ಕೊನೆಗೂ ವಂಶದ ಕುಡಿ ಬೆನ್ನಿಗೆ ಚೂರಿ ಇರಿದ ಗಿಲ್ಲಿ ನಟ; ಕಾರಣ ಕೊಟ್ಟಿದ್ದು ಸಮಾಧಾನ ಆಯ್ತಾ?

Published : Dec 03, 2025, 08:24 AM IST

ಗಿಲ್ಲಿ ನಟ ಈ ವಾರ ರಕ್ಷಿತಾ ಶೆಟ್ಟಿ ಅವರನ್ನು ನಾಮಿನೇಟ್ ಮಾಡಿ, ಹಿಂದಿನ ಘಟನೆಗಳನ್ನು ಆಧರಿಸಿ ಕಾರಣಗಳನ್ನು ನೀಡಿದ್ದಾರೆ. ಈ ನಾಮಿನೇಷನ್ ಪ್ರಕ್ರಿಯೆಯು ಮನೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಂತಿಮವಾಗಿ ರಕ್ಷಿತಾ ಸೇರಿದಂತೆ ಒಂಬತ್ತು ಸ್ಪರ್ಧಿಗಳು ಈ ವಾರ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ.

PREV
15
ರಕ್ಷಿತಾ ಶೆಟ್ಟಿ

ಎರಡು ವಾರಗಳಿಂದ ಗಿಲ್ಲಿ ನಟ ಅವರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದ್ದರು. ಈ ವಾರ ರಕ್ಷಿತಾ ಶೆಟ್ಟಿ ಅವರನ್ನು ನಾಮಿನೇಟ್ ಮಾಡಿರುವ ಗಿಲ್ಲಿ ನಟ ಕೆಲವು ಕಾರಣಗಳನ್ನು ನೀಡಿದ್ದಾರೆ. ಈ ಕಾರಣಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

25
ಕಾರಣ

ಈ ಹಿಂದೆ ಕೇವಲ ಜಾನ್ವಿ ಅವರ ಹೇಳಿಕೆಯನ್ನಾಧರಿಸಿ ನನ್ನನ್ನು ನಾಮಿನೇಟ್ ಮಾಡಿದೆ. ಈ ಸಂದರ್ಭದಲ್ಲಿ ನೀನು ಇರಲೇ ಇಲ್ಲ. ನಾಮಿನೇಟ್ ಮಾಡಿದ್ಮೇಲೆ ಕಾರಣ ಕೊಡಲು ಬರಲ್ಲ. ಮೊದಲು ರಘು, ನಂತರ ನನ್ನನ್ನು ನಾಮಿನೇಟ್ ಮಾಡಿದೆ. ಆನಂತರ ನಾನು ಹೇಳಿದ ಸತ್ಯ ಆಗುತ್ತೆ ಅಂತ ಮಾಳು ಅವರನ್ನು ಸೇವ್ ಮಾಡೋಕೆ ಹೋದೆ ಎಂದು ಗಿಲ್ಲಿ ನಟ ಹೇಳುತ್ತಾರೆ.

35
ಅಭಿಪ್ರಾಯ

ನೀನು ಸಹ ಅಡುಗೆಮನೆಯಿಂದ ಹೊರಗೆ ಬರೋದೆ ಇಲ್ಲ. ಯಾವುದೇ ಕೆಲಸಕ್ಕೆ ಹಾಕಿದ್ರೂ ಅಡುಗೆಮನೆಯಲ್ಲಿ ಬಂದು ನಿಲ್ಲತ್ತೀಯಾ? ಯಾಕೆಂದ್ರೆ ಎಲ್ಲರೂ ಅಲ್ಲಿಗೆ ಬರುತ್ತಾರೆ ಅನ್ನೋದು ನಿನ್ನ ಲೆಕ್ಕಚಾರ ಎಂದು ಗಿಲ್ಲಿ ನಟ ಹೇಳುತ್ತಾರೆ. ಈ ಎಲ್ಲಾ ಕಾರಣಗಳಿಗೆ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ, ಅದು ನಿಮ್ಮ ಅಭಿಪ್ರಾಯ. ಅಲ್ಲಿರೋದು ನನ್ನ ಅಭಿಪ್ರಾಯ ಎಂದು ಹೇಳಿ ಮಾತು ಮುಗಿಸುತ್ತಾರೆ.

45
ಸೂರಜ್ ಆಕ್ರೋಶ

ಎರಡನೇಯದಾಗಿ ರಾಶಿಕಾ ಅವರನ್ನು ಗಿಲ್ಲಿ ನಟ ನಾಮಿನೇಟ್ ಮಾಡುತ್ತಾರೆ. ಒಬ್ಬರ ಜೊತೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತೀರಿ ಎಂಬ ಕಾರಣವನ್ನು ನೀಡುತ್ತಾರೆ. ಗಿಲ್ಲಿ ನಟ ನೀಡಿದ ಕಾರಣಗಳಿಗೆ ಸೂರಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಮಿನೇಟ್ ಮಾಡಿದಾಗ ನನ್ನ ವಿಷಯ ಮಾತನಾಡಿದ್ದು ತಪ್ಪೆಂದು ಸೂರಜ್ ಹೇಳುತ್ತಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟನ ಆಟದ ವೈಖರಿ ಅಸಲಿಯೋ? ನಕಲಿಯೋ? ಗೌರವ್ ಶೆಟ್ಟಿ ಮಾತು

55
ಯಾರೆಲ್ಲಾ ನಾಮಿನೇಟ್?

ಅಂತಿಮವಾಗಿ ಈ ವಾರ ಮನೆಯಿಂದ ಹೊರಗೆ ಹೋಗಲು ರಾಶಿಕಾ ಶೆಟ್ಟಿ, ಧ್ರುವಂತ್, ಮಾಳು, ಸೂರಜ್, ಸ್ಪಂದನಾ, ಅಭಿಷೇಕ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ನಾಮಿನೇಟ್ ಆಗಿದ್ದಾರೆ. ರಘು, ಅಶ್ವಿನಿ ಗೌಡ, ಧನುಷ್ ಸೇವ್ ಆಗಿದ್ದಾರೆ. ವೈಲ್ಡ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಮತ್ತು  ರಜತ್ ಸಹ ಸೇವ್ ಆಗಿದ್ದಾರೆ.

ಇದನ್ನೂ ಓದಿ: Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories