BBK 12: ಜಿದ್ದಾಜಿದ್ದಿನ ಆಟದಲ್ಲಿ ಬಯಲಾಯ್ತು ಗಿಲ್ಲಿ ಮೋಸದಾಟ; ಚೀಪ್ ಗಿಮಿಕ್ ಎಂದ ವೀಕ್ಷಕರು

Published : Dec 03, 2025, 09:13 AM IST

ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ನಡೆದ ಬಾಲ್ ಸಂಗ್ರಹಿಸುವ ಟಾಸ್ಕ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಆಟದ ವೇಳೆ ಗಿಲ್ಲಿ ನಟ, ಪ್ರತಿಸ್ಪರ್ಧಿ ರಾಶಿಕಾ ಅವರ ಕಾಲೆಳೆದು ಬೀಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ಮನೆಯೊಳಗೆ ಮತ್ತು ವೀಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

PREV
16
ರಣರೋಚಕ ಆಟ

ಕ್ಯಾಪ್ಟನ್ ಪಟ್ಟಕ್ಕಾಗಿ ಜೋಡಿಗಳ ನಡುವೆ ರಣರೋಚಕ ಆಟ ಶುರುವಾಗಿದೆ. ಸ್ಪರ್ಧಿಗಳು ತಾವು ಗೆಲ್ಲೋದಕ್ಕಿಂತ ಬೇರೆ ಜೋಡಿಯನ್ನು ಸೋಲಿಸಲು ರಣತಂತ್ರ ರಚಿಸುತ್ತಿದ್ದಾರೆ. ಈ ಜಿದ್ದಾಜಿದ್ದಿನ ಆಟದಲ್ಲಿ ರಕ್ಷಿತಾ ಶೆಟ್ಟಿ ಮತ್ತು ಮಾಳು ತಮ್ಮ ಆಟ ಮುಂದುವರಿಸಿದ್ದಾರೆ.

26
ಗಿಲ್ಲಿಯ ಮೋಸದಾಟ?

ಸದ್ಯ ಮನೆಯಲ್ಲಿ ರಚನೆಯಾಗಿರುವ ಜೋಡಿಗಳಿಗೆ ಬಿಗ್‌ಬಾಸ್ ಬಾಲ್ ಟಾಸ್ಕ್ ನೀಡಿದ್ದಾರೆ. ಅತಿಹೆಚ್ಚು ಬಾಲ್ ಸಂಗ್ರಹಿಸುವ ಜೋಡಿ ಈ ಆಟವನ್ನು ಗೆಲ್ಲುತ್ತದೆ. ಹಾಗಾಗಿ ಜೋಡಿಗಳು ಹೇಗಾದ್ರು ಮಾಡಿ ಆಟ ಗೆಲ್ಲಬೇಕೆಂದು ಪಣ ತೊಟ್ಟು ಕಣಕ್ಕಿಳಿದಿದ್ದಾರೆ. ಗಿಲ್ಲಿ-ಕಾವ್ಯಾ ಮತ್ತು ಸೂರಜ್-ರಾಶಿಕಾ ಜೋಡಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಗಿಲ್ಲಿಯ ಮೋಸದಾಟ ವೀಕ್ಷಕರ ಮುಂದೆ ಬಯಲಾಗಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

36
ಸೂರಜ್-ರಾಶಿಕಾ

ಜೋಡಿ ರಚನೆಯಾಗುತ್ತಿದ್ದಂತೆ ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಬೇಕೆಂದು ಸೂರಜ್-ರಾಶಿಕಾ ಮಾತನಾಡಿಕೊಂಡಿದ್ದಾರೆ. ಯಾರೇ ವಿನ್ ಆದ್ರೂ ಮೊದಲು ನಮ್ಮನ್ನು ಆಟದಿಂದ ಹೊರಗಿಡುತ್ತಾರೆ. ಹಾಗಾಗಿ ನಾವು ಆಟ ಗೆಲ್ಲಬೇಕು ಎಂದು ಕಾವ್ಯಾಗೆ ಗಿಲ್ಲಿ ನಟ ಹೇಳಿದ್ದಾರೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸ್ಪರ್ಧಿಗಳ ನಡುವೆ ಆಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಗಮನಿಸಬಹುದಾಗಿದೆ.

46
ಬಾಲ್ ಸಂಗ್ರಹ

ಇಂದಿನ ಆಟವನ್ನು ಯಾರು ಗೆದ್ದರು, ಸೋತ್ರು ಎಂಬುದನ್ನು ಪ್ರೋಮೋದಲ್ಲಿ ತೋರಿಸಿಲ್ಲ. ಆದ್ರೆ ವೀಕ್ಷಕರು ಜಿಯೋಹಾಟ್‌ಸ್ಟಾರ್‌ನಲ್ಲಿ 24*7 ಲೈವ್ ಆಗಿ ಶೋ ನೋಡಿದ್ದು, ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೋಡಿ ಸ್ಪರ್ಧಿಗಳ ಒಂದೊಂದು ಕಾಲು ಸೇರಿಸಿ ಕಟ್ಟಲಾಗಿರುತ್ತದೆ. ಬಾಕ್ಸ್‌ನಲ್ಲಿರುವ ಚೆಂಡುಗಳನ್ನು ಸಂಗ್ರಹಿಸುವ ಟಾಸ್ಕ್ ಇದಾಗಿತ್ತು. ಕಾಲು ಕಟ್ಟಿದ್ದರಿಂದ ಕುಂಟುತ್ತಲೇ ಸ್ಪರ್ಧಿಗಲು ಬಾಲ್ ಸಂಗ್ರಹ ಮಾಡುತ್ತಿದ್ದರು.

56
ರಾಶಿಕಾ ಕಾಲೆಳೆದ ಗಿಲ್ಲಿ?

ಬಾಲ್‌ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕೆಳಗೆ ಬಿದ್ದ ಗಿಲ್ಲಿ ನಟ, ತನ್ನ ಮುಂದಿರುವ ರಾಶಿಕಾ ಅವರ ಕಾಲುಗಳಿಗೆ ಕೈಗಳನ್ನು ಅಡ್ಡತಂದು ಬೀಳಿಸುತ್ತಾರೆ. ಅದೇ ಕ್ಷಣದಲ್ಲಿ ಗಿಲ್ಲಿ ಈ ರೀತಿಯೆಲ್ಲಾ ಮಾಡಬಾರದು ಕಾವ್ಯಾ ಶೈವ ಹೇಳುತ್ತಾರೆ. ಗಿಲ್ಲಿ ಅವರ ಈ ಆಟವನ್ನು ನೆಟ್ಟಿಗರು ಚೀಪ್ ಗಿಮಿಕ್, ಮೋಸ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಕೊನೆಗೂ ವಂಶದ ಕುಡಿ ಬೆನ್ನಿಗೆ ಚೂರಿ ಇರಿದ ಗಿಲ್ಲಿ ನಟ; ಕಾರಣ ಕೊಟ್ಟಿದ್ದು ಸಮಾಧಾನ ಆಯ್ತಾ?

66
ಆಟದ ವಿಡಿಯೋ ವೈರಲ್

ವೈರಲ್ ಆಗಿರುವ ಮತ್ತೊಂದು ಕ್ಲಿಪ್‌ನಲ್ಲಿ, ಅಶ್ವಿನಿ ಗೌಡ ಮತ್ತು ರಘು ಮುಂದೆ ರಾಶಿಕಾಳನ್ನು ಗಿಲ್ಲಿ ಬೀಳಿಸಿದ. ಇದರಿಂದ ರಾಶಿಕಾ ಮೂಗಿಗೆ ಗಾಯವಾಯ್ತು ಎಂದು ಸೂರಜ್ ಹೇಳುತ್ತಾರೆ. ಗಿಲ್ಲಿ ಯಾಕೆ ಹೀಗೆ ಮಾಡ್ತಾನೆ ಎಂದು ಅಶ್ವಿನಿ ಗೌಡ ಬೇಸರ ವ್ಯಕ್ತಪಡಿಸುತ್ತಾರೆ. ಮತ್ತೊಂದು ಕ್ಲಿಪ್‌ನಲ್ಲಿ ಗಿಲ್ಲಿಯೇ ರಾಶಿಕಾಳ ಕಾಲೆಳೆದ ಎಂದು ರಜತ್ ಸಹ ಹೇಳುತ್ತಾರೆ. ಕಾಲೆಳೆದಿಲ್ಲ, ಕಾಲು ಹಿಡಿಯೋಕೆ ಬಂದೆ ಎಂದು ಗಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: BBK 12: ಬಿಗ್‌ಬಾಸ್‌ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌: ಜೋಡಿ ಆಟದಲ್ಲಿ ಗಾಯಗೊಂಡ ಸ್ಪರ್ಧಿ

Read more Photos on
click me!

Recommended Stories