದ್ದಾರೆ.
36
ಚೀನಾ ಬೆಡಗಿ ಜೊತೆ ಡ್ಯುಯೆಟ್
ಚೀನಾದಲ್ಲಿ ಚೀನಿ ಬೆಡಗಿಯ ಜೊತೆ ಡ್ಯುಯೆಟ್ ಹಾಡುತ್ತಾ ಅದರ ವಿಡಿಯೋ ಮಾಡಿರುವ ಡ್ರೋನ್ ಪ್ರತಾಪ್, ಅಲ್ಲಿರುವ ಕೆಲವು ದಿಗ್ಗಜರಿಗೆ ಡ್ರೋನ್ ಬಗ್ಗೆ ಪರಿಚಯಿಸುತ್ತಿದ್ದಾರೆ. ಕಾರಿನಲ್ಲಿ ಚೀನಾದ ಕೆಲವು ಮುಖಂಡರ ಜೊತೆ ಡ್ರೈವ್ ಮಾಡುತ್ತಾ ಅವರ ಪರಿಚಯವನ್ನೂ ಮಾಡಿಸಿದ್ದಾರೆ ಡ್ರೋನ್ ಪ್ರತಾಪ್.
ಅದಾದ ಬಳಿಕ ಒಂದು ವಿಡಿಯೋದಲ್ಲಿ ಡ್ರೋನ್ ಇರುವುದನ್ನು ನೋಡಬಹುದು. ಇದನ್ನು ನೋಡಿದರೆ ಅಲ್ಲಿ ಡ್ರೋನ್ ಬಗ್ಗೆ ಪಾಠ ಮಾಡಲು ಹೋಗಿದ್ದಾರೆ ಎಂದು ತಿಳಿಯುತ್ತದೆ.
56
ಮರುಕಳಿಸದಿರಲಿ ಎನ್ನೋ ಹಾರೈಕೆ
ಯಾವ್ಯಾವುದೋ ಕಂಪೆನಿಯ ಡ್ರೋನ್ ಪಾರ್ಟ್ಗಳನ್ನು ತಂದು ತಾವು ತಯಾರು ಮಾಡಿದ್ದು ಎಂದು ಹೇಳಿ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದ ಡ್ರೋನ್, ಅದರಿಂದ ಪಾಠ ಕಲಿತು ಇದೀಗ ಒಳ್ಳೆಯ ರೀತಿಯಲ್ಲಿ ನಡೆಯಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.
66
ಸಾಕಷ್ಟು ಮೆಚ್ಚುಗೆ
ಇವರ ವಿಡಿಯೋಗೆ ಇದಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗೆ ಬೆಳವಣಿಗೆ ಸಾಗಲಿ ಎಂದು ಹಲವರು ಆಶೀರ್ವದಿಸುತ್ತಿದ್ದಾರೆ. ಆದರೆ ಹಿಂದೆ ಮಾಡಿದ ತಪ್ಪು ಮತ್ತೆ ಮಾಡಬೇಡ, ಒಮ್ಮೆ ಹೋಗಿರೋ ಮಾನ ಬಿಗ್ಬಾಸ್ನಿಂದಾಗಿ ವಾಪಸ್ ಬಂದಿದೆ, ಮತ್ತದೇ ತಪ್ಪು ಮಾಡಬೇಡ ಎಂದು ಅವರ ಅಭಿಮಾನಿಗಳು ಕಮೆಂಟ್ನಲ್ಲಿ ತಿಳಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.